ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಮಕೂರಿನ ಭೂಮಿಕಾ ರಾಜ್ಯಕ್ಕೆ ಟಾಪರ್.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯ   ಭೂಮಿಕಾ ರಾಜ್ಯಕ್ಕೆ ಟಾಪರ್.

ತುಮಕೂರು- ರಾಜ್ಯದಾದ್ಯಂತ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾ. ಹುಳಿಯಾರು ಹೋಬಳಿ ಯಳನಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಭೂಮಿಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೊದಲಿಗಳಾಗಿ ಕೀರ್ತಿ ಪಡೆದಿದ್ದಾಳೆ.

 

ಕನ್ನಡ ಮಾಧ್ಯಮದ ಶಾಲೆಯಲ್ಲಿ ವ್ಯಾಸಂಗ ಮಾಡಿದ ಭೂಮಿಕ ಎಲ್ಲ ವಿಷಯಗಳಲ್ಲೂ ಪೂರ್ಣ ಅಂಕ ಪಡೆಯುವುದರ ಮೂಲಕ ಶಾಲೆಗೆ ಶಿಕ್ಷಕರಿಗೆ ಹಾಗೂ ತಮ್ಮ ಪೋಷಕರಿಗೆ ಕೀರ್ತಿ ತಂದಿದ್ದಾಳೆ.

 

ಇನ್ನು ಭೂಮಿಕಾ ಚಿ.ನಾ.ಹಳ್ಳಿ ತಾಲ್ಲೋಕಿನ ಬನ್ನಿಕೆರೆ ನಿವಾಸಿ ರವೀಂದ್ರನಾಥ್ ಲಾವಣ್ಯ ರವರ ಪುತ್ರಿಯಾಗಿದ್ದು, ತಮನದೆ ರವೀಂದ್ರನಾಥ್ ಕನ್ನಡಭಾಷಾ ಶಿಕ್ಷಕರಾಗಿದ್ದು, ತಾಯಿ ಲಾವಣ್ಯ ಗೃಹಿಣಿಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version