ಲಿಂಗೈಕ್ಯ ಶಿವಕುಮಾರ ಶ್ರೀ ಜಗತ್ತಿಗೆ ಮಾದರಿ ಮಾಜಿ ಸಚಿವ_ಎಂ.ಬಿ ಪಾಟೀಲ್.

ಲಿಂಗೈಕ್ಯ ಶಿವಕುಮಾರ ಶ್ರೀ ಜಗತ್ತಿಗೆ ಮಾದರಿ ಮಾಜಿ ಸಚಿವ_ಎಂ.ಬಿ ಪಾಟೀಲ್.

 

ತುಮಕೂರು_ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳು ಜಗತ್ತಿಗೆ ಮಾದರಿ ಪುರುಷರು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

 

ಶನಿವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಬಿ ಪಾಟೀಲ್ ರವರು ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಬೇಟಿ ನೀಡಿ ಆಶೀರ್ವಾದ ಪಡೆದರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು ಅದರ ಸಲುವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲು ಮಠಕೆ ಆಗಮಿಸಿ ರುವುದಾಗಿ ತಿಳಿಸಿದ ಅವರು ತುಮಕೂರಿನ ಸಿದ್ದಗಂಗಾ ಮಠದ ಸೇವೆ ಇಡೀ ಜಗತ್ತಿಗೆ ಮಾದರಿಯಾದ ಸೇವೆ ಮಠದಿಂದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು ತಾವು ಕೂಡ ಹಲವು ಬಾರಿ ಶ್ರೀ ಮಠಕ್ಕೆ ಬೇಡಿ ಭೇಟಿಕೊಟ್ಟು ಹಲವು ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

 

 

 

ಇನ್ನು ಶ್ರೀ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ತಾವು ಕೂಡ ಶ್ರೀಗಳ ಸೇವೆ ಮಾಡುವ ಅವಕಾಶ ದೊರಕಿದ್ದರೆ ಬಗ್ಗೆ ತಿಳಿಸಿದರು.

 

ಮಾಜಿ ಮುಖ್ಯಮಂತ್ರಿ ಮಾಜಿ ಸಿದ್ದರಾಮಯ್ಯ ಅವರು ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಸಂಬಂಧ ಪ್ರತಿಕ್ರಿಯಿಸಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಅರ್ಥದಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎನ್ನುವುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದು ಇನ್ನು ತಮಗೂ ಹಾಗೂ ತಮ್ಮ ಪಕ್ಷಕ್ಕೂ ಸಹ ಶ್ರೀಗಳು ಹಾಗೂ ಶ್ರೀ ಮಠಗಳ ಸೇವೆಯ ಬಗ್ಗೆ ಅಪಾರ ಗೌರವವಿದೆ ಇನ್ನು ಹಲವು ಶ್ರೀ ಮಠಗಳು ದಾಸೋಹ ಹಾಗೂ ಹಲವು ಕೊಡುಗೆಗಳು ನೀಡಿದ್ದು . ರಾಜ್ಯದ ಹಲವು ಶ್ರೀಮಠಗಳಿಂದ ಹಲವು ಕಾಯಕಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿವೆ , ಬಡ ಜನರಿಗೆ ಸಹಾಯ ಮಾಡುವುದರ ಜೊತೆಗೆ ಉತ್ತಮ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿವೆ ಹಾಗಾಗಿ ತಾವು ಹಾಗೂ ಸಿದ್ದರಾಮಯ್ಯನವರು ಶ್ರೀಗಳ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಅವರ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅವರು ಸ್ಪಷ್ಟೀಕರಣ ಸಹ ನೀಡಿದ್ದಾರೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಯಾವ ಕಾರಣಕ್ಕಾಗಿ ಅನರ್ಥವಾಗಿದೆ ಎಂಬುದನ್ನ ಸಿದ್ದರಾಮಯ್ಯನವರೇ ತಿಳಿಸಲಿದ್ದಾರೆ ಎಂದರು.

 

ಇನ್ನು ವ್ಯಾಪಾರದಲ್ಲಿ ಧರ್ಮ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇಂದಿನ ದಿನದಲ್ಲಿ ಇಂತಹ ಬೆಳವಣಿಗೆ ಬಹಳ ಕೆಟ್ಟದಾದ ಬೆಳವಣಿಗೆಯಾಗಿದ್ದು ಸಮಾಜದಲ್ಲಿ ಸಾಮರಸ್ಯ ಬಹಳ ಮುಖ್ಯ ಇನ್ನು ಸಿದ್ದಗಂಗಾಮಠದಲ್ಲಿ ಸಲ್ಲಿಸುತ್ತಿರುವ ಸೇವೆ ಯಾವುದೇ ಜಾತಿ, ಭೇದ ,ಬಾವ ಧರ್ಮಗಳ ಬಗ್ಗೆ ಅಪಸ್ವರ ಭಾವವಿಲ್ಲದೆ ಸೇವೆ ನೀಡುತ್ತಿವೆ ಆದರೆ ಇಂತಹ ಸಂದರ್ಭದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಧರ್ಮಗಳ ಬಗ್ಗೆ ಸಂಘರ್ಷ ಏರ್ಪಡುತ್ತದೆ ಆದರೆ ಮುಂದಿನ ದಿನದಲ್ಲಿ ಎಲ್ಲಾ ಧರ್ಮಗಳನ್ನು ಎಲ್ಲರೂ ಗೌರವಿಸುವಂತಾಗಬೇಕು ಎಂದರು.

 

 

ಇನ್ನು ಶ್ರೀಗಳಿಗೆ ಭಾರತರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಗಳಾದ ಶಿವಕುಮಾರ ಶ್ರೀಗಳಿಗೆ ಭಾರತರತ್ನ ನೀಡಿದೆ ಆದರೆ ಭಾರತರತ್ನಕ್ಕೆ ಮತ್ತಷ್ಟು ಗೌರವ ಹೆಚ್ಚಾಗಲಿದೆ ಎಂದರು.

 

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರ ಮಾಜಿ ಶಾಸಕ ರಫೀಕ್ ಅಹಮದ್, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version