ತುಮಕೂರು ಜಿಲ್ಲೆ ಚಿ.ನಾ.ಹಳ್ಳಿ ತಹಶೀಲ್ದಾರ್ ರವರ ವಿರುದ್ಧ ದಾಖಲಿಸಿರುವ ಎಫ್.ಐ.ಆರ್ ಹಿಂಪಡೆಯಬೇಕೆಂದು ಅಧಿಕಾರಿಗಳ ಒತ್ತಾಯ.

ತುಮಕೂರು ಜಿಲ್ಲೆ ಚಿ.ನಾ.ಹಳ್ಳಿ ತಹಶೀಲ್ದಾರ್ ರವರ ವಿರುದ್ಧ ದಾಖಲಿಸಿರುವ ಎಫ್.ಐ.ಆರ್ ಹಿಂಪಡೆಯಬೇಕೆಂದು ಅಧಿಕಾರಿಗಳ ಒತ್ತಾಯ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ತಹಶೀಲ್ದಾರ್ ಅದ ಶ್ರೀಮತಿ ತೇಜಸ್ವಿನಿ ರವರು ಕೆಲಸ ನಿರ್ವಹಿಸುತ್ತಿದ್ದು, ತಾಲೂಕು ಕಚೇರಿಗೆ ದಿನಾಂಕ: 3-12 2021 ರಂದು ಸುಮಾರು 11-30 ರ ವೇಳೆಗೆ ಬಂದ ಕೆಲವರು ಏಕಾಏಕಿ ಯಾವುದೇ ವಿಷಯವನ್ನು ಮಾತನಾಡತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೂಗಾಡಿಕೊಂಡು ವ್ಯಕ್ತಿ ನಿಂದನೆ ಮಾಡಿ ಮತ್ತು ಕಚೇರಿಯಲ್ಲಿದ್ದ ಸಿಬ್ಬಂದಿಗಳು ಕೆಲವು ಸಾರ್ವಜನಿಕರಿಗೆ ಏಕ ವಚನದಲ್ಲಿ ನಿಂದಿಸಿರುತ್ತಾರೆ ಅವರನ್ನು ಸಮಾಧಾನ ಪಡಿಸಲು ಹೋದ ತಹಸೀಲ್ದಾರ್ ರವರ ಮಾತನ್ನು ಕೇಳಿಸಿಕೊಳ್ಳದ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕಚೇರಿಗೆ ಅವರುಗಳ ನುಗ್ಗಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಳಿಂದ ನಿಂದಿಸಿದ್ದು.

 

ಈ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕು ದಂಡಾಧಿಕಾರಿ ತೇಜಸ್ವಿನಿ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಅವರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡುವ ಮೂಲಕ ತೇಜಸ್ವಿನಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.

 

 

ತಹಶೀಲ್ದಾರ್ ರವರು ಅಲೆಮಾರಿ ಜನಾಂಗದವರಿಗೆ ಸುಮಾರು ದಿನಗಳಿಂದ ಗಂಜಿ ಕೇಂದ್ರ ಸ್ಥಾಪಿಸಿ ಊಟ ವಸತಿ ಸೌಲಭ್ಯಗಳನ್ನು ನೀಡಿ ಯೋಗ ಕ್ಷೇಮ ನೋಡಿ ಕೊಂಡಿರುತ್ತಾರೆ ಮತ್ತು ಡಾ. ಅಂಬೇಡ್ಕರ್‌ ನಿಗಮದಿಂದ ವಾಸದ ಮನೆಗಳು ಮಂಜೂರು ಮಾಡಿರುತ್ತಾರೆ. ಆದ್ದರಿಂದ ತಾವುಗಳು ಬೇರೆ ಕಡೆ ಸ್ಮಳಾಂತರಿಸ ಬೇಕೆಂದು ತಹಶೀಲ್ದಾರ್ ರವರು ವಾಸ್ತಾವಂಶವನ್ನು ಹೇಳಿದಾದ ದುರುದ್ದೇಶದಿಂದ ಕಚೇರಿಯಲ್ಲಿ ಗಲಾಟೆ ಎಬ್ಬಿಸಿರುತ್ತಾರೆ. ಅವರುಗಳನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದ್ದು, ಯಾವುದಕ್ಕೂ ಜಗ್ಯದ ಇವರುಗಳಿಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಪಡಿಸಿದರೆ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನು ಸಹ ತಹಶೀಲ್ದಾರ್ ರವರು ನೀಡಿರುತ್ತಾರೆ.

 

ಇದನ್ನು ಲೆಕ್ಕಿಸದ ದುಷ್ಕರ್ಮಿಗಳು ದೌರ್ಜನ್ಯ ನಡೆಸಿ ಪೋಲಿಸ್ ಇಲಾಖೆಗೆ ಅವರು ಸುಳ್ಳು, ದೂರು ನೀಡಿರುತ್ತಾರೆ ದೂರು ಬಗ್ಗೆ ಸರಿಯಾಗಿ ಪರಿಶೀಲಿಸದೆ ಆರಕ್ಷಕ ಇಲಾಖೆ, ತಾಲೂಕು ದಂಡಾಧಿಕಾರಿಗಳ ವಿರುದ್ದ ಪ್ರಕರಣ ದಾಖಲು ಮಾಡಿರುತ್ತಾರೆ. ಇದು ಸುಳ್ಳಾಗಿರುದರಿಂದ ಸರ್ಕಾರಿ ಅಧಿಕಾರಿ ಮತ್ತು ನೌಕರರ ಮೇಲೆ ದಾಖಲಿಸುವ ಪ್ರಕರಣವಲ್ಲವೆಂಬುದು ಸಮಸ್ತ ನೌಕರರ ನಿಲುವಾಗಿರುತ್ತದೆ.

 

ಅದರಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ತಹಶೀಲ್ದಾರ್ ಆದ ಶ್ರೀಮತಿ ತೇಜಸ್ವಿನಿರವರ ವಿರುದ್ಧ ದುರುದ್ದೇಶದಿಂದ ನೀಡಿರುವ ದೂರು ಮತ್ತು ಸತ್ಯಾಂಶ ತಿಳಿಯದೆ ದಾಖಲಿಸಿರುವ ದೂರನ್ನು ಸರ್ಕಾರವು ವಾಪಸ್ ಪಡೆಯ ಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅಧಿಕಾರಿಗಳು ಒತ್ತಾಯ ಮಾಡಿದ್ದಾರೆ .

 

 

ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ತುಮಕೂರು ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ನರಸಿಂಹರಾಜು ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ದಂಡಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ವಿವಿಧ ಸಿಬ್ಬಂದಿಗಳು ಮನವಿ ಸಲ್ಲಿಸಿದರು.″

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version