ಕೊರೊನಾ ದಿoದ ಮೃತಪಟ್ಟ ಮಹಿಳೆ ಅಂತ್ಯಸಂಸ್ಕಾರ ನೆರವೇರಿಸಿದ ತುಮಕೂರು ತಹಸೀಲ್ದಾರ್ ಮೋಹನ್ ಕುಮಾರ್.

 

ರಾಜ್ಯದ್ಯಂತ ಕೊರೊನಾ ಸೋಂಕು ತೀವ್ರಗತಿಯಲ್ಲಿ ಪಸರಿಸುತ್ತಾ ದಿನೇದಿನೇ ಹೆಚ್ಚು ಸಾವುನೋವು ತಂದಿದ್ದು ರಾಜ್ಯಾದ್ಯಂತ ಜನತೆ ಸೋಂಕಿನಿಂದಾಗಿ ಪರಿತಪಿಸುತ್ತಿದ್ದಾರೆ.

 

ಒಂದೆಡೆ ಆತಂಕ , ಭಯ ಮತ್ತೊಂದೆಡೆ ಸಾವು ಹೀಗೆ ಪ್ರತಿಕ್ಷಣ ಪ್ರತಿದಿನ ಜನರನ್ನ ತಲ್ಲಣಗೊಳಿಸಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆ ಕೊರನ ಸೋಂಕಿನ ಹಾಟ್ಸ್ಪಾಟ್ ಆಗುತ್ತಿದ್ದು ಪ್ರತಿದಿನ ಸಾವಿರಾರು ಸೋಂಕಿತರು ಸಿಗುತ್ತಿದ್ದಾರೆ ಹಾಗೂ ಪ್ರತಿದಿನ ಸಾವುಗಳು ಸಂಭವಿಸುತ್ತ ಜನರನ್ನು ಹೈರಾಣುಗೊಳಿಸಿದೆ.

 

ಇನ್ನು ಕೊರೊನಾ ಸೋಂಕಿತರ ಅಂತ್ಯಸಂಸ್ಕಾರವನ್ನು ನೆರವೇರಿಸಲು ರಾಜ್ಯದಲ್ಲಿ ಒಂದೆಡೆ ಆತಂಕ ತಂದೊಡ್ಡಿದೆ ಶವಸಂಸ್ಕಾರ ಗಳನ್ನು ನೆರವೇರಿಸಲು ರೋಗಿಗಳ ಕುಟುಂಬಸ್ಥರೇ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭಗಳನ್ನು ಕೆಲ ಸಂಸ್ಥೆಗಳು ಹಾಗೂ ಕೆಲ ಸಮುದಾಯದ ಯುವಕರು ಆಯಾ ಧರ್ಮಗಳ ಸಂಪ್ರದಾಯದಂತೆ ಕೋರೋಣ ದಿಂದ ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾ ಮಾನವೀಯತೆ ತೋರುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ತುಮಕೂರು ತಹಸೀಲ್ದಾರ್ ಆಗಿರುವ ಮೋಹನ್ ಕುಮಾರ್ ರವರು ಒಂದು ಹೆಜ್ಜೆ ಮುಂದೆ ಹೋಗಿ ಕೊರನ ಸೋಂಕಿನಿಂದ ಮೃತಪಟ್ಟ ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ಜಯಮ್ಮ ಎನ್ನುವ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಖುದ್ದು ತಾವೇ ಪಾಲ್ಗೊಂಡು ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

 

ಒಂದೆಡೆ ಕೆಲ ಅಧಿಕಾರಿಗಳು ಸೋಂಕಿಗೆ ಹೆದರಿ ಮನೆಯಿಂದಲೇ ಆಚೆ ಬರುತ್ತಿಲ್ಲ ಇಂತಹ ಸಂದರ್ಭದಲ್ಲಿ ತಾಸಿಲ್ದಾರ್ ಮೋಹನ್ ಕುಮಾರ್ ಅವರು ಮಾಡಿರುವ ಈ ಕಾರ್ಯಕ್ಕೆ ಜಿಲ್ಲೆಯ ಹಾಗೂ ರಾಜ್ಯದ ಜನತೆ ಅಧಿಕಾರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

ಜನತೆ ಕೋರನ ಬಂದ ಕ್ಷಣ ಹೆದರದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರು ನೀಡುವ ಔಷಧಿಗಳನ್ನು ತೆಗೆದುಕೊಳ್ಳುವ ಮುಖಾಂತರ ಸೋಂಕನ್ನು ಹೋಗಲಾಡಿಸಬಹುದು. ಇನ್ನು ಸೋಂಕಿನ ಬಗ್ಗೆ ಎಚ್ಚರವಿರಬೇಕು ವಿನಹ ಹೆದರದೆ ವೈದ್ಯರು ಕೊಟ್ಟಿರುವ ಔಷಧಿಗಳನ್ನು ತೆಗೆದುಕೊಳ್ಳುವ ಮುಖಾಂತರ ಸೋಂಕನ್ನು ಜನರುಹೋಗಲಾಡಿಸಬಹುದು. ಈ ಬಗ್ಗೆ ಜಿಲ್ಲೆಯ ಜನರು ಎಚ್ಚರದಿಂದಿರಬೇಕು ಸೋಂಕು ಎಂದಾಕ್ಷಣ ಹೆದರುವ ಜನರು ಇನ್ನು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕುಟುಂಬದವರೇ ಹಿಂದೇಟು ಹಾಕುವಂತಹ ಸಮಯದಲ್ಲಿ ಮಾನವೀಯತೆಯ ದೃಷ್ಟಿಯಿಂದ ಈ ಕಾರ್ಯವನ್ನು ಜಯಮ್ಮ ಅವರ ಮಗನ ಜೊತೆಗೂಡಿ ಪಿಪಿಪಿ ಕಿಟ್ ಗಳನ್ನು ಹಾಗೂ ಸುರಕ್ಷಾ ಸಾಧನಗಳನ್ನು ಹಾಕಿಕೊಂಡು ಅಂತ್ಯಸಂಸ್ಕಾರದಲ್ಲಿ ಮೋಹನ್ ಕುಮಾರ್ ಅವರು ಪಾಲ್ಗೊಂಡರು. ಕೊರೊನಾ ಸೋಂಕು ಎಂದರೆ ಜನ ಹಿಂದೇಟು ಹಾಕುತ್ತಾರೆ ಇನ್ನೂ ಅವರ ಅಂತ್ಯಸಂಸ್ಕಾರ ಎಂದರೆ ಕುಟುಂಬದವರು ದೂರ ನಿಲ್ಲುವಂತಹ ಸ್ಥಿತಿ ಬಂದೊದಗಿದೆ.ಇನ್ನೂ ನಮ್ಮ ತುಮಕೂರು ಜಿಲ್ಲಾಆಡಳಿತ ಸೋಂಕು ತಡೆಗಟ್ಟಲು ಸಾಕಷ್ಟು ಬಿಗಿ ಕ್ರಮಗಳನ್ನು ಅನುಸರಿಸುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಹಾಗೂ ಮಾನವೀಯತೆಗೆ ಮರುಗಿ ,ತಾವು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಗಿ ತಾಸಿಲ್ದಾರ್ ಮೋಹನ್ ಕುಮಾರ್ ಅವರು ತಿಳಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕೊರನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುವ ಜಾಹಿರ್ ರವರನ್ನು ನೆನೆದ ತಹಸೀಲ್ದಾರ್ ಅವರು ಜಾಹಿರ್ ನೇತೃತ್ವದ ತಂಡ ಸುಮಾರು 450ಕ್ಕೂ ಹೆಚ್ಚು ಸೋಂಕಿತರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದ ಜಾಹೀರ್ ನೆತೃತ್ವದ ತಂಡವನ್ನು ಅಭಿನಂದಿಸಿದರು.

 

ಇನ್ನು ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ತುಮಕೂರು ತಾಸಿಲ್ದಾರ್ ಮೋಹನ್ ರವರು ಮಾಡಿರುವ ಈ ಕಾರ್ಯಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ತಾಸಿಲ್ದಾರ್ ಮೋಹನ್ ಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version