ಶಾಸಕ ಗೌರಿಶಂಕರ್ ನಡೆಸಿದ್ದ ಲಸಿಕಾ ಅಭಿಯಾನಕ್ಕೆ ಸ್ಪಷ್ಟೀಕರಣ ನೀಡಿದ ಜೆಡಿಎಸ್ ಮುಖಂಡರು.
ಜನವರಿ ತಿಂಗಳಿನಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ನಡೆಸಿದ್ದ ಲಸಿಕಾ ಅಭಿಯಾನ ನಡೆಸಿದರು ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ RTI ಕಾರ್ಯಕರ್ತ ಗಿರೀಶ್ ಎಂಬವರು ಗ್ರಾಮಾಂತರ ಶಾಸಕ ಗೌರಿಶಂಕರು ನಡೆಸಿದ್ದ ಲಸಿಕಾ ಅಭಿಯಾನ ವಿರುದ್ಧ ಸಂಶಯ ವ್ಯಕ್ತಪಡಿಸಿ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಇಂದು ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡರು ಶಾಸಕರು ನಡೆಸಿದ ಲಸಿಕ ಅಭಿಯಾನಕ್ಕೆ ದಾಖಲೆ ಸಮೇತ ಸ್ಪಷ್ಟೀಕರಣ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ಈ ಸಂಬಂಧ ಮಾತನಾಡಿದ ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ನ ಕಾರ್ಯಾಧ್ಯಕ್ಷರಾದ ಟಿ.ಆರ್ ನಾಗರಾಜು ಮಾತನಾಡಿ ತುಮಕೂರು ಗ್ರಾಮಾಂತರ ಶಾಸಕರು ಕರೋನ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿದ್ದಾರೆ ಆದರೆ ಇದನ್ನು ಸಹಿಸದ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಅವರ ಹಿಂಬಾಲಕ ಗಿರೀಶ್ ಎಂಬುವವರು ಶಾಸಕರ ಏಳಿಗೆಯನ್ನು ಸಹಿಸಲಾಗದೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಈ ಮೂಲಕ ಗ್ರಾಮಾಂತರ ಶಾಸಕರಾದ ತೇಜೋವಧೆಗೆ ಮಾಜಿ ಶಾಸಕ ಬಿ ಸುರೇಶ್ ಗೌಡ ರವರು ಪಿತೂರಿ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ತುಮಕೂರು ಗ್ರಾಮಾಂತರ ಶಾಸಕರು ಕರೋನ ಸಮಯದಲ್ಲಿ ಸಾಕಷ್ಟು ಬಡವರಿಗೆ ದೀನದಲಿತರಿಗೆ ದಿನಸಿ ಕಿಟ್, ಮಾಸ್ಕ, ಸ್ಯಾನಿಟೈಸರ್ ಸೇರಿದಂತೆ ಕೊಡಿಮುದ್ದನಹಳ್ಳಿ ಯಲ್ಲಿ ಕೋವಿದ್ ಆಸ್ಪತ್ರೆಯನ್ನು ತೆರೆಯುವ ಮೂಲಕ ಸಾಕಷ್ಟು ರೋಗಿಗಳು ಕರೋನಾ ರೋಗ ದಿಂದ ಮುಕ್ತರಾಗಲು ಸಹಾಯ ಮಾಡಿದ್ದಾರೆ ಆದರೆ ಇಂತಹ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಶಾಸಕರ ವಿರುದ್ಧ ಆರ್ಟಿಇ ಕಾರ್ಯಕರ್ತ ಗಿರೀಶ್ ಮಾಡಿರುವ ಆರೋಪ ದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇವೆ ಈ ಸಂಬಂಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತುಮಕೂರು ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಮಾತನಾಡಿ ತುಮಕೂರು ಗ್ರಾಮಾಂತರ ಕ್ಷೆತ್ರದಲ್ಲಿ ಶಾಸಕರು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಆದರೆ ಅಧಿಕಾರ ಇಲ್ಲದೆ ಅಪಹಪಿಸುತ್ತಿರುವ ತುಮಕೂರು ಗ್ರಾಮಾಂತರದ ಮಾಜಿ ಶಾಸಕರು ಅವರ ಏಳಿಗೆ ಸಹಿಸಲಾಗದೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಇನ್ನಾದರೂ ಇಂತಹ ಆರೋಪಗಳ ಮಾಡುವುದನ್ನು ಬಿಡಬೇಕು ಎಂದರು.
ಇದು ಪತ್ರಿಕಾಗೋಷ್ಠಿಯಲ್ಲಿ ಚೆಲುವರಾಜು , ಹಿರೇಹಳ್ಳಿ ಜೈರಾಮ್ ಹಾಜರಿದ್ದರು.