ತುಮಕೂರಿನಲ್ಲಿ ಜೆಡಿಎಸ್ ಘಟಕದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

 

 

ತುಮಕೂರು: ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಪಲ್ಯಗಳ ವಿರುದ್ಧ ತುಮಕೂರು ಜಿಲ್ಲಾ ಜನತಾದಳ ಜಾತ್ಯಾತೀತ (ಜೆಡಿಎಸ್) ಪಕ್ಷದ ವತಿಯಿಂದ ಪ್ರತಿಭಟನೆ ಹಾಗೂ ಬೆಲೆ ಏರಿಕೆಯನ್ನು ಕೂಡಲೇ ಕಡಿಮೆ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ.

ಪ್ರಸ್ತುತ ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಹಿಂದೆಂದು ಕಂಡಿರದ ರೀತಿಯಲ್ಲಿ ಸಂಕಷ್ಟದ ಸಮಯವನ್ನು ಅನುಭವಿಸುತ್ತಿದ್ದು, ಕರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಾಮಾನ್ಯ ಜನರು ಜೀವನವನ್ನು ನಡೆಸುವುದು ಕಷ್ಟವಾಗುತ್ತಿದೆ, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ಅಬಕಾರಿ ಸುಂಕ ಮತ್ತು ರಾಜ್ಯ ಸರ್ಕಾರ ವಿಧಿಸುವ ಜಿ.ಎಸ್.ಟಿ. ತೆರಿಗೆಯಿಂದ ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ.೯೧, ಡೀಸೆಲ್ ರೂ. ೮೫ ಹಾಗೂ ಅಡುಗೆ ಅನಿಲ ರೂ.೮೨೨ ಮುಟ್ಟಿದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು ಜನರು ಕಂಗಾಲಾಗಿದ್ದಾರೆ, ಒಂದು ಹೊತ್ತಿನ ಊಟಕ್ಕೂ ಸಹ ಕಷ್ಟಪಡುತ್ತಿರುವ ಈ ಸಮಯದಲ್ಲಿ ಹಲವಾರು ಉದ್ದಿಮೆಗಳು ಮುಚ್ಚಿ ಹೋಗಿ, ಜನರು ಉದ್ಯೋಗವಿಲ್ಲದೇ ಪರದಾಡು ವಂತಹ ಸ್ಥಿತಿಯಲ್ಲಿದ್ದಾರೆ.

ಜನಸಾಮಾನ್ಯರ ಮೇಲೆ ಬರೆ ಎಳೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ನಿರಂತರವಾಗಿ ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಬೆಲೆ ಏರಿಸುವುದನ್ನು ತುಮಕೂರು ಜಿಲ್ಲಾ ಜನತಾದಳ ಜಾತ್ಯಾತೀತ ಪಕ್ಷ ತೀವ್ರವಾಗಿ ಖಂಡಿಸುತ್ತದೆ.

ಕೋವಿಡ್ ೧೯ (ಕರೋನಾ)ದಿಂದ ಆದ ಲಾಕ್‌ಡೌನ್, ಮತ್ತಿತರ ಕಾರಣಗಳಿಂದ ಜನರ ಆರ್ಥಿಕ ಮಟ್ಟ ಕುಸಿದಿದ್ದು, ಜನರ ಆರ್ಥಿಕ ಸ್ಥಿತಿಯನ್ನು ಉನ್ನತ ಮಟ್ಟಕ್ಕೆ ಏರಿಸಬೇಕಾದ ಸರ್ಕಾರಗಳೇ ಜನರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದು, ಈ ಎಲ್ಲಾ ಜನ ವಿರೋಧಿ ಚಟುವಟಿಕೆಗಳ ಧೋರಣೆಯನ್ನು ಅನುಸರಿಸುತ್ತಿದ್ದು, ಈ ಕೂಡಲೇ ಪೆಟ್ರೋಲ್, ಡೀಸಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸದಿದ್ದರೆ ನಮ್ಮ ಪಕ್ಷದ ರಾಜ್ಯ ಮಟ್ಟದ ನಾಯಕರುಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದೆಂದು ತುಮಕೂರು ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಜಿಲ್ಲಾದ್ಯಕ್ಷರು ಆರ್.ಸಿ.ಆಂಜಿನಪ್ಪನವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾರಾ ಜೆಡಿಎಸ್ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಮೆರವಣಿಗೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಗೋವಿಂದರಾಜು ,ಎಂಎಲ್ಸಿ ತಿಪ್ಪೇಸ್ವಾಮಿ ,ಮಧುಗಿರಿ ಶಾಸಕ ವೀರಭದ್ರಪ್ಪ , ಶಿರಾ ಜೆಡಿಎಸ್ ನ ಉಗ್ರೆಶ್, ಬೆಳ್ಳಿ ಲೋಕೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version