ದೇವನಹಳ್ಳಿ : ಪಟ್ಟಣವು ಬೆಂಗಳೂರು ನಗರದ ಗಡಿಭಾಗದಿಂದ ೨೦ ಕಿ.ಮಿ. ದೂರ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವೆ ಇರುವುದರಿಂದ ದಿನವೂ ಸಾವಿರಾರು ನೌಕರರು ವಿಮಾನ ನಿಲ್ದಾಣದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು, ಪಟ್ಟಣ ಯಾವುದೇ ಅಭಿವೃದ್ಧಿ ಕಾಣದೇ ಇರುವುದು ವಿಪರ್ಯಾಸ, ಪಟ್ಟಣದಿಂದ ಕೆಐಡಿಬಿ ಸುಮಾರು ೬ಕಿ.ಮಿ ಅಂತರವಿದ್ದು ವಿಮಾನ ನಿಲ್ದಾಣವೂ ಹೊಸ ಟರ್ಮಿನಲ್‌ಗಳನ್ನು ಸಾದರಪಡಿಸುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅನುದಾನದ ಕೊರತೆ ಎದ್ದು ಕಾಣುತ್ತಿದ್ದು ತಮ್ಮ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ ಅನುದಾನ ನೀಡಬೇಕು ಎಂದು ಅಧ್ಯಕ್ಷೆ ಜಿ.ರೇಖಾ ಮನವಿ ಮಾಡಿದರು.
ಅವರು ಪಟ್ಟಣದ ಬಯಪ ಕಛೇರಿಯಲ್ಲಿ ಅಧ್ಯಕ್ಷರಾದ ಎ.ರವಿಯವರಿಗೆ ಮನವಿ ನೀಡಿ ಮಾತನಾಡಿ ಪಟ್ಟಣದಲ್ಲಿ ಸುಮಾರು ೩೦ ವರ್ಷಗಳಿಂದಲೂ ನಿವೇಶನ ನೀಡಲಾಗಿಲ್ಲ, ಪಟ್ಟಣದ ಅಭಿವೃದ್ಧಿಗೆ ಚರಂಡಿ ಕಾಮಗಾರಿ ಕುಡಿಯುವ ನೀರಿನ ಯೋಜನೆ ಮುಂತಾದ ಮೂಲಭೂತ ಸೌಕರ್ಯ ಒದಗಿಸಲು ಅನುದಾನದ ಕೊರತೆಯಿರುವುದರಿಂದ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.
ಪಟ್ಟಣದ ಅಭಿವೃದ್ಧಿಗಾಗಿ ಬಯಪ ದಿಂದ ಅಧ್ಯಕ್ಷರಿಗೆ ಮನವಿ
ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್ ಮಾತನಾಡಿ ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಮನವಿ ನೀಡಲಾಗಿದ್ದು ಯಾವುದೇ ವಿಶೇಷ ಅನುದಾನ ನೀಡಿಲ್ಲ, ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಸಮಗ್ರ ಅಭಿವೃದ್ಧಿಪಡಿಸಲು ತಮ್ಮ ಪ್ರಾಧಿಕಾರದಿಂದ ಅನುದಾನ ನೀಡಬೇಕೆಂದು ಸದಸ್ಯರೆಲ್ಲರ ಪರವಾಗಿ ಮನವಿ ಮಾಡುತ್ತಿದ್ದೇವೆ ಎಂದರು,
ಈ ಸಮಯದಲ್ಲಿ ಎ.ರವಿ ಮಾತನಾಡಿ ದೇವನಹಳ್ಳಿ ಪುರಸಭೆಯ ಅಭಿವೃದ್ಧಿಗೆ ಸರ್ಕಾರದ ಮುಂದೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಬಡ್ಜೆಟ್ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿಗಳ ಗಮನ ಸೆಳೆದು ಅನುದಾನ ಬಿಡುಗಡೆಗೆ ಮನವಿ ಂಆಡಿ, ೨ ಟೌನ್‌ಷಿಪ್ ಮಾಡಲು ಉದ್ದೇಶಿಸಿದ್ದು ಜಿಕ್ಕಜಾಲ ಹಾಗೂ ಸೊಣ್ಣಪ್ಪನಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ, ತಾಲ್ಳೂಕಿನಲ್ಲಿ ೨೮ ಕೆರೆಗಳ ಅಭಿವೃದ್ದಿಪಡಿಸಲು ಯೋಜನೆ ರೂಪಿಸಿದ್ದು ಅತಿ ಶೀಘ್ರದಲ್ಲಿ ೮ಕೆರೆಗಳ ಅಭಿವೃದ್ದಿಗೆ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ, ಕೊರೋನಾದಿಂದಾಗಿ ನಮ್ಮ ಪ್ರಾಧಿಕಾರ ೧ವರ್ಷದಿಂದಲೂ ಕೆಲಸ ನಿರ್ವಹಿಸಲಾಗಿಲ್ಲ, ಸರ್ಕಾರ ಇಷ್ಟರಲ್ಲೆ ಅದಕ್ಕೆ ಗ್ರೀನ್‌ಸಿಗ್ನಲ್ ನೀಡಲಿದೆ ಎಂದರು.
ಈ ಸಮಯದಲ್ಲಿ ಮುಖ್ಯಾಧಿಕಾರಿ ಎ.ಹೆಚ್.ನಾಗರಾಜು, ಇಂಜಿನಿಯರ್ ಗಜೇಂದ್ರ, ಪುರಸಭಾ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ನಾಗೇಶ್ ಸದಸ್ಯರುಗಳಾದ ಜಿ.ಎ.ರವೀಂದ್ರ, ವಿ.ಕೋಮಲ, ಕೆ.ಗೀತಾ, ಲೀಲಾವತಿ, ಎಂ.ಸೋಮಶೇಖರ್‌ಬಾಬು, ಹು||ವೇಣುಗೋಪಾಲ್(ಗೋಪಿ) ನಾರಾಯಣಸ್ವಾಮಿ (ಬಾಂಬೆ), ಡಿ.ಆರ್.ಬಾಲರಾಜು, ಎನ್.ಕೆ.ಮಂಜುನಾಥ್, ಎಸ್.ಸಿ.ಚಂದ್ರಪ್ಪ, ಎಸ್.ಸುಮಿತ್ರ, ಡಿ.ಗೋಪಮ್ಮ, ಎನ್.ರಘು, ಮಂಜುಳಾ, ಜಿ.ಸುರೇಶ್, ವಿ.ಚೈತ್ರ, ಡಿ.ಎಂ.ಮುನಿಕೃಷ್ಣ, ಲಕ್ಷ್ಮೀ ಅಂಬರೀಶ್, ರತ್ನಮ್ಮರವಿಕುಮಾರ್ ಭಾಗವಹಿಸಿದ್ದರು.
ಗುರುಮೂರ್ತಿ ಬೂದಿಗೆರೆ
8861100990