ಜಿಂಕೆ ಕೊಂದು ಮಾಂಸ ಮಾರಾಟಕ್ಕೆ ಯತ್ನ ಇಬ್ಬರು ಆರೋಪಿಗಳ ಬಂಧನ

ಜಿಂಕೆ ಕೊಂದು ಮಾಂಸ ಮಾರಾಟಕ್ಕೆ ಯತ್ನ ಇಬ್ಬರು ಆರೋಪಿಗಳ ಬಂಧನ

ಚಾಮರಾಜನಗರ: ಜಿಂಕೆ ಯನ್ನು ಕೊಂದು ಮಾಂಸ ಕತ್ತರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ದಾಳಿ ವೇಳೆ ಮೂವರು ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವನ್ಯ ಜೀವಿ ಅರಣ್ಯ ವಲಯದಲ್ಲಿ ನಡೆದಿದೆ.

 

 

 

 

 

 

 

 

 

 

 

 

 

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಮೂರ್ತಿ ಮತ್ತು ರಾಮು ಬಂಧಿತ ಆರೋಪಿಗಳಾಗಿದ್ದಾರೆ. ಐವರು ಬೇಟೆಗಾರರು ಕೊಳ್ಳೇಗಾಲದ ರಾಯರಹಳ್ಳ ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಬಳಸಿ ಜಿಂಕೆ ಬೇಟೆಯಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

 

 

 

 

 

 

 

 

 

ಬಂಧಿತರಿಂದ ಅರಣ್ಯಾಧಿಕಾರಿಗಳು ನಾಲ್ಕು ಚಾಕು, ಎರಡು ಮೊಬೈಲ್,ಮೂರು ಬೈಕ್ ಹಾಗೂ 35 ಕೆ.ಜಿ. ಜಿಂಕೆ ಮಾಂಸ ವಶವನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಮೂರು ಜನರ ಬಂಧನಕ್ಕೂ ಅಧಿಕಾರಿಗಳು ಬಲೆ ಬೀಸಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version