ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ರಾಷ್ಟಿoಯಾ ಮಾದಿಗರ ಪ್ರಚಾರಾಂದೋಲನ ಸಮಿತಿಯಿಂದ ದಿ|| ಕುಮಾರ್ ಮಾದರ್ (ತುಮಕೂರು ಜಿಲ್ಲಾ ಎಸ್ಸಿ/ಎಸ್ಟಿ ಅಟ್ರಾಸಿಟಿ ಸಮಿತಿ ಸದಸ್ಯರು) ನೆನಪಿನಾರ್ಥವಾಗಿ ಕೋವಿಡ್-೧೯ ಎರಡನೇ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ ಎನ್.ಆರ್.ಕಾಲೋನಿಯ ಸಂಕಷ್ಟದಲ್ಲಿರುವ ೧೫೦ ಕುಟುಂಬಗಳೀಗೆ ದಿನಸಿ ಕಿಟ್ ವಿತರಣೆ ಮತ್ತು ಕರೋನಾ ಕುರಿತ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಾಗೃತಿ ಸಭೆಯನ್ನು ಉದ್ಧೇಶಿಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಆಧಿಕಾರಿಗಳಾದ ಕೆ.ವಿದ್ಯಾಕುಮಾರಿಯವರು ಮಾತನಾಡಿ ಕರೋನಾದಿಂದ ಹೊರಬಂದು ಬದುಕ್ಕನ್ನು ಕಟ್ಟಿಕೊಳ್ಳಲು ದಮನಿತ ಸಮುದಾಯಗಳು ಮುಂದಾಗಬೇಕು. ಈ ಕರೋನಾ ಎಂಬುದು ತಾತ್ಕಾಲಿಕವಾದುದು, ಇದಕ್ಕೆ ನಾವು ಧೈರ್ಯದಿಂದ ಜಾಗೃತರಾಗಿ ಎದುರಿಸಬೇಕಿದೆ. ಇಂತಹ ಎಷ್ಟೋ ಜ್ವಲಂತ ಸಮಸ್ಯೆಗಳನ್ನು ನಮ್ಮ ಹಿರಿಯರು ಎದುರಿಸಿದ್ದಾರೆ. ಹಾಗಾಗಿ ನಾವು ಕರೋನಾ ಭಯ ಬಿಟ್ಟು, ಸರ್ಕಾರ ಮತ್ತು ತಜ್ಙರು ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಪ್ರತಿ ಪ್ರಜೆಗೂ ಸರ್ಕಾರ ಲಸಿಕೆ ನೀಡಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಂಚಿತ ಸಮುದಾಯಗಳು ಕೋವಿಡ್ ಭಯವನ್ನು ಬಿಡಬೇಕು. ಕೋವಿಡ್‌ನಿಂದ ಸ್ಲಂ ಮಕ್ಕಳ ಶೈಕ್ಷಣಿಕ ಭವಿಷ್ಯ ಪ್ರಶ್ನಾರ್ಥಕವಾಗಿದ್ದು, ನಮ್ಮ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಮೂರನೇ ಅಲೆಯಿಂದ ಪಾರಾಗಲು ಎಚೆತ್ತುಕೊಂಡು ಮಕ್ಕಳ ಮುಂದಿನ ಬದುಕನ್ನು ಕಟ್ಟಿಕೊಡುವ ದಿಸೆಯಲ್ಲಿ ಪೋಷಕರು ಕಾರ್ಯ ಪ್ರವೃತ್ತರಾಗಬೇಕಿದೆ. ಇವತ್ತು ನಾನು ನಿಮ್ಮ ಜೊತೆ ಮಾತನಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ, ಯಾಕಂದ್ರೆ ನಿಮ್ಮಗಳ ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ನನ್ನ ಕಛೇರಿಗೆ ಯಾವಾಗಾದ್ರೂ ಬಂದು ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು ನಾನು ನಿಮ್ಮ ಜೊತೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸದಾ ಜೊತೆಯಲ್ಲಿರುತ್ತೇನೆ ಎಂದರು.