ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅತಿಥಿ ಉಪನ್ಯಾಸಕನ ಭೀಕರ ಕೊಲೆ….

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅತಿಥಿ ಉಪನ್ಯಾಸಕನ ಭೀಕರ ಕೊಲೆ….

 

ತುಮಕೂರು- ಅತಿಥಿ ಶಿಕ್ಷಕನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.

 

 

 

 

 

 

ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿಯ ಕುಳ್ಳಿನಂಜಯ್ಯಪಾಳ್ಯದ ನಿವಾಸಿ ಅತಿಥ ಉಪನ್ಯಾಸಕ ಮರಿಯಪ್ಪ( 47)ಎಂದು ಗುರುತಿಸಲಾಗಿದೆ.

 

 

 

 

ಮೃತ ಮರಿಯಪ್ಪ ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ.ಶನಿವಾರ ಬೆಳಗಿನ ಜಾವ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೈ ಕತ್ತರಿಸಿ,ತಲೆಭಾಗಕ್ಕೆ ಬಲವಾಗಿ ಹೊಡೆದು ಭೀಕರ ಕೊಲೆ ಮಾಡಿದ್ದಾರೆ,ಕೊಲೆ ಕಾರಣ ನಿಗೂಡವಾಗಿದೆ.

 

 

 

 

 

ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ, ಕುಣಿಗಲ್ ಡಿವೈಎಸ್ ಪಿ ಓ‌ಂಪ್ರಕಾಶ್ ಹಾಗೂ ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version