ನೆನ್ನೆ ಸುರಿದ ಬಾರಿ ಮಳೆಗೆ ಕಿತ್ತು ಬಂದ ರಸ್ತೆ ಡಾಂಬರು :- ಅವೈಜ್ಞಾನಿಕ ಕಾಮಗಾರಿ ಎಂದು ಗ್ರಾಮಸ್ಥರ ಅಕ್ರೋಶ
ಚಾಮರಾಜನಗರ :- ತಾಲೂಕಿನ ಸಂತೆಮರಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಹೆಗ್ಗವಾಡಿ ಗ್ರಾಮದಿಂದ ಯಲಕ್ಕೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೆನ್ನೆ ಸುರಿದ ಬಾರಿ ಮಳೆಯಿಂದಾಗಿ ಹಲವು ಅವಾಂತರಗಳಾಗಿವೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಇದೆ ರೀತಿ ಬಾರಿ ಮಳೆಯಾಗಿದ್ದರಿಂದ ಹಲವು ತೊಂದರೆಗೋಳಗಾಗಿದ್ದ ಗ್ರಾಮಸ್ಥರು ನಂತರ ಚರಂಡಿ ಮತ್ತು ರಸ್ತೆ ಕಾಮಗಾರಿ ಮಾಡಿದ್ದೂ ಅದು ಕೂಡ ಅವೈಜ್ಞಾನಿಕವಾಗಿ ಕುಡಿರುವುದರಿಂದ ನೆನ್ನೆ ಕೂಡ ಅದೇ ರೀತಿ ತೊಂದರೆ ಉಂಟಾಗಿದೆ.
ಹಾಗೂ ಕಳೆದ ವರ್ಷದ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳು ಇಲಾಖೆ ಕೈ ತೊಳೆದು ಕೊಂಡಿದ್ದರೆ ಎಂದು ಹೆಗ್ಗವಾಡಿ ಗ್ರಾಮದ ಯಜಮಾನ್ರು ಮತ್ತು ಯುವಕರು ಆರೋಪಿಸಿದ್ದಾರೆ. ಇನ್ನು ಕಳೆದ ವರ್ಷ ಊರಿನ ಒಳ ಭಾಗದಲ್ಲಿ ನಿರ್ಮಾಣ ಮಾಡಬೇಕಿದ್ದ ರಸ್ತೆ ಕಾಮಗಾರಿಯನ್ನು ಊರಿನ ಹೊರಭಾಗದಲ್ಲಿ ಮಾಡಿ ಹೋಗಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ನಂತರ ಈ ವಿಚಾರ ಕಳೆದ ಅವಧಿಯಲ್ಲಿ ಇದ್ದ ಶಾಸಕ ಎನ್ ಮಹೇಶ್ ಗೆ ವಿಚಾರ ತಿಳಿಸಿದಾಗ ಗ್ರಾಮಸ್ಥರೆ ತೀರ್ಮಾನ ಮಾಡಿಕೊಂಡು ಬಗೆಹರಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡಿ ಸುಮ್ಮನಾದರು ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.
ಹಾಗೂ ಈ ರಸ್ತೆ ಉದ್ದಳತೆ ನಲವತ್ತು ಅಡಿ ಇದ್ದು ಕೇವಲ ಎಂಟು ಅಡಿ ಮಾತ್ರ ರಸ್ತೆ ಇದ್ದು ಉಳಿದ್ದದ್ದು ಒತ್ತುವರಿಯಾಗಿದೆ. ಹಾಗೂ ಊರಿನ ರಸ್ತೆ ಕಾಮಗಾರಿಯ ಎಂಜಿನಿಯರ್ ಮಧುಸೂದನ್ ಸ್ಥಳೀಯ ಗ್ರಾಮದವನಾಗಿದ್ದು ರಸ್ತೆ ಕಾಮಗಾರಿ ಆಗದಿದ್ದರೂ ಬಿಲ್ ಪಡೆಯುವುದು ನನಗೆ ಗೊತ್ತು ಎಂದು ದುರಹಂಕಾರದ ಹೇಳಿಕೆ ನೀಡಿದ್ದರು. ಆದ್ದರಿಂದ ಸಂಬಂಧ ಇಲಾಖೆ ಮತ್ತು ಅಧಿಕಾರಿಗಳು ಹೆಗ್ಗವಾಡಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಲು ಯಜಮಾನರು ಮತ್ತು ಗ್ರಾಮಸ್ಥರು ಒತ್ತಾಯಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್