ತುಮಕೂರಿನಲ್ಲಿ ಬುದ್ಧಿಮಾಂಧ್ಯ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಎ.ಎಸ್. ಐಗೆ 20 ವರ್ಷ ಜೈಲು.
ತುಮಕೂರು_ 32 ವರ್ಷದ ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಎ.ಎಸ್.ಐ ಉಮೇಶ್ಅಯ್ಯನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ತುಮಕೂರಿನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2017ರ ಜನವರಿ 15 ರಂದು ನೈಟ್ ರೌಂಡ್ಸ್ ನಲ್ಲಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಉಮೇಶಯ ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ಬುದ್ಧಿಮಾಂಧ್ಯ ಮಹಿಳೆಯನ್ನ ಖಾಸಗಿ ಜೀಪಿನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ.
ಘಟನೆಯ ನಂತರ ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು ನಂತರ ಪೊಲೀಸ್ ಇಲಾಖೆಯು ತಲೆತಗ್ಗಿಸುವಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ದಟ್ಟವಾಗಿ ಕೇಳಿ ಬಂದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎಸ್ ಮಲ್ಲಿಕಾರ್ಜುನಸ್ವಾಮಿ ರವರು ಆರೋಪಿ ಉಮೇಶ್ ಯ್ಯ ತಪ್ಪಿತಸ್ಥ ಎಂದು ಜನವರಿ 28ರಂದು ಘೋಷಿಸಿದ್ದರು ಇನ್ನೂ ಶಿಕ್ಷೆಯ ತೀರ್ಪನ್ನು ಜನವರಿ 31ಕ್ಕೆ ಕಾಯ್ದಿರಿಸಿದ್ದರು.
ಅದರಂತೆ ಇಂದು ಸಂಜೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಅಪರಾಧಿ ಉಮೇಶಯಾಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಸಂತ್ರಸ್ತ ಮಹಿಳೆಗೆ ಒಂದು ಲಕ್ಷ ರೂ ದಂಡದ ಮೊತ್ತವನ್ನು ಪರಿಹಾರ ಕೊಡುವಂತೆ ತೀರ್ಪಿನಲ್ಲಿ ಸೂಚಿಸಿದ್ದಾರೆ.