ದಿನ ಭವಿಷ್ಯ: ಈ ರಾಶಿಯವರ ಸಂಗಾತಿಯೊಂದಿಗೆ ಮನಸ್ತಾಪ ಸಾಧ್ಯತೆ

ಮೇಷ – ಸಾತ್ವಿಕ ನಡವಳಿಕೆ ರೂಢಿಸಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸಮಸ್ಯೆಗಳು ಪರಿಹಾರದತ್ತ ಸಾಗಿ, ನೆಮ್ಮದಿ ಬರುತ್ತದೆ. ನಿಮಗೆ ಪ್ರಾಣ ಸಂಕಟ. ಇತ್ತಲಾಗಿ ಕೂಡಲೂ ಅಲ್ಲ ಬಿಡಲೂ ಅಲ್ಲ.

ವೃಷಭ – ಈ ದಿನ ನಿಮ್ಮ ಸ್ನೇಹಿತರು ನಿಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ರೆ ಖಂಡಿತ ತಕ್ಕ ರೀತಿಯಲ್ಲಿ ಉತ್ತರ ನೀಡಿರಿ. ಮಕ್ಕಳಿಂದ ತೊಂದರೆ ಎದುರಾಗಲಿದೆ.

ಮಿಥುನ – ಇಂದು ವಧು-ವರರನ್ನು ಹಣ್ಣು ಹಂಪಲ ಇಟ್ಟು ನೋಡಿ ಹೋಗುತ್ತಾರೆ, ಆದರೆ ಮದುವೆ ನಿರ್ಧಾರ ಹೇಳುತ್ತಿಲ್ಲ ಎಂಬ ಕೊರಗು. ನಿಮ್ಮ ಶತ್ರುಗಳು ತುಂಬಾ ಶಕ್ತಿಶಾಲಿ, ಏಕಾಂಗಿ ಓಡಾಟ ಬೇಡ.

ಕಟಕ – ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ. ಮಕ್ಕಳಿಗೆ ವಾಹನ ನೀಡಬೇಡಿ
ಅಪಘಾತವಾಗಬಹುದು.

ಸಿಂಹ – ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಇಂದು ರಾತ್ರಿ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ

ಕನ್ಯಾ – ಈ ದಿನ ನಿಮ್ಮ ಹಿತ ಶತ್ರುಗಳನ್ನ ವಿಶ್ವಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಂದಿನ ನಿಮ್ಮ ಕೆಲಸ ಕಾರ್ಯಗಳು ಏನೇ ಇದ್ದರೂ ಸಹ ಸಾಕಷ್ಟು ವೇಗ ಪಡೆಯಲಿದೆ.

ತುಲಾ – ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬಂದೀತು. ಇಚ್ಛಿತ ಸ್ಥಾನ ಪ್ರಾಪ್ತಿಯಿಂದ ವಂಚಿತರಾಗುವ ಭಯ. ಪ್ರಯಾಣ ಕಡಿಮೆ ಮಾಡಿರಿ. ಉದರ ಸಂಬಂಧಿ ತೊಂದರೆ ಬಂದೀತು.

ವೃಶ್ಚಿಕ – ನಿಮ್ಮ ಕೆಲಸದ ವಿಷ್ಯದ ಕುರಿತು ಅನಗತ್ಯ ಚರ್ಚೆ ಆಗಲಿದೆ. ಹಾಗೆಯೇ ಬರೀ ಸುಳ್ಳು ಸುದ್ದಿಗಳಿಂದ ಕೆಲವೊಂದಿಷ್ಟು ವ್ಯಾಜ್ಯಗಳು ಎದುರಿಸುವ ಸಮಸ್ಯೆ ನಿಮಗೆ ಬರಲಿದೆ.

ಧನುಸ್ಸು – ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕೃಷಿಕರು ಎಚ್ಚರವಾಗಿರಬೇಕು, ಸ್ತ್ರೀಯರಿಂದ ವಿಶೇಷ ಉಪದೇಶ. ಯುವಕರು ತಮ್ಮ ಪ್ರೀತಿ ವಿಷಯದಲ್ಲಿ ಹಿನ್ನಡೆ ಅನುಭವ ಆಗಲಿದೆ.

ಮಕರ – ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ. ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೃಷಿಕರಿಗೆ ಪಕ್ಕದ ಜಮೀನು ಖರೀದಿಸುವ ಅವಕಾಶ ಒದಗಿ ಬರುವ ಸಂಭವ.

ಕುಂಭ – ಇಂದು ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ನಿಮ್ಮ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು

ಮೀನ – ಇಂದು ನೀವು ಉಚಿತ ಸಮಯವನ್ನು ಬಳಸುತ್ತೀರಿ ಮಾತು ಕಳೆದ ಸಮಯದಲ್ಲಿ ಪೂರ್ಣಗೊಳ್ಳದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version