ಡಿಸಿಎಂ ಡಿ.ಕೆ ಶಿವಕುಮಾರ್ ನಾಯಕತ್ವವನ್ನು ಹೊಗಳಿದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ.
ತುಮಕೂರು – ಇಂದು ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಉತ್ತಮ ನಾಯಕತ್ವ ಇದೆ ಶೇಕಡ 100ರಷ್ಟು ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಡಿ.ಕೆ ಶಿವಕುಮಾರ್ ರವರಲ್ಲಿ ಇದೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಹಾಗೂ ಶಕ್ತಿ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವವನ್ನು ಹೊಗಳಿದ್ದಾರೆ.
ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತೋತ್ಸವ ಆಚರಣ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ನಮ್ಮ ಸಮುದಾಯದ ಮುಖಂಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಕಾರಣ ಆದರೆ ಆದರೆ ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬಂದಾಗ ಅಂದು ಸಮುದಾಯದ ಯಾವುದೇ ಮುಖಂಡರು ಧ್ವನಿ ಎತ್ತಲಿಲ್ಲ ಎಂದು ತಿಳಿಸಿದರು.
ಇನ್ನು ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ ಇನ್ನು ಸಮುದಾಯದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಇನ್ನು ಒಗ್ಗಟ್ಟಿನ ವಿಷಯದಲ್ಲಿ ಧ್ವನಿಯೆತ್ತದೆ ಎಂದರೆ ಎಲ್ಲರೂ ರಾಜಕೀಯ ಮಾಡುತ್ತಾರೆ ಹಾಗಾಗಿ ಸಮುದಾಯ ಬೆಳೆಯಬೇಕಾದರೆ ಸಮುದಾಯದ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದ ಅವರು ಮುಂದಿನ ದಿನದಲ್ಲೂ ಸಹ ಇಂತಹ ಸನ್ನಿವೇಶ ಎದುರಾದರೆ ನಮ್ಮ ಸಮುದಾಯದ ಶ್ರೀಗಳು ಸಹ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಅಂದು ಮಾಜಿ ಪ್ರಧಾನಿ ದೇವೇಗೌಡರು ಅಂದು ಸಿಎಂ ಆಗುವಾಗ ಸಹ ಅಂದು ಸಮುದಾಯ ಪ್ರಬಲವಾಗಿ ಧ್ವನಿ ಎತ್ತಿದ್ದಕ್ಕೆ ಅಂದು ದೇವೇಗೌಡರು ಸಿಎಂ ಆಗುವ ಅವಕಾಶ ಸಾಧ್ಯವಾಯಿತು ಇಲ್ಲವಾದರೆ ಅಂದು ಅವರು ಮುಖ್ಯಮಂತ್ರಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ , ಇನ್ನು ತುಮಕೂರು ಜಿಲ್ಲೆಯಲ್ಲೂ ಸಹ ವೈ.ಕೆ ರಾಮಯ್ಯ, ಹುಚ್ಚ ಮಾಸ್ತಿ ಗೌಡ, ಮುದ್ದಹನುಮೇಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಸಮುದಾಯಕ್ಕಾಗಿ ಹಗಲಿರುಳು ಶ್ರಮಿಸಿ ಸಮುದಾಯದ ಪರವಾಗಿ ಧ್ವನಿ ಎತ್ತಿದ ಪ್ರಮುಖ ಮುಖಂಡರು ಎಂದರು .
ಕಳೆದ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ತುಮಕೂರು ಜಿಲ್ಲೆಯಲ್ಲಿ ಚುನಾವಣೆಗೆ ನಿಂತಾಗ ನಾವು ಸಹ ತಪ್ಪು ಮಾಡಿದ್ದೇವೆ ಅಂದು ನಮ್ಮ ಸಮುದಾಯದ ಮುಖಂಡರು ಕೂತು ಆ ವಿಚಾರದ ಬಗ್ಗೆ ಚರ್ಚೆ ಮಾಡಿದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ ಎಂದು ದೇವೇಗೌಡರನ್ನ ಇದೇ ಸಂದರ್ಭದಲ್ಲಿ ನೆನೆಸಿಕೊಂಡರು.