ಮುಂದಿನ ದಿನದಲ್ಲಿ ಎಸಿಬಿ ಮತ್ತಷ್ಟು ಬಲಿಷ್ಠ ಗೊಳ್ಳಲಿದೆ _ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಂದಿನ ದಿನದಲ್ಲಿ ಎಸಿಬಿ ಮತ್ತಷ್ಟು ಬಲಿಷ್ಠ ಗೊಳ್ಳಲಿದೆ _ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಸಿಬಿ ದಾಳಿಯಾದ ನಂತರ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಧಿ-ವಿಧಾನಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 

 

 

ಶುಕ್ರವಾರ ರಾತ್ರಿ ತುಮಕೂರು ನಗರದ ಸ್ನೇಹ ಸಂಗಮ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಆದರೆ ಎಸಿಬಿ ಮತ್ತು ಪ್ರಾಸಿಕ್ಯೂಷನ್ ನಡುವೆ ಸಂಬಂಧ ಗಟ್ಟಿಯಾಗುವಂತೆ ಮಾಡಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದರು.

 

 

ದಾಳಿ ನಡೆದ ನಂತರ ಕಾನೂನಿಗೆ ಅವರದೇ ಆದ ಪ್ರಕ್ರಿಯೆಗಳು ನಡೆಯುತ್ತಿವೆ ಎಸಿಬಿ ಹಲ್ಲುಕಿತ್ತ ಹಾವಲ್ಲ ರಾಜ್ಯದಲ್ಲಿ ಈಗ ಎಸಿಬಿ ಬಲಿಷ್ಠವಾಗಿದೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನು ಬಯಲಿಗೆಳೆಯುವಲ್ಲಿ ಎಸಿಬಿ ಸಂಪೂರ್ಣ ಮುಂದಿದೆ.

 

ಮುಂದಿನ ದಿನದಲ್ಲಿ ಎಸಿಬಿಗೆ ಉತ್ತಮ ಅಧಿಕಾರವನ್ನು ನೀಡುವ ಮೂಲಕ ಮತ್ತಷ್ಟು ಬಲಪಡಿಸಲಾಗುವುದು ಎಂದಿದ್ದಾರೆ.

 

 

ಎಸಿಬಿ ದಾಳಿ ನಂತರ ಚಾರ್ಜ್ಶೀಟ್ ಸಲ್ಲಿಕೆಯ ಲ್ಲಿ ವಿಳಂಬವಾಗುತ್ತಿರುವುದು ಸಹ ಪ್ರಕರಣದ ಶೀಘ್ರ ವಿಲೇವಾರಿಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಗಮನ ಹರಿಸಲಾಗುವುದು. ಪ್ರಾಸಿಕ್ಯೂಷನ್ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಹಾಗೂ ಅಲ್ಪಾವಧಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ ಯಾಗಲು ಅವಕಾಶ ವಾಗುವಂತಹ ಪ್ರಯತ್ನಗಳ ಕಡೆಗೆ ಗಮನ ಹರಿಸಲಾಗುವುದು ಎಲ್ಲೆಲ್ಲಿ ಲೂಸ್ ಫೋಲ್ ಇದೆಯೋ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು.

 

ಇನ್ನು ಲೋಕಾಯುಕ್ತ ಮತ್ತೆ ಜಾರಿಗೆ ಸಂಬಂಧ ಯಾವುದೇ ಅವಶ್ಯಕತೆಯಿಲ್ಲ ಈಗಿರುವ ಎಸಿಬಿ ರಾಜ್ಯದಲ್ಲಿ ಬಲಿಷ್ಠವಾಗಿ ಕೆಲಸ ನಿರ್ವಹಿಸುತ್ತಾ ಭ್ರಷ್ಟ ಅಧಿಕಾರಿಗಳ ಹಿಡಿಯುವ ಕೆಲಸದಲ್ಲಿ ಮುಂದಿರುವ ಪ್ರಯುಕ್ತ ಮತ್ತೆ ಲೋಕಾಯುಕ್ತ ತರುವ ಯಾವುದೇ ಪ್ರಯತ್ನ ಸರ್ಕಾರದ ಮುಂದಿಲ್ಲ ಎಂದರು

 

ಇನ್ನು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಪಕ್ಷದಿಂದ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕಲಾಗಿದೆ ಇನ್ನು ಗರಿಷ್ಠ ಅಭ್ಯರ್ಥಿಗಳನ್ನು ಬಿಜೆಪಿ ಪಕ್ಷ ಗೆಲ್ಲಿಸಿಕೊಳ್ಳಲು ಇದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version