ಕೇಂದ್ರದ ಕರೋನಾ ವಿಫಲತೆಗೆ ಸಿಎಂ ಹುದ್ದೆ ಬಲಿ..?! – ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕಸರತ್ತು 

 

 

 

ಕೇಂದ್ರದ ಕರೋನಾ ವಿಫಲತೆಗೆ ಸಿಎಂ ಹುದ್ದೆ ಬಲಿ..?!

– ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕಸರತ್ತು

– ಮಾಸ್ ನಾಯಕನ ತೆರೆಮರೆಗೆ ಕಳುಹಿಸುವ ಯತ್ನ

– ಕರೋನಾ ನಡುವೆ ಬಿಜೆಪಿ ರಾಜಕೀಯ.. ಥು ಹೇಸಿಗೆ..!

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸರಕಾರದ ಬುಡ ಅಲ್ಲಾಡಿಸಲು ಶುರು ಮಾಡಿದೆ. ಕರೋನಾ ಸಾವು ಮತ್ತು ಪ್ರಕರಣದಲ್ಲಿ ರಾಜ್ಯ ದೇಶಕ್ಕೆ ನಂ.1 ಎಂಬ ಕಳಂಕ ಅಂಟಿಸಿಕೊಂಡಿದೆ. ಈ ನಡುವೆ ಸಿಎಂ ಯಡಿಯೂರಪ್ಪ ಬದಲಾವಣೆ ಮಹಾ ಡ್ರಾಮಾಕ್ಕೆ ಬಿಜೆಪಿ ಹೈಕಮಾಂಡ್ ಚಾಲನೆ ಕೊಟ್ಟಿದೆ. ನಾಯಕತ್ವ ಬದಲಾವಣೆಗೆ ಬಿಜೆಪಿ ಶಾಸಕರೇ ಪಟ್ಟು ಹಿಡಿದಿದ್ದು, 20 ಶಾಸಕರು ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ತಿಂಗಳಿನಿಂದಲೂ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ಬಿಜೆಪಿಯಲ್ಲೇ ಒಂದು ಟೀಂ ಪ್ರಯತ್ನ ಮಾಡುತ್ತಿದೆ. ಕರೋನಾ ಕಷ್ಟದಲ್ಲಿ ಜನರ ಜತೆ ಇರಬೇಕಾದ ಶಾಸಕರು ದೆಹಲಿಯಲ್ಲಿದ್ದಾರೆ. ಜೂನ್ 7 ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು,ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ.

ಬಿಜೆಪಿ ಪಾಳಯದಲ್ಲಿ ಸಾಲು ಸಾಲು ಸಭೆಗಳು ನಡೆಯುತ್ತಿದ್ದು, ಬೊಮ್ಮಾಯಿ, ವಿಜಯೇಂದ್ರ ಅವರು ಮೇ 7,8,9ರಂದು ಹೈಕಮಾಂಡ್ ಭೇಟಿ ಮಾಡಿದ್ದರು. ಯಡಿಯೂರಪ್ಪ ಮೇಲೆ ಹೈಕಮಾಂಡ್ ಗರಂ ಆಗಿತ್ತು. ಶಾಸಕರಾದ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ ಅವರು ದೆಹಲಿಯಲ್ಲಿದ್ದಾರೆ.

ಸಿಎಂ ಹುದ್ದೆಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರ ಹೆಸರುಗಳು ಬಲವಾಗಿಯೇ ಕೇಳಿಬರುತ್ತಿದೆ.

ಕಳೆದೆರಡು ದಿನಗಳಿಂದಲೂ ಬಿಜೆಪಿ ವರಿಷ್ಠರ ಭೇಟಿಗಾಗಿ ಶಾಸಕರು ಕಾದು ಕುಳಿತಿದಿದ್ದಾರೆ. ಬಿಜೆಪಿಯ ರೆಬಲ್ ಶಾಸಕರ ನಾಯಕತ್ವವನ್ನು ಸಿಪಿ ಯೋಗೀಶ್ವರ್ ವಹಿಸಿಕೊಂಡಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಬುಧವಾರ ಸಂಜೆಯೇ ಬಿಜೆಪಿ ವರಿಷ್ಠರ ಜೊತೆಗೆ ಬಿಜೆಪಿ ಶಾಸಕರು ಸಭೆ ನಡೆಸೋದು ಬಹುತೇಕ ಖಚಿತ. ಅಲ್ಲದೇ ರಾಜ್ಯದಲ್ಲಿ ಜೂನ್ 10ರ ಒಳಗಾಗಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಕೇವಲ 6 ತಿಂಗಳ ಅವಧಿಗೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಾಗಿತ್ತು.ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಪ್ರವಾಹ, ಕೊರೊನಾ ಅಬ್ಬರದಿಂದಲಾಗಿ ಸಿಎಂ ಕುರ್ಚಿ ಭದ್ರವಾಗಿತ್ತು. ಈಗ ಕೊರೊನಾ ಸಂಕಷ್ಟದ ನಡುವಲ್ಲೇ ಬಿಜೆಪಿ ಶಾಸಕರೇ ನಾಯಕತ್ವ ಬದಲಾವಣೆಗೆ ಕಹಳೆ ಮೊಳಗಿಸಿದ್ದಾರೆ. ಒಂದೊಮ್ಮೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ರೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಿಎಂ ಪುತ್ರ ವಿಜಯೇಂದ್ರ ಡಿಸಿಎಂ ಆಗುವ ಸಾಧ್ಯತೆ ಇದೆ.

ಕೇಂದ್ರದ ವೈಫಲ್ಯಕ್ಕೆ ಸಿಎಂ ಹುದ್ದೆ ಬಲಿ?: ರಾಜ್ಯದ ಮಟ್ಟಿಗೆ ಕೇಂದ್ರ ಸರಕಾರದ ಸಹಕಾರ ಅತೀ ಕಡಿಮೆ. ಪ್ರವಾಹದ ವೇಳೆಯೂ ಹೇಳುವಂತ ಸಹಕಾರ ಸಿಗಲಿಲ್ಲ. ಎರಡನೇ ಅಲೆಯ ಕರೋನಾದಲ್ಲಿ ಲಸಿಕೆ, ಆಮ್ಲಜನಕ ನೀಡುವಲ್ಲಿ ಕೇಂದ್ರ ವಿಳಂಬ ಮಾಡಿದ್ದರಿಂದ ರಾಜ್ಯದಲ್ಲಿ ಕರೋನಾ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಯಡಿಯೂರಪ್ಪ ಅವರ ಸಂಪುಟದ ಶಾಸಕರು, ಸಚಿವರು ಕರೋನಾ ಕೆಲಸ ಮಾಡುವಲ್ಲಿ ವಿಫಲವಾಗಿದ್ದು ಇಳಿ ವಯಸ್ಸಿನಲ್ಲಿ ಸಂಕಟಕ್ಕೆ ಸಿಲುಕಿದ್ದಾರೆ. ರಾಜ್ಯದ ಮಾಸ್ ನಾಯಕರಲ್ಲಿ ಒಬ್ಬರಾದ ಯಡಿಯೂರಪ್ಪ ಇದೀಗ ಕರೋನಾ ವೇಳೆ ರಾಜಕೀಯಕ್ಕೆ ಕುರ್ಚಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ಕಡೆ ಪಕ್ಷದ ವರ್ಚಸ್ಸು ಸಂಪೂರ್ಣ ಕುಂಟಿತವಾಗಿದೆ. ಇನ್ನೊಂದೆಡೆ ಕರೋನಾ ವೈಫಲ್ಯತೆ ಪಕ್ಷಕ್ಕೆ ಕೆಟ್ಟ ಹೆಸರು ತರುವ ಹಿನ್ನೆಲೆ ಈ ಬೆಳವಣಿಗೆ ನಡೆಯುತ್ತಿದೆ. ಆದರೆ ರಾಜಕೀಯಕ್ಕೆ ಇದು ಸಮಯವಲ್ಲ. ಮೊದಲು ಕೇಂದ್ರ, ರಾಜ್ಯ ಸೇರಿ ಜನರ ಜೀವ, ಬದುಕು ಉಳಿಸಲಿ ಎಂಬುದು ನಮ್ಮ ಕಳಕಳಿ..!

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version