ಜಾನಪದ ಕಲೆ ಮತ್ತು ಸಂಸ್ಕೃತಿಯ ಜಿಲ್ಲೆ ಮಾದಪ್ಪನ ಸನ್ನಿದಿಯಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ

ಜಾನಪದ ಕಲೆ ಮತ್ತು ಸಂಸ್ಕೃತಿಯ ಜಿಲ್ಲೆ ಮಾದಪ್ಪನ ಸನ್ನಿದಿಯಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ

ಚಾಮರಾಜನಗರ :- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ)ಮೈಸೂರು ಬೆಂಗಳೂರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಿoದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಗಡಿನಾಡು ಸಾoಸ್ಕೃತಿಯ ಉತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ವಿವಿಧ ಕಲಾ ತಂಡಗಳಿಂದ ಮಂಗಳವಾದ್ಯ. ವಿರಾಗಸೆ. ಕಂಸಾಳೆ. ಡೊಳ್ಳು ಕುಣಿತ. ಗೊರವರ ಕುಣಿತ. ಬಿಲ್ಲು ಕುಣಿತ. ಬೇಡಗಂಪಣರ ನೃತ್ಯ ಮುಂತಾದ ಕಲಾ ಉತ್ಸವಕ್ಕೆ ಅಪಾರ ಜಿಲ್ಲಾಧಿಕಾರಿ ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ಕ್ಯಾತ್ಯಯಿನಿ ದೇವಿ ರವರು ಉದ್ಘಾಟನೆ ಮಾಡಿದರು. ನಂತರ ವೇದಿಕೆಯಲ್ಲಿ ಮಾತನಾಡಿದ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಸಿಕೇಂದ್ರದ ಮಹಾಸ್ವಾಮಿಗಳು.

 

 

 

 

 

 

 

 

 

 

 

 

ದೇಶ ಏಕತೆಯಿಂದ ಬೆಳೆಯಬೇಕು ನಾವೆಲ್ಲರೂ ಒಂದೇ ಮಾನವರು ಎಂಬ ವಾಕ್ಯವನ್ನು ನಾವು ಸದಾ ಮನಸಿನಲ್ಲಿಟ್ಟುಕೊಂಡು ಜೀವಿಸಬೇಕು. ಇವತ್ತಿನ ಕಾರ್ಯಕ್ರಮ ಗಡಿನಾಡು ಗಡಿ ತಾಲೂಕಿನಲ್ಲಿ ಆಯೋಜನೆ ಮಾಡಿದ್ದೂ ತುಂಬಾ ಒಳ್ಳೆಯ ಸಂಗತಿ ಕಲೆ ಸಂಸ್ಕೃತಿ ಅನ್ನೋದು ಮನುಷ್ಯನ ಭವ್ಯವಾದ ಒಂದು ಅಂಗವಾಗಿದೆ ಅದರದೇ ಆದ ಪ್ರಾಮುಖ್ಯತೆಯನ್ನು ಎತ್ತಿ ಇಡಿಯುತ್ತದೆ. ಇವತ್ತಿನ ದಿನಗಳಲ್ಲಿ ಜಾನಪದ ಕಲೆ ಸಾಹಿತ್ಯವನ್ನು ಮನುಷ್ಯ ಮರೆಯುತ್ತಿದ್ದಾನೆ.ಆದ್ದರಿಂದ ಕಲೆ ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಹೇಳಿದರು.

 

 

 

 

 

 

 

 

 

 

 

 

ಮಳವಳ್ಳಿ ಮಹದೇವಸ್ವಾಮಿ ರವರು ರಾಜ್ಯಾದಂತ್ಯ ತಮ್ಮ ಜಾನಪದ ಕಲೆಯಿಂದ ಹೆಸರುವಾಸಿಯಾಗಿದ್ದಾರೆ ಕಳೆದ ಒಂದು ವಾರದಿಂದ ಅವರು ಹಾಡಿರುವ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡೊಂದು ರಾಜ್ಯದಿಂದ ದಾಟಿ ದೇಶದಿಂದಾಚಗೆ ತಲುಪಿದೆ ಆಗಾಗಿ ಜಾನಪದ ಸಾಹಿತ್ಯ ಕಲೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು ಹಾಗೂ ಕ್ಷೆತ್ರದ ಶಾಸಕ ಮಂಜುನಾಥ್ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿನ ಬಡತನ ಮತ್ತು ಸೌಲಭ್ಯ ವಂಚಿತ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವ ಕನಸೊತ್ತಿದ್ದಾರೆ ವೇದಿಕೆಯಲ್ಲಿ ನನ್ನ ಜೊತೆ ಚರ್ಚೆ ಮಾಡಿದ್ದಾರೆ ಕ್ಷೆತ್ರಕ್ಕೆ ಸಾಮಾಜಿಕ ಕಳಕಳಿಯುಳ್ಳ ಶಾಸಕ ಸಿಕ್ಕಿದ್ದಾರೆ ಎಂದು ಹೇಳಿದರು.

 

 

 

 

 

 

 

 

 

 

 

 

ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಕ್ಷೆತ್ರದ ಶಾಸಕ ಮಂಜುನಾಥ್ ಶಾಸಕನಾಗಿ ಮೊದಲ ಬಾರಿಗೆ ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷ ಸಂಸ್ಕೃತಿಕ ಮತ್ತು ಜಾನಪದ ಕಲೆಗೆ ಚಾಮರಾಜನಗರ ಜಿಲ್ಲೆ ಹೆಸರುವಾಸಿಯಾಗಿದೆ. ನಾಡು ನುಡಿ ಸಂಸ್ಕೃತಿಯನ್ನು ಬೆಳೆಸಿ ಅದಕ್ಕೆ ಪ್ರಾತ್ಯನಿಧ್ಯ ಕೊಟ್ಟು ಜಾನಪದ ಮತ್ತು ಕಲೆ ಸಂಸ್ಕೃತಿಯನ್ನು ಇನ್ನು ಹೆಚ್ಚಾಗಿ ಉಳಿಸಿ ಬೆಳೆಸಬೇಕು ಎಂದರು.

 

 

 

 

 

 

 

 

 

 

 

 

 

 

ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಡಾ. ಸಿ ಸೋಮಶೇಖರ್, ಮಲೆ ಮಹದೇಶ್ವರ ಬೆಟ್ಟದಕಾರ್ಯದರ್ಶಿ ಎಸ್. ಕಾತ್ಯಾಯಿನಿದೇವಿ, ಮಲೆಮಹದೇಶ್ವಬೆಟ್ಟ ಗ್ರಾ.ಪಂ.ಅಧ್ಯಕ್ಷ ಎಂ. ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಏನ್. ಗುರುಲಿಂಗಯ್ಯ, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ ಬಿ. ಷಣ್ಮುಖಪ್ಪ, ಜಿಲಾಧ್ಯಕ್ಷ ವಿ. ಮಲ್ಲಿಕಾರ್ಜುನ ಸ್ವಾಮಿ ದುಗ್ಗಹಟ್ಟಿ,ತಾಲೋಕ್ ಅಧ್ಯಕ್ಷರು ಸು. ಬಸವರಾಜದೊಡ್ಡಟ್ಟಿ ಹಾಗೂ ಪರಿಷತ್ ಪದಾಧಿಕಾರಿಗಳು, ಹಾಗೂ ಇನ್ನಿತರರು ಇದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version