ಶನೇಶ್ವರ ದೇವಾಲಯದಲ್ಲಿ ಕಳ್ಳತನ.
ತುಮಕೂರು ತಾಲೂಕು ಬೇಳ್ಳಾವಿ ಹೋಬಳಿಯ ಕೋಡಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ರಾತ್ರಿ ಕಳ್ಳತನ ನಡೆದಿದೆ.
ಕಳೆದ ರಾತ್ರಿ 3ಗಂಟೆ ಸಮಯದಲ್ಲಿ ಶನೇಶ್ವರ ದೇವಸ್ಥಾನದ ಚಾವಣಿ ತೆಗೆದು ಕಳ್ಳತನ ಮಾಡಿರುವ ಕಳ್ಳರು ದೇವಸ್ಥಾನದಲ್ಲಿದ್ದ ಬೆಳ್ಳಿ ಸಾಮಗ್ರಿ ಚಿನ್ನದ ಕಣ್ಣುಗಳು ಚಿನ್ನದ ತಾಳಿ ಸೇರಿದಂತೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ.
ಇನ್ನು ದೇವಾಲಯಕ್ಕೆ ಹೊಸದಾಗಿ ದೇವಾಲಯ ನಿರ್ಮಾಣ ಮಾಡುವ ಸಲುವಾಗಿ ವಿಗ್ರಹವನ್ನು ತಾತ್ಕಾಲಿಕ ದೇವಸ್ಥಾನದಲ್ಲಿ ನಲ್ಲಿ ಇರಿಸಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಆಭರಣಗಳನ್ನು ಸಹ ತಾತ್ಕಾಲಿಕ ದೇವಸ್ಥಾನದಲ್ಲಿ ಇಡಲಾಗಿತ್ತು ಆದರೆ ಇದನ್ನು ಬಂಡವಾಳವಾಗಿಸಿಕೊಂಡಿರುವ ಕಳ್ಳರು ದೇವಸ್ಥಾನದ ಮೇಲ್ಚಾವಣಿ ತೆಗೆದು ಕಳ್ಳತನ ಮಾಡಿದ್ದಾರೆ.
ಇನ್ನು ರಾತ್ರಿ ನಡೆದ ಕಳ್ಳತನ ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಪೊಲೀಸರಿಗೆ ತಿಳಿಸಿದ್ದಾರೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.