ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬಹಿರಂಗ ಸವಾಲು ಹಾಕಿದ : ಡಾ.ಚಿ.ನಾ.ರಾಮು

ಮಲ್ಲಿಕಾರ್ಜುನ ಖರ್ಗೆ ಅವರಿಗೊಂದು ಬಹಿರಂಗ ಸವಾಲು: ಡಾ.ಚಿ.ನಾ.ರಾಮು

 

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ದಲಿತರಾಗಿ ಹುಟ್ಟಿದರೂ ದಲಿತರೊಂದಿಗೆ ಎಂದಿಗೂ ಗುರುತಿಸಿಕೊಳ್ಳದ ಬಲಿತ (ಎಲೈಟ್) ದಲಿತ ದಲಿತರಾಗಿದ್ದಾರೆ‌. ಕೇವಲ ರಾಜಕೀಯಕ್ಕಾಗಿ ದಲಿತತ್ವ ಮತ್ತು ಮೀಸಲಾತಿ ಬಳಸಿಕೊಂಡು ಅವರ ಜೀವನಪೂರ ಚುನಾವಣೆಗಳನ್ನು ಗೆದ್ದಿದ್ದಾರೆ. ಅವರ ಜೀವನದಲ್ಲಿ ದಲಿತರ ಕಲ್ಯಾಣಕ್ಕೆ ಯಾವತ್ತೂ ಏನನ್ನೂ ಮಾಡಿಲ್ಲ. ನನಗೆ ದಲಿತ ನಾಯಕ ಅಂತ ಹುದ್ದೆ ಕೊಡಬೇಡಿ ಪಕ್ಷ ನಿಷ್ಠೆ ನೋಡಿ ಕೊಡುವುದಾದರೆ ಮಾತ್ರ ಕೊಡಿ ಅನ್ನುತ್ತಾರೆ. ಅಂದರೆ ದಲಿತ ಕುಲದ ಬಗ್ಗೆ, ಆ ಕುಲದ ಜೊತೆ ಗುರುತಿಸಿಕೊಳ್ಳಲು ಅವರಿಗಿರುವ ಹಿಂಜರಿಕೆ, ಹೇವರಿಕೆ ಎಂತದ್ದು ಅನೇಕ ಸಲ ಸಾಬೀತಾಗುತ್ತಲೇ ಬಂದಿದೆ. ಇದೀಗ ಅವರು ತಮ್ಮ ಜೀವಮಾನದ ಪ್ರಮಾದವೊಂದನ್ನು ಮಾಡಿದ್ದಾರೆ‌. “ಕಲಬುರಗಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಆರೆಸ್ಸೆಸ್ ಕಾರಣ” ಎಂದು ಹಲುಬಿದ್ದಾರೆ. ಅವರಿಗೆ ನಾನೊಂದು ಸವಾಲನ್ನು ಹಾಕುತ್ತಿದ್ದೇನೆ‌. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪಕ್ಷದ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ನನಗೆ ಇರುವ ರಾಜಕೀಯ ಮಾಹಿತಿ ಆಧರಿಸಿ ಈ ಸವಾಲು ಹಾಕುತ್ತಿದ್ದೇನೆ‌. ರಾಷ್ಟ ಚಿಂತನೆ, ದೇಶ ಪ್ರೇಮ, ಸಶಕ್ತ ದೇಶ ನಿರ್ಮಾಣ, ಎಲ್ಲಾ ಜನರ ಅಭ್ಯುದಯವನ್ನೇ ಉಸಿರಾಗಿಸಿಕೊಂಡಿರುವ ಆರೆಸ್ಸೆಸ್ ವಿರುದ್ಧ ಸುಳ್ಳು ಆರೋಪ ಸುರಿದು ತಮ್ಮಲ್ಲಿನ ಕ್ಷುಲ್ಲಕ ವ್ಯಕ್ತಿತ್ವದ ಚಹರೆ ತೋರಿರುವ ಖರ್ಗೆಯವರಿಗೆ ಬಹಿರಂಗ ಸವಾಲು ಹಾಕುತ್ತಿದ್ದೇನೆ‌‌. ತಮ್ಮ ಸೋಲಿಗೆ ಆರೆಸ್ಸೆಸ್ ಕಾರಣ ಎಂಬುದನ್ನು ಅವರು ಸಾಕ್ಷಿ ಸಮೇತ ನಿರೂಪಿಸಲಿ. ಇಲ್ಲವೇ ಭೇಷರತ್ ಕ್ಷಮೆ ಕೋರಲಿ. 

ಖರ್ಗೆ ಅವರ ಸೋಲಿಗೆ ಸಿದ್ದರಾಮಯ್ಯ ಮತ್ತು ಅವರ ಪಟಾಲಂ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ತಮ್ಮ ಪಕ್ಷದೊಳಗಿನ ಸಂಚಿನಿಂದ ಸೋತ ಅವರು ರಾಜಕೀಯ ರಹಿತ ಸಂಘಟನೆ ಆರೆಸ್ಸೆಸ್ ಮೇಲೆ ಧೂಳೆತ್ತಿ ಹಾಕಲು ಹೊರಟಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.

ಖರ್ಗೆ ಅವರನ್ನು ಸೋಲಿಸಲು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿ ಅವರ ರಾಜೀನಾಮೆಯನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸುವಂತೆ ಮಾಡಿದರು, ಮಾಲೀಕಯ್ಯ ಗುತ್ತೇದಾರ್ , ಬಾಬುರಾವ್ ಚಿಂಚನಸೂರ್ ಸೇರಿದಂತೆ ಖರ್ಗೆ ವಿರೋಧಿಗಳನ್ನು ಒಂದು ಮಾಡಿ ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದರು. ಖರ್ಗೆ ಸರ್ವಾಧಿಕಾರದಿಂದ ರೋಸತ್ತಿದ್ದ ನಾಯಕರು ಸಿದ್ದು ಮಾತು ಕೇಳಿ ಆ ಪಕ್ಷ ಬಿಟ್ಟರು. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮದೇ ತಪ್ಪುಗಳಿಂದ ಎಲ್ಲರನ್ನೂ ಕಳೆದುಕೊಂಡ ಖರ್ಗೆ ಚುನಾವಣೆಯಲ್ಲಿ ಸೋಲುವಂತಾಯಿತು. ಸಿದ್ದರಾಮಯ್ಯ ಅವರೇ ಈ ಸೋಲಿಗೆ ವೇದಿಕೆ ಸಿದ್ಧಪಡಿಸಿದ್ದರು. ಈಗ ಸಿದ್ದರಾಮಯ್ಯ ಜತೆ ಸಂಬಂಧ ಸುಧಾರಣೆ ಮಾಡಿಕೊಂಡಿರುವ ಖರ್ಗೆ ಅವರು, ಅವರನ್ನು ಮೆಚ್ಚಿಸಲು ನಿಸ್ವಾರ್ಥ ಆರೆಸ್ಸೆಸ್ ಎಳೆದುತಂದಿದ್ದಾರೆ‌. ಇದು ಅವರ ರಾಜಕೀಯ ಎಡಬಿಡಂಗಿತನವನ್ನು ತೋರಿಸುತ್ತದೆ‌. ಕಾಂಗ್ರೆಸ್ ನಲ್ಲಿ ಅವರಿಗೆ ಇಕ್ಕಟ್ಟಾಗುತ್ತಿದೆ. ಮಹತ್ವ ಕಳೆದುಕೊಂಡು ಉಸಿರುಗಟ್ಟುತ್ತಿದೆ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ‌. ಸಿದ್ದರಾಮಯ್ಯ ಅವರು ತಮ್ಮನ್ನು ಸೋಲಿಸಿದ್ದು ಗೊತ್ತಿದ್ದರೂ ಅದನ್ನು ಬಲವಂತವಾಗಿ ಮರೆಯುವ ಪ್ರಯತ್ನ ಮಾಡುತ್ತ, ಅವರಿಗೆ ರಾಜಕೀಯ ಎದುರೇಟು ಕೊಡಲು ಶಕ್ತಿ ಇಲ್ಲದೆ ಸ್ವಾಭಿಮಾನ, ಹಠ, ಛಲವನ್ನು ಮರೆತು ಅವರ ಮುಂದೆ ಶರಣಾಗುತ್ತಿದ್ದಾರೆ‌. 

ಖರ್ಗೆ ಅವರೇ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷ ಉರಿಯುವ ಮನೆ ಅದನ್ನು ಬಿಟ್ಟು ಹೊರ ಬನ್ನಿ. ಇಲ್ಲದಿದ್ದರೆ ಸುಟ್ಟು ಭಸ್ಮ ವಾಗುತ್ತೀರಿ ಎಂದಿದ್ದರು. ಅದೇ ರೀತಿ ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಆಗಿದೆ. ಈಗ ಶರಣಾಗತಿ ಹಂತ ಮುಟ್ಟಿದ್ದೀರಿ‌. ನಿಮಗೆ ನಿಜಕ್ಕೂ ಸ್ವಾಭಿಮಾನ ಇದ್ದರೆ ಈಗಲಾದರೂ ಬಾಬಾ ಸಾಹೇಬರ ಮಾತಿನ ಮೇಲೆ ಗೌರವ ಬಂದಿದ್ದರೆ ಕೂಡಲೇ ಕಾಂಗ್ರೆಸ್ ತ್ಯಜಿಸಿ ಹೊರ ಬನ್ನಿ. ಕೊನೆಗಾಲದಲ್ಲಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಆರೆಸ್ಸೆಸ್ ವಿರುದ್ಧ ನೀವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಿ. ನಮ್ಮ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮನವೊಲಿಸಿ ನಾನು ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ‌. ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡುತ್ತ ವರ್ತಿಸುತ್ತ ಬಾಳುವುದು ಈ ವಯಸ್ಸಿನಲ್ಲಿ ನಿಮಗೆ ಶೋಭೆ ತರುವುದಿಲ್ಲ. ರಾಜಕೀಯಕ್ಕೆ ಬಂದಾಗಿನಿಂದ ಮೀಸಲು ಕ್ಷೇತ್ರಗಳಿಗೆ ಅಂಟಿಕೊಂಡು ಬದುಕಿರುವ ನೀವು ಅದೆಷ್ಟು ದಲಿತ ನಾಯಕರ ಅವಕಾಶಗಳನ್ನು ತಪ್ಪಿಸಿದ್ದೀರಿ ಅನ್ನುವುದನ್ನು ಸ್ಮರಿಸಿಕೊಳ್ಳಿ. ಎಷ್ಟು ದುರಾಸೆ, ಅಧಿಕಾರ ಲಾಲಸೆ ನಿಮ್ಮದು. ನೀವು ದೇಶ, ವಿದೇಶದಲ್ಲಿ ಚಂದಾ ಎತ್ತಿ ಕಲಬುರಗಿಯಲ್ಲಿ ಕಟ್ಟಿರುವ ಬೌದ್ಧ ವಿಹಾರವನ್ನೂ ನಿಮ್ಮದೇ ಕುಟುಂಬದ ಸ್ವತ್ತು ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಡಾ. ಅಂಬೇಡ್ಕರ್ ಹೆಸರಿನ ವೈದ್ಯಕೀಯ ಕಾಲೇಜನ್ನೂ ನೀವು ಮತ್ತು ನಿಮ್ಮ ಕುಟುಂಬ ಸೇರಿ ಹಾಳು ಮಾಡಿದ್ದೀರಿ. ದಲಿತರ ಸವಲತ್ತುಗಳನ್ನು ಎಲ್ಲಾ ತರದ್ದಲ್ಲೂ ಎರಡು ಕೈಗಳಿಂದ ಬಾಚಿ ತಿನ್ನುತ್ತಲೇ ಇದ್ದೀರಿ. ಇದನ್ನು ಮರೆಮಾಚಲು ವಿವಿಧ ವೇಷ ಧರಿಸುತ್ತೀರಿ.

ಈಗ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದೀರಿ. ಈ ನಾಟಕವನ್ನು ಬಿಡಿ. ನೀವು ಆಡಿದ ಮಾತನ್ನು ಸಾಬೀತು ಪಡಿಸಿ ಬನ್ನಿ. ಇದು ನಿಮಗೆ ನನ್ನ ನೇರ ಸವಾಲು.

– – *Dr.Chi.Na.Ramu*

*National President*

*All India Dalit Action Committee, National General Secretary (Succeeded) BJP SC Morcha. South states in charge, spokesman*

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version