ದೇವನಹಳ್ಳಿ : ಕೊರೊನ ಆರ್ಭಟ ಗ್ರಾಮಾಂತರಕ್ಕೆ ಹೆಚ್ಚು ಹರಡಿದ್ದು ಬಿದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಕಿತರಲ್ಲಿ ಗುಣಮುಖರಾದವರೇ ಹೆಚ್ಚಾಗಿದ್ದು ಸ್ಥಳಿಯ ಜನ ಪ್ರತಿನಿದಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಕೊರೊನ ತಡೆಗಟ್ಟ ಬಹುದಾಗಿದೆ ಎಂದು
ಪಿಡಿಒ ಸಿದ್ದರಾಮಪ್ಪ ಅಭಿಪ್ರಾಯಿಸಿದರು.
ಬಿದಲೂರು ಪಂಚಾಯಿತಿಯಲ್ಲಿ ಒಟ್ಟು 67 ರಲ್ಲಿ ಕೋವಿಡ್ ಪ್ರಕರಣ ದಾಖಲಾಗಿತ್ತು 44 ಸೋಂಕಿತರು ಗುಣಮುಖರಾ ಗಿದ್ದಾರೆ ಉಳಿದ 23 ಜನ ಸೋಂಕಿತರು ಚಿಕಿತ್ಸೆ ಪಡೆಯುತಿ ದ್ದಾರೆ.
ಬಿದಲೂರು ಪಂಚಾಯಿತಿಗೆ 7 ಗ್ರಾಮಗಳನ್ನು ಒಳಗೊಂಡಿವೆ.ಪ್ರತಿ ಗ್ರಾಮದಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಲಾಗುತಿದೆ. ಈಗಾಗಲೇ 666 ಜನ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ವಾರದಲ್ಲಿ 3 ಬಾರಿ ಸ್ಯಾನಿಟೇಸರ್ ಮಾಡಲಾಗುತಿದೆ.
ಕೊರೊನ ತಡೆಗಟ್ಟು ಊರಿನ ಪ್ರತಿಯೊಬ್ಬ ನಾಗರೀಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಪ್ರತಿದಿನ ಕೋವಿಡ್ ತಪಾಸಣೆ ನಡೆಸಲಾಗುತಿದೆ.ಗ್ರಾಮಸ್ಥರ ಆರೋಗ್ಯದಿಂದ ಮಾತ್ರ ಪಂಚಾಯಿತಿ ಅಭಿವೃದ್ದಿ ಸಾಧ್ಯವೆಂದು ತಿಳಿಸಿದರು.
ಬಿದಲೂರು ಗ್ರಾಮ ಪಂಚಾಯಿತಿ ಮೊಬೈಲ್ ಕ್ಲೀನಿಕ್ ಕೋವಿಡ್ ತಪಾಸಣೆ ವೇಳೆ ಬಿದಲೂರು ಗ್ರಾ.ಪಂ. ಅಧ್ಯಕ್ಷರು ಸದಸ್ಯರು ರಾದ ಕುಮಾರ್,ಡಾ||ವಂದನಾ,ದಿವ್ಯಶ್ರೀ,ಮಂಗಳಾ,ಆಶಾ ಕಾರ್ಯಕರ್ತೆಯರಾದ ನಾಗವೇಣಿ,ಗಿರಿಜಾ,ಅಂಗನವಾಡಿ ಕಾರ್ಯಕರ್ತೆ ಇಂದಿರಾ ಹಾಜರಿದ್ದರು.
ಗುರುಮೂರ್ತಿ ಬೂದಿಗೆರೆ
8861100990