ಕಚೇರಿ ಕೆಲಸಕ್ಕೆ ಅಲೆದಾಡಿ ಅಧಿಕಾರಿಯ ಕಾಲು ಹಿಡಿದ ವಯೋವೃದ್ಧ ರೈತ.

ಕಚೇರಿ ಕೆಲಸಕ್ಕೆ ಅಲೆದಾಡಿ ಅಧಿಕಾರಿಯ ಕಾಲು ಹಿಡಿದ ವಯೋವೃದ್ಧ ರೈತ.

 

 

ತುಮಕೂರು_ತುಮಕೂರು ತಾಲ್ಲೂಕಿನ ನಾಗವಲ್ಲಿ ಮೂಲದ ಮುನಿಯಪ್ಪ ಎನ್ನುವ ವೃದ್ಧ ರೈತರೊಬ್ಬರು ತನ್ನ ಜಮೀನಿನ ವಿಷಯದ ಸಲುವಾಗಿ ಹಲವು ವರ್ಷಗಳಿಂದ ತುಮಕೂರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದು ಕೊನೆಗೂ ಅಧಿಕಾರಿಗಳು ಹಾಗೂ ತಾಲೂಕು ಕಚೇರಿಯ ನೌಕರರ ಮೇಲೆ ಬೇಸತ್ತು ತನಗೆ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತುಮಕೂರು ತಾಲೂಕು ಕಚೇರಿಗೆ ಆಗಮಿಸಿದ ಮುನಿಯಪ್ಪ ಕೊನೆಗು ಅಧಿಕಾರಿಗಳ ನಡೆಯಿಂದ ಬೇಸತ್ತು ಸ್ಥಳದಲ್ಲಿದ್ದ ತಾಸಿಲ್ದಾರ್ ಅವರ ಕಾಲಿಗೆರಗಿ ಅವರ ಕಾಲುಗಳನ್ನು ಹಿಡಿಯುತ್ತಾ ಗೋಗರೆದು ತನಗೆ ಆಗಿರುವ ಅನ್ಯಾಯದ ವಿರುದ್ಧ ತನಗೆ ನ್ಯಾಯ ಸಿಗಬೇಕು ಎಂದು ಗೋಳಾಡಿದ ಘಟನೆಗೆ ಸಾಕ್ಷಿಯಾಗಿದೆ.

 

 

ಇದುವರೆಗೂ ಯಾರೂ ಸಹ ನನ್ನ ಜಮೀನಿನ ವಿಚಾರವಾಗಿ ಸಹಾಯಕ್ಕೆ ಮುಂದಾಗದ ಕಾರಣ ನನಗೆ ನ್ಯಾಯ ಸಿಗಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ತಾಲೂಕು ದಂಡಾಧಿಕಾರಿಗಳ ಕಾಲನ್ನು ಹಿಡಿದು ನ್ಯಾಯಕ್ಕಾಗಿ ಅಂಗಲಾಚಿದ ಘಟನೆ ಜರುಗಿದೆ.

 

 

ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಘಟನೆ ನಡೆದಿದ್ದು ಇನ್ನು ರೈತ ಮುನಿಯಪ್ಪ ಗೆ ಸಂಬಂಧಿಸಿದ ಜಮೀನಿದ್ದು ಹಲವು ವರ್ಷಗಳಿಂದ ಅನುಭವದಲ್ಲಿದ್ದ ಜಮೀನಿಗೆ ಸಾಗುವಳಿ ಚೀಟಿ ಸಹ ನೀಡಿದ್ದು ಅದರ ಸಂಬಂಧ ಕೆಲ ತಕರಾರು ಇದ್ದು  ತಕರಾರು ಬಗೆಹರಿಯದ ಕಾರಣ ಅದರ ಸಲುವಾಗಿ ತಾಲೂಕು ಕಚೇರಿಗೆ ಅಲೆದು ಸಾಕಾಗಿರುವ ವಯೋವೃದ್ಧ ರೈತ ಕೊನೆಗೂ ಅಧಿಕಾರಿಗಳ ಕಾಲು ಹಿಡಿದು ತನ್ನ ಅಸಹಾಯಕತೆಯನ್ನು ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ.

 

 

ಈ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿಗಳ ಮುಂದೆ ರೈತ ಮುನಿಯಪ್ಪ ತನ್ನ ನೋವನ್ನು ಹೊರಹಾಕುತ್ತಾ ಕಣ್ಣೀರು ಹಾಕಿದ್ದನ್ನು ಗಮನಿಸಿದ ಅಧಿಕಾರಿಗಳು ಆತನನ್ನ ಸಮಾಧಾನಪಡಿಸಿ ತನಗೆ ಆಗಬೇಕಾದ ಕೆಲಸವನ್ನು ಶ್ರೀಘ್ರದಲ್ಲೇ ಮಾಡಿಕೊಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version