ಮೃತಪಟ್ಟ ವ್ಯಕ್ತಿ ವ್ಯಾಕ್ಸಿನ್ ಪಡೆದಿರುವುದಾಗಿ ಸಂದೇಶ ರವಾನಿಸಿ ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ.

ಮೃತಪಟ್ಟ ವ್ಯಕ್ತಿ ವ್ಯಾಕ್ಸಿನ್ ಪಡೆದಿರುವುದಾಗಿ ಸಂದೇಶ ರವಾನಿಸಿ ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ.

 

ತುಮಕೂರು_ಕಳೆದ ಎರಡು ವರ್ಷದಿಂದ ರಾಜ್ಯದ್ಯಂತ ಕರೋನ ಸೋಂಕು ವ್ಯಾಪಕವಾಗಿ ಜನರನ್ನು ಬಾದಿಸಿ ಸಾವು ,ನೋವು ಹಾಗೂ ಜನರನ್ನು ಜನರ ಜೀವನಮಟ್ಟವನ್ನು ಹಾಳುಮಾಡಿ ಆರ್ಭಟಿಸುತ್ತಿದ್ದ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ಮೂಲಕ ಸಾರ್ವಜನಿಕರನ್ನು ಸಾವಿನ ದವಡೆಯಿಂದ ಪಾರು ಮಾಡಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

 

ಅದರಂತೆ ದೇಶ, ರಾಜ್ಯ ,ಜಿಲ್ಲೆ ,ತಾಲೂಕು, ಗ್ರಾಮ ಮಟ್ಟದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರ ಮನವೊಲಿಸಿ ವ್ಯಾಕ್ಸಿನ್ ನೀಡುತ್ತಿದ್ದಾರೆ.

 

 

ಅದರಂತೆ ತುಮಕೂರು ನಗರದ ಸದಾಶಿವನಗರದ  ಟುಡಾ ಬಡಾವಣೆಯಲ್ಲಿ ವಾಸವಿದ್ದ ಬಸಪ್ಪ ಎಂಬುವವರು 7 ತಿಂಗಳುಗಳ ಹಿಂದೆ ಮೃತಪಟ್ಟದ್ದು.ನಂತರ (jan 29)ರಂದು ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಮೃತಪಟ್ಟ ವ್ಯಕ್ತಿ ಬಸಪ್ಪನವರು ಜನವರಿ 29ರಂದು ವ್ಯಾಕ್ಸಿನ್ ಪಡೆದಿರುವುದಾಗಿ ಸಂದೇಶ ರವಾನಿಸಿ ಪೇಚಿಗೆ ಸಿಲುಕಿದೆ.

 

ಈ ಬಗ್ಗೆ ಮಾಹಿತಿ ನೀಡಿದ ಮೃತಪಟ್ಟ ವ್ಯಕ್ತಿ ಬಸಪ್ಪನವರ ಮಗ ಪಂಚಾಕ್ಷರಯ್ಯ ಎಂಬುವವರು ಮಾತನಾಡಿ ತಮ್ಮ ತಂದೆ ಕಳೆದ 7 ತಿಂಗಳುಗಳ ಹಿಂದೆ ಮೃತಪಟ್ಟಿದ್ದು ಜನವರಿ 29 ರಂದು ತಮ್ಮ ತಂದೆ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿರುವುದಾಗಿ ಸಂದೇಶ ಬಂದಿದ್ದು ನಮಗೆ ಆಶ್ಚರ್ಯವನ್ನುಂಟು ಮಾಡುವುದರ ಜೊತೆಗೆ ಆರೋಗ್ಯ ಇಲಾಖೆಯ ಕಾರ್ಯವೈಖರಿ ಯನ್ನು ಪ್ರಶ್ನಿಸುವಂತಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

ಇನ್ನು ಪಂಚಾಕ್ಷರಯ್ಯ ಕುಟುಂಬದ ಎಲ್ಲಾ ಸದಸ್ಯರಿಗೂ ಸಹ ವ್ಯಾಕ್ಸಿನ್ ಪಡೆಯದೇ ಇದ್ದರೂ ಸಹ ಪಡೆದಿದ್ದೇವೆ ಎಂದು ಸಂದೇಶ ಬಂದಿದ್ದು ಈ ಮೂಲಕ ರಾಜ್ಯ ಸರ್ಕಾರದ ಹೇಗಿದೆ ಎಂಬುದನ್ನು ನಾವು ಪ್ರಶ್ನಿಸುವಂತಾಗಿದೆ ಎಂದರು.

 

 

ಇನ್ನು ರಾಜ್ಯದಲ್ಲಿ ಇರುವ ಆರುವರೆ ಕೋಟಿ ಜನಸಂಖ್ಯೆಯ ಜನರಿಗೆ ವ್ಯಾಕ್ಸಿನ್ ನೀಡುವ ಬದಲು ಏಳುವರೆ ಕೋಟಿ ಜನಸಂಖ್ಯೆಗೆ ವ್ಯಾಕ್ಸಿನ್ ನೀಡಿದ್ದೇವೆ ಎಂದು ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿ ಶಹಬಾಸ್ ಗಿರಿ ಪಡೆಯಲು ಹೊರಟಿದೆಯೇ…..? ಎಂದು ರಾಜ್ಯ ಸರ್ಕಾರ,ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವರಿಗೆ ಪ್ರಶ್ನಿಸಿದ್ದಾರೆ.

 

ಇನ್ನಾದರೂ ಇಂತಹ ಎಡವಟ್ಟುಗಳನ್ನು ಆರೋಗ್ಯ ಇಲಾಖೆಯಾಗಲಿ ಆರೋಗ್ಯ ಸಚಿವರಾಗಲಿ ನಡೆಯದ ಹಾಗೆ ಎಚ್ಚರವಹಿಸಬೇಕು ಎಂದಿದ್ದಾರೆ.

 

ಅದೇನೇ ಇರಲಿ ಇಂತಹ ಘಟನೆಗಳು ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿದ್ದರೂ ಸಹ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನಹರಿಸದೆ ಇರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version