ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ಅಗತ್ಯ ವಸ್ತುಗಳ ದರಗಳು ಪ್ರತಿ ದಿನವೂ ಗಗನಕ್ಕೇರುತ್ತಿದ್ದು ಸಾಮನ್ಯ ಜನತೆ ಪರದಾಡುವಂತೆ ಅಗಿದೆ ಎಂದು ಎಂ.ಎಲ್.ಸಿ ರವಿ ಆಕ್ರೋಶ ವ್ಯಕ್ತ ಪಡಿಸಿದರು ದೇವನಹಳ್ಳಿ ಪಟ್ಟಣದ ಇಂಡಿಯನ್ ಪೆಟ್ರೋಲ್ ಬ್ಯಾಂಕ್ ಮುಂಬಾಗ ದೇವನಹಳ್ಳಿ ಕಾಂಗ್ರೆಸ್ ಮುಖಂಡರು ವತಿಯಿಂದ ಪೆಟ್ರೊಲ್ ಮತ್ತು ಡಿಸಲ್ ದರ ಏರಿಕೆಯ ವಿರುದ್ದ ಪ್ರತಿಭಟನೆ ಮಾಡಿ ಮಾತನಾಡಿ
ರಾಜ್ಯ ಸರ್ಕಾ ರದ ಸಚಿವರು ಹೆಣದ ಮೇಲೆ ಹಣ ಮಾಡಲು ಹೊರಡಿದ್ದಾರೆ ಅರೊಗ್ಯ ಸಚಿವ ಡಾ” ಸುದಾಕರ್ ಟೋಪಿ ಸಚಿವ ಅಗಿದ್ದು ಎಲ್ಲಾರಿಗೆ ಟೋಪಿ ಹಾಕಿ ಕೊಂಡು ಹಣ ಮಾಡುತ್ತಿದ್ದಾನೆ ಎಂದು ಹೇಳಿದರು ಅಗತ್ಯ ವಸ್ತುಗಳ ಧರ ಗಗನಕ್ಕೆ ಏರಿದ್ದು ಜನರ ಅಕ್ರೋಶ ಮುಗಿಲು ಮುಟ್ಟಿದೆ.
ದೇಶವನ್ನು ರಾಮರಾಜ್ಯ ಮಾಡುವುದಾಗಿ ಹೇಳಿ ಅಧಿಕಾರ ಹಿಡಿದು ಇವತ್ತು ಜನರು ದಿನ ನಿತ್ಯ ಬಳಸುವ ಎಲ್ಲಾ ಪದಾರ್ಥಗಳು ಕೈಗೆಟಕುವ ಪರಿಸ್ಥಿತಿ ಇಲ್ಲದಂತಾಗಿದೆ. ಬಡ ಜನರ ಶಾಪ ಅಷ್ಟಿಷ್ಟಲ್ಲ .ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ಪೆಟ್ರೋಲ್ ದರ ಕೇವಲ 1 ರೂಪಾಯಿ ಜಾಸ್ತಿಯಾದ ಸಂದರ್ಭದಲ್ಲಿ ರಸ್ತೆಯಲ್ಲಿ ಸೈಕಲ್ ಮೇಲೆ ರಾಜಭವನ ಮುತ್ತಿಗೆ ಹಾಕಲು ಹೊರಟು ಒಳಗಡೆ ಬಿಡದಿದ್ದಾಗ ರಾಜಭವನದ ಮುಂದೆ ಮಲಗಿ ಧರಣಿ ಸತ್ಯಾಗ್ರಹ ಮಾಡಿ ರಂಪ ಮಾಡಿದ್ದನ್ನು ಜನ ಮರೆತಿಲ್ಲ.
ಆದರೆ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದ್ದು ಜನರ ಸಂಕಷ್ಟ ಮರೆತಿರುವ ಸರ್ಕಾರ ಗಳು ಹಾಗೂ ಅತೀ ಹೆಚ್ಚು ಲೋಕಸಭಾ ಸದಸ್ಯರುಗಳು ಜನರು ಶಾಪ ಹಾಕುವ ಮೊದಲು ಕೂಡಲೇ ದರಗಳನ್ನು ಕಡಿಮೆ ಮಾಡುವಂತೆ ಪ್ರಧಾನ ಮಂತ್ರಿಗಳಿಗೆ ಒತ್ತಾಯ ತರಬೇಕೆಂದು ಈ ಪ್ರತಿಭಟನೆಯ ಮುಖಾಂತರ ಒತ್ತಾಯಿಸುತ್ತೇನೆ
ಎಂದರು
ಇದೇ ಸಂದರ್ಬ ದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ. ಮುನಿನರಸಿಂಹಯ್ಯ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಸನ್ನಕುಮಾರ್. ಉಪಾಧ್ಯಕ್ಷರು ಶಾಂತಕುಮಾರ್ .ಎಸ್. ಪಿ. ಮುನಿರಾಜು. ಮಾರುತಿ. ಚಿನ್ನಪ್ಪ. ಇನ್ನೂ ಅನೇಕ ಕಾಂಗ್ರಾಸ ಮುಂಖಡರು ಕಾರ್ಯ ಕರ್ತ ರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು
ಗುರುಮೂರ್ತಿ ಬೂದಿಗೆರೆ
8861100990