ದೇಶಕ್ಕೆ 100 ಜನ ಮೋದಿ ಬಂದರು ಸಹ ಯಾರನ್ನೂ ಕೂಡ ದೇಶ ಬಿಡಿಸಲು ಸಾಧ್ಯವಿಲ್ಲ _ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್.
ತುಮಕೂರು_ದೇಶಕ್ಕೆ 100 ಜನ ಮೋದಿ ಬಂದರು ಸಹ ಇಲ್ಲಿ ಯಾರು ಯಾರನ್ನು ಸಹ ದೇಶ ಬಿಡಿಸಲು ಸಾಧ್ಯವಿಲ್ಲ ಹಾಗಾಗಿ ಮುಸ್ಲಿಂ ಸಮುದಾಯ ಯಾವುದೇ ಕೋಮುದ್ವೇಷಕ್ಕೆ ಬಲಿಯಾಗದೆ ತಾಳ್ಮೆಯಿಂದ ಇರಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರಿಗೆ ಗುಬ್ಬಿ ಕ್ಷೇತ್ರದ ಶಾಸಕ ಎಸ್ಆರ್ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿರಿವಾರ ಬಳಿಯ ಗಳಗ ಗ್ರಾಮದಲ್ಲಿ ನಡೆದ ಮೆಹಬೂಬ ಸುಭಾನಿ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇನ್ನೂ ದೇಶದಲ್ಲಿ ಸ್ವಾಭಿಮಾನದಿಂದ ಬದುಕಲು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದಲ್ಲಿ ಹಕ್ಕಿದೆ ಇಲ್ಲಿ ಯಾರನ್ನು ಯಾರೂ ಸಹ ಏನು ಮಾಡಲು ಸಾಧ್ಯವಿಲ್ಲ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಪ್ರತಿಹಂತದಲ್ಲೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಬಿ ಜೆ ಪಿ ಹಾಗೂ ಅರ್.ಎಸ್.ಎಸ್ ಕೆಲಸಮಾಡುತ್ತಿದೆ.
ಇನ್ನು ತಲೆಕೆಟ್ಟ ಸ್ವಾಮೀಜಿಯೊಬ್ಬ ಮನಸ್ಸಿಗೆ ಬಂದಂತೆ ಹೇಳಿಕೆ ನೀದಿದ್ದು ಇನ್ನು ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನರು ಕೆತ್ತಿರುವ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿಕೆ ನೀಡುತ್ತಾನೆ ಇನ್ನು ನಮ್ಮ ಗುಬ್ಬಿ ತಾಲ್ಲೂಕಿನಲ್ಲಿ ಶೇಕಡಾ 99ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದ ಕಲ್ಲು ಕೆತ್ತನೆ ಗಾರರು ವಿಗ್ರಹಗಲಿಗೆ ರೂಪ ನೀಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿನಿತ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಕೆಲವರು ಹೇಳಿಕೆ ನೀಡುತ್ತಾರೆ ಅದ್ಯಾವುದಕ್ಕೂ ಮುಸ್ಲಿಂ ಸಮುದಾಯ ಕಿವಿ ಕೊಡಬಾರದು ಇನ್ನೂ ನನ್ನ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ತರಹದ ಸಮಸ್ಯೆ ಆಗಲು ನಾನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಇನ್ನು ನಮ್ಮ ದೇಶಕ್ಕೆ ನೂರು ಜನ ಮೋದಿ ಬಂದರೂ ಸಹ ಇಲ್ಲಿ ಯಾರು ಯಾರನ್ನು ಸಹ ದೇಶ ಬಿಡಿಸಲು ಸಾಧ್ಯವಿಲ್ಲ ಇನ್ನು ಕೇವಲ ತಾತ್ಕಾಲಿಕವಾಗಿ ಮಾತ್ರ ತೊಂದರೆ ಕೊಡಲು ಸಾಧ್ಯ
ಇನ್ನೂ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಹಕ್ಕಿದೆ ಅದನ್ನ ಬಿಟ್ಟು ಇವರು ಸುಖಾಸುಮ್ಮನೆ ತೊಂದರೆ ಕೊಡುತ್ತಾರೆ ಎಂದು ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್.
ವರದಿ _ಮಾರುತಿ ಪ್ರಸಾದ್ ತುಮಕೂರು