ಏಷ್ಯಾದ ಪ್ರಭಾವಿ 40 ವ್ಯಕ್ತಿಗಳ ಪಟ್ಟಿಯಲ್ಲಿ ನಿವೇದನ್!ಹಳ್ಳಿ ಹುಡುಗನ ಸಾಧನೆಗೆ ಸಲಾಂ ಯುವಕರಿಗೆ ಮಾದರಿ: ಮತ್ತಷ್ಟು ಪ್ರಯೋಗ
ಶಿವಮೊಗ್ಗ: ಏಷ್ಯಾದ ಪ್ರಭಾವಿ ಮ್ಯಾಗಜಿನ್ “ಏಷ್ಯಾ ಒನ್” ಬಿಡುಗಡೆ ಮಾಡಿದ 40 ವರ್ಷದೊಳಗಿನ ಏಷ್ಯಾ ಖಂಡದ ಅತ್ಯಂತ ಪ್ರಭಾವಿ 40 ವರ್ಷಗಳ ಪಟ್ಟಿಯಲ್ಲಿ ಅಡಿಕೆ, ಟೀ ಸಂಶೋಧನಾ ತೀರ್ಥಹಳ್ಳಿ ಯ ನಿವೇದನ್ ನಿಂಪೆ ಸ್ಥಾನ ಪಡೆದಿದ್ದಾರೆ. ಈ ಮೂಲಕ ಹಳ್ಳಿಯಿಂದ ದಿಲ್ಲಿವರೆಗೆ ನಿವೇದನ್ ಹೆಸರು ಮಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಪೋರ್ಬ್ ನಿಯತಕಾಲಿಕೆ ಪ್ರಕಟಿಸುತ್ತದೆ. ಅದೇ ಮಾದರಿಯಲ್ಲಿ ಏಷ್ಯಾದ ಪ್ರಭಾವಿ ವ್ಯಕ್ತಿಗಳ ಆಯ್ಕೆಯನ್ನು ಏಷ್ಯಾ ಒನ್ ಮ್ಯಾಗಜಿನ್ ಬಿಡುಗಡೆ ಮಾಡಲಿದೆ ಎಂದು ವರದಿ ಹೇಳಿದೆ.
ನಿವೇದನ್ ನೆಂಪೆ ಅಡಕೆ ಟೀ ಸಂಶೋಧಿಸಿ ದೇಶದ ಗಮನ ಸೆಳೆದಿದ್ದರು. ಅಡಕೆ ಮೌಲ್ಯವರ್ಧನೆ ಹೆಚ್ಚಿಸಿದ್ದರು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ಅವರಿಗೆ ಮೇಕ್ ಇನ್ ಇಂಡಿಯಾ ಪ್ರಶಸ್ತಿ ನೀಡಿತ್ತು. ಅಡಕೆಯಿಂದ ಜ್ಯೂಸ್, ಶಾಂಪೂವನ್ನು ಸಿದ್ಧಪಡಿಸಿದ್ದರು. ಬಳಿಕ ಅನೇಕ ಹೊಸ ಪ್ರಯೋಗಗಳಿಗೆ ಮುಂದಾಗಿದ್ದರು. ನೂರಾರು ಪ್ರಶಸ್ತಿ ಪಡೆದಿರುವ ಮಲೆನಾಡ ಹುಡುಗನ ಈ ಸಾಧನೆ ಕೆಲಸ ಕಳೆದುಕೊಂಡು ಮನೆ ಸೇರಿರುವ ಲಕ್ಷಾಂತರ ಯುವ ಜನತೆಗೆ ಮಾದರಿಯಾಗಿದೆ. ತಾಳ್ಮೆ, ಶ್ರಮ, ಪ್ರಾಮಾಣಿಕತೆ, ಛಲ ಇದ್ದರೆ ಏನೂ ಮಾಡಬಹುದು ಅಲ್ಲವೇ..?. ಮತ್ತೊಮ್ಮೆ ಹೊಸ ಸಾಧನೆಯತ್ತ ಹೊರಟಿರುವ ನಿವೇದನ್.