ತುಮಕೂರು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರಾ… ಭಾರತಿ ಶ್ರೀನಿವಾಸ್….?

ತುಮಕೂರು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರಾ… ಭಾರತಿ ಶ್ರೀನಿವಾಸ್….?

 

 

 

ತುಮಕೂರು – ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಗಾಗಿ ಹಲವು ರಾಜಕೀಯ ಪಕ್ಷಗಳು ತೆರೆಮರೆ ಕಸರತ್ತು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

 

 

 

ಇನ್ನು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಹಲವರ ಹೆಸರು ಮುಂಚೂಣಿಯಲ್ಲಿದ್ದು ಆ ಹೆಸರುಗಳ ಪೈಕಿ ಮುರಳಿದರ ಹಾಲಪ್ಪ ,ಮಾಜಿ ಸಂಸದ ಮುದ್ದಹನುಮೇಗೌಡ, ನಿಖಿತ್ ರಾಜ್ ಮೌರ್ಯ, ಹೆಸರು ಕಾಂಗ್ರೆಸ್ ಪಕ್ಷದಿಂದ ಮುಂಜಣೆಯಲ್ಲಿದ್ದು ಮೂವರು ಆಕಾಂಕ್ಷಿಗಳು ಶತಾಯಗತಯ ಟಿಕೆಟ್ ಪಡೆಯುವ ಕಸರತ್ತು ನಡೆಸುತ್ತಿದ್ದು ಇದರ ನಡುವೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮತ್ತೊಂದು ಮಹಿಳಾ ಅಭ್ಯರ್ಥಿಯ ಹೆಸರು ಹೊರಬಿದ್ದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

 

 

 

 

 

ಇನ್ನು ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಯಾಗಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರ ಪತ್ನಿ ಭಾರತಿ ಶ್ರೀನಿವಾಸ್ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಹ ಡಿ.ಕೆ ಶಿವಕುಮಾರ್ ರವರು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹೊರಬಿದ್ದ ಬೆನ್ನಲ್ಲೇ.

 

 

 

ಇನ್ನು ಟಿಕೆಟ್ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ಮಾತನಾಡಿದ್ದು ಮುದ್ದಹನುಮೇಗೌಡರ ಬದಲಾಗಿ ನನ್ನ ಪತ್ನಿಗೆ ಟಿಕೆಟ್ ನೀಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ ಆದರೆ ನನಗೆ ಅಷ್ಟು ಶಕ್ತಿ ಇಲ್ಲ ಎಂದು ಹೇಳಿದ್ದೇನೆ. ಮಾಜಿ ಸಂಸದ ಮುದ್ದಹನುಮಗೌಡರು ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಹೇಳದೇ ಕೇಳದೆ ಪಕ್ಷ ಬಿಟ್ಟು ಹೋಗಿರುವ ಮುದ್ದಹನುಮೇ ಗೌಡರ ಬಗ್ಗೆ ಡಿ.ಕೆ ಶಿವಕುಮಾರ್ ಅವರಿಗೆ ಅಸಮಾಧಾನ ಇರಬಹುದು ಎಂದು ಹೇಳುವ ಮೂಲಕ ತಮ್ಮ ಪತ್ನಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲಿದ್ದಾರೆ ಮಾರ್ನಿಕವಾಗಿ ಹೇಳಿದ್ದಾರೆ .

 

 

 

 

 

ಟಿಕೆಟ್ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ಅರ್ ಶ್ರೀನಿವಾಸ್ ಅವರ ಪತ್ನಿ ಭಾರತಿ ಶ್ರೀನಿವಾಸ್ ರವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ನನಗಿಂತ ಹಲವು ಹಿರಿಯರು ಟಿಕೆಟ್ ಆಕಾಂಕ್ಷಿತರಿದ್ದಾರೆ ಆದರೆ ಅವರೆಲ್ಲರನ್ನ ಹೊರತುಪಡಿಸಿ ನನ್ನ ಹೆಸರು ಕೇಳಿ ಬಂದಿರುವುದು ಸಂತಸ ತಂದಿದ್ದು ತಮ್ಮ ಪತಿ ಶ್ರೀನಿವಾಸ್ ಅವರಿಗಿಂತಲೂ ನನಗೆ ಹೆಚ್ಚಿನದಾಗಿ ರಾಜಕೀಯದಲ್ಲಿ ಆಸಕ್ತಿ ಇದೆ ಕುಣಿಗಲ್ ಶಾಸಕರಾದ ರಂಗನಾಥ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಮೀರ್ ಅಹಮದ್ ನಮ್ಮ ಮನೆಯವರ ಮೇಲೆ ಒತ್ತಡ ಹಾಕಿದ್ದಾರೆ ಅಲ್ಲದೆ ಕಾಂಗ್ರೆಸ್ ನಡೆಸಿರುವ ಸರ್ವೆಯಲು ನಮ್ಮ ಕುಟುಂಬದ ಪರವಾಗಿ ಹೆಚ್ಚಿನ ಒಲವು ಕಂಡುಬಂದಿದೆ ಎಂದು ಹೇಳುವ ಮೂಲಕ ತಾವು ಸಹ ಲೋಕಸಭಾ ಚುನಾವಣಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಇತರೆ ಆಕಾಂಕ್ಷಿತರಿಗೆ ಸೆಡ್ಡು ಹೊಡೆಯಲು ಭಾರತೀ ಶ್ರೀನಿವಾಸ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version