ಅವಮಾನದ ನಂತರ ಕ್ಷಮೆ ಯಾಚಿಸಿದ ಸಿಬ್ಬಂದಿ, ಕಾರು ಖರೀದಿಸಿ ನಗೆ ಬೀರಿದ ಕೆಂಪೇಗೌಡ
ತುಮಕೂರು_ಕಳೆದ ಶುಕ್ರವಾರದಂದು ತುಮಕೂರಿನ ಮಹೇಂದ್ರ ಶೋರೂಮ್ ನಲ್ಲಿ ಕಾರು ಖರೀದಿಸಲು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಮನ ಪಾಳ್ಯದ ಯುವರೈತ ಕೆಂಪೇಗೌಡ ತುಮಕೂರಿನ ಮಹೇಂದ್ರ ಶೋರೂಮ್ ನಲ್ಲಿ ಬುಲೆರೋ ವಾಹನ ಖರೀದಿಸಲು ಬಂದಿದ್ದರು.
ಇದಕ್ಕೆ ಸಂಬಂಧಿಸಿದಂತೆ ವಾಹನ ಖರೀದಿ ಸಮಯದಲ್ಲಿ ಆಗಮಿಸಿದ್ದ ವೇಳೆ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬ ರೈತ ಕೆಂಪೇಗೌಡ ಹಾಗೂ ಆತನ ಸ್ನೇಹಿತರಿಗೆ ಅವಮಾನಿಸಿದ ನಂತರ ಕೆಂಪೇಗೌಡ ಕೇವಲ ಅರ್ಧಗಂಟೆಯಲ್ಲಿ 10 ಲಕ್ಷ ರೂ ಹಣದೊಂದಿಗೆ ಆಗಮಿಸಿದರು .ನಂತರ ಕುಳಿತಲ್ಲೇ ತಮಗೆ ಕಾರು ನೀಡಬೇಕು ಎಂದು ಪಟ್ಟು ಹಿಡಿಯುವ ಮೂಲಕ ರೈತರ ಶಕ್ತಿ ಏನು ಎಂಬುದನ್ನು ತೋರಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ವಿಜಯ ಭಾರತ. ಇನ್ ನಲ್ಲಿ ಮೊದಲ ಬಾರಿ ಸುದ್ದಿ ಪ್ರಕಟಿಸಲಾಗಿತ್ತು.
ನಂತರ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ರೈತ ಯುವಕನಿಗೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಪರ-ವಿರೋಧ ಚರ್ಚೆ ವ್ಯಕ್ತವಾಗಿತ್ತು .
ನಂತರ ಮಹೀಂದ್ರ ಶೋ ರೂಂ ಮಾಲೀಕ ಆನಂದ್ ಮಹೇಂದ್ರ ಸಮೇತ ಟ್ವೀಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿ ಇಂತಹ ಘಟನೆಗಳು ನಡೆಯಬಾರದಿತ್ತು ಈ ರೀತಿ ಘಟನೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದರು .
ಇದಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು ನಂತರ ಮಹೇಂದ್ರ ಶೋರೂಮ್ ಸಿಬ್ಬಂದಿ ಕ್ಷಮಾಪಣೆ ಕೇಳುವ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಲಾಗಿತ್ತು ನಂತರ ಶೋರೂಮ್ ಸಿಬ್ಬಂದಿಗಳು ಸಹ ಕೆಂಪೇಗೌಡ ರವರ ಮನೆಗೆ ಭೇಟಿ ನೀಡಿ ಕೆಂಪೇಗೌಡರ ಬಳಿ ಕ್ಷಮಾಪಣೆ ಕೇಳುವ ಮೂಲಕ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಕೆಂಪೇಗೌಡರ ಮನವೊಲಿಸಿದರು.
ನಂತರ ಯುವಕ ಕೆಂಪೇಗೌಡ ತುಮಕೂರಿನ ರಿಂಗ್ ರಸ್ತೆಯ ಮಹೇಂದ್ರ ಶೋರೂಂನಲ್ಲಿ ಹೊಸ ಬುಲೇರೋ ಪಿಕಪ್ ವಾಹನ ಖರೀದಿಸುವ ಮೂಲಕ ನಗೆ ಬೀರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನಂದ ಮಹೇಂದ್ರ ರವರು ಟ್ವೀಟ್ ಮಾಡಿ ರೈತ ಯುವಕ ಕೆಂಪೇಗೌಡ ತಮ್ಮ ಮಹೇಂದ್ರ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನುವ ಮೂಲಕ ರೈತ ಯುವಕ ಕೆಂಪೇಗೌಡ ಈಗ ನಮ್ಮ ಕುಟುಂಬದ ಯುವಕ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಸಂದೇಶವನ್ನು ರವಾನಿಸುವ ಮೂಲಕ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣಕ್ಕೆ ಅಂತ್ಯವಾಡಿದ್ದಾರೆ.