ತೈಲ ಬೆಲೆ ಏರಿಕೆ ಬಿಜೆಪಿಯ ಬಹುದೊಡ್ಡ ಸಾಧನೆ_ ಡಿ ಕೆ ಶಿವಕುಮಾರ್.

 

 

ದೇಶದ ಜನತೆಯ ನಿರೀಕ್ಷೆಯಂತೆ ಬಿಜೆಪಿ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ದೇಶದ ಜನರು ಹಲವು ಮಹತ್ತರ ಆಸೆಗಳನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ ಆದರೆ ಬಿಜೆಪಿ ಸರ್ಕಾರ ಪ್ರತಿದಿನ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಮೂಲಕ ಬಹುದೊಡ್ಡ ಗದಾಪ್ರಹಾರ ನಡೆಸುತ್ತಿದ್ದು .

ಇದಕ್ಕೆ ಪ್ರಮುಖ ಸಾಕ್ಷಿ ತೈಲ ಬೆಲೆ ಏರಿಕೆ ಇಂತಹ ಸಂಕಷ್ಟ ಕಾಲದಲ್ಲಿ ಸರ್ಕಾರ ತೈಲ ಬೆಲೆಗಳನ್ನು ಮೂರಂಕಿ ಗೆ ತಂದು ನಿಲ್ಲಿಸಿದ್ದು ಇದರಿಂದ ಸಾರ್ವಜನಿಕರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದರು.

 

 

ಇಂದು ತುಮಕೂರಿನ ಜಿಲ್ಲೆಯ ತಿಪಟೂರು ತಾಲೂಕಿಗೆ ಭೇಟಿ ನೀಡಲಿರುವ ಡಿ ಕೆ ಶಿವಕುಮಾರ್, ಕೆ ಬಿ ಕ್ರಾಸ್ ನಲ್ಲಿ ನಡೆಯುತ್ತಿರುವ ತೈಲಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತೆರಳುವ ಮಾರ್ಗಮಧ್ಯೆ ತುಮಕೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

 

ತೈಲ ಬೆಲೆ ಏರಿಕೆಯಿಂದ ಸಾರ್ವಜನಿಕರ ದಿನಬಳಕೆಯ ವಸ್ತುಗಳು ಗರಿಷ್ಠಮಟ್ಟದಲ್ಲಿ ಏರಿಕೆಯಾಗಿದ್ದು ಸಾರ್ವಜನಿಕರು ಜೀವನ ನಡೆಸಲು ಹರಸಾಹಸಪಡುತ್ತಿದ್ದಾರೆ, ಸರ್ಕಾರ ತೈಲಬೆಲೆ ಮೇಲೆ ವಿಧಿಸುತ್ತಿರುವ ತೆರಿಗೆ ಗರಿಷ್ಠಮಟ್ಟದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ದಿನಬಳಕೆ ವಸ್ತುಗಳಿಂದ ಹಿಡಿದು ಕಟ್ಟಡ ಸಾಮಗ್ರಿ ಕೈಗಾರಿಕೆ ಗೃಹಪಯೋಗಿ ವಸ್ತುಗಳು, ದಿನಸಿ ಪದಾರ್ಥಗಳು , ಬೇಳೆ, ರಸಗೊಬ್ಬರ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದರು ಸರ್ಕಾರ ಕಣ್ಮುಚ್ಚಿಕುಳಿತಿರುವುದನ್ನು ನೋಡಿದರೆ ಸರ್ಕಾರ ವ್ಯವಸ್ಥಿತವಾಗಿ ಸಾರ್ವಜನಿಕರ ಜೇಬಿನ ಹಣ ಪಿಕ್ ಪಾಕೆಟ್ ಮಾಡುತ್ತಿದೆ ಬಿಜೆಪಿ ಸರ್ಕಾರ ಪಿಕ್ಪಾಕೆಟ್ ಸರ್ಕಾರ ಎಂದು ಲೇವಡಿ ಮಾಡಿದರು.

 

ಇಂದು ರಾಜ್ಯಾದ್ಯಂತ 900 ಜಿಲ್ಲಾ ಪಂಚಾಯತ್ ಹಾಗೂ ಹೋಬಳಿ ಮಟ್ಟದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ನಾಳೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಇದು ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಲ್ಲಿ ಶ್ರೀಸಾಮಾನ್ಯನ ಪ್ರತಿಭಟನೆ ಎಂದರು.

ಇದೇ ಸಂದರ್ಭದಲ್ಲಿ ಕುಣಿಗಲ್ ಶಾಸಕರು ಡಾಕ್ಟರ್ ರಂಗನಾಥ್, ತುಮಕೂರು ನಗರ ಮಾಜಿ ಶಾಸಕರಾದ ರಫೀಕ್ ಅಹಮದ್ ,ಕಾಂಗ್ರೆಸ್ ಮುಖಂಡರಾದ ಅತಿಕ್ ಅಹಮದ್, ಚಂದ್ರಶೇಖರ್ ಗೌಡ, ನರಸಿಂಹಮೂರ್ತಿ ಬಿಜಿ ನಿಂಗರಾಜು, ಶಿವಾಜಿ, ಕೃಷ್ಣಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version