ನೂತನ ಜಿಲ್ಲೆಗೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರಿಟ್ಟ ಆಂಧ್ರ ಪ್ರದೇಶ ಸರ್ಕಾರ ಅಭಿನಂದನೆ ಸಲ್ಲಿಸಿದ ವರ್ಲ್ಡ್ ದಲಿತ ಆರ್ಗನೈಸೇಷನ್(World dalith organization).
ಬೆಂಗಳೂರು_ಕಳೆದ ಏಪ್ರಿಲ್ 4ರಂದು ಆಂಧ್ರಪ್ರದೇಶ ರಾಜ್ಯ ತನ್ನ 13 ಜಿಲ್ಲೆಗಳನ್ನು ಪುನರಚಿಸಿ ನೂತನವಾಗಿ 13 ಹೊಸ ಜಿಲ್ಲೆಗಳನ್ನು ರಚಿಸಿದೆ. ಅದರಲ್ಲಿ ಪೂರ್ವ ಗೋದಾವರಿ ಜಿಲ್ಲೆಯನ್ನು ವಿಭಜಿಸಿ ಆಂಧ್ರ ಪ್ರದೇಶ ಸರ್ಕಾರ ಹೊಸ ಜಿಲ್ಲೆ ರಚಿಸಿ ಅದಕ್ಕೆ “ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ” (DR B.R AMBEDKAR KONESEEMA DISTRICT)ಎಂದು ಹೆಸರಿಟ್ಟಿದೆ. ಈ ಸಂಬಂಧ ಇದೇ ಮೇ 18 ರಂದು ಆಂಧ್ರಪ್ರದೇಶ ಸರ್ಕಾರ ನೋಟಿಫಿಕೇಶನ್ ಕೂಡ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಹೊಸ ಜಿಲ್ಲೆಗೆ ಬಾಬಾಸಾಹೇಬ್ ಅಂಬೇಡ್ಕರ್ ರ ಹೆಸರಿರಿಸಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ ರವರ ನಡೆಗೆ ದೇಶದ ಕೋಟ್ಯಂತರ ಅಂಬೇಡ್ಕರ್ ಅಭಿಮಾನಿಗಳಿಗೆ ತೀವ್ರ ಸಂತಸ ಉಂಟುಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ವರ್ಲ್ಡ್ ದಲಿತ ಆರ್ಗನೈಸೇಷನ್ ನ (WORLD DALIT ORGANIZATION)ಕರ್ನಾಟಕ ರಾಜ್ಯ ಅಧ್ಯಕ್ಷರಾದ(KARNATAKA STATE PRESIDENT) ಡಾ.ಲೋಹಿತ್ ಕುಮಾರ್ ರವರು ಇದೆ ಸಂದರ್ಭದಲ್ಲಿ ಅಂದ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಡಾ. ಲೋಹಿತ್ ಕುಮಾರ್ ರವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಜಿಲ್ಲೆಗೆ ಹೆಸರಿಡುವ ಮೂಲಕ ಅಂಬೇಡ್ಕರ್ ಅವರ ಹೆಸರಿಗೆ ಮತ್ತಷ್ಟು ಗೌರವ
ಸಮರ್ಪಿಸಿರುವ ಜಗನ್ ಮೋಹನ್ ರೆಡ್ಡಿರವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಐತಿಹಾಸಿಕವಾಗಿ ಜಿಲ್ಲೆಗೆ ಹೆಸರನ್ನು ನಾಮಕರಣ ಗೊಳಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಮೋಹನ್ ರೆಡ್ಡಿ ರವರಿಗೆ ವರ್ಲ್ಡ್ ದಲಿತ ಆರ್ಗನೈಸೇಷನ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.