ರಸ್ತೆಯಲಿ ಸಂಚರಿಸುತ್ತಿದ್ದವರ ಮೇಲೆ ಟಾರ್ ಸಿಡಿದು ಅವಘಡ ಇಬ್ಬರು ಮಹಿಳೆಯರ ಕಣ್ಣಿಗೆ ಗಾಯ  ಕೊರಟಗೆರೆ ಪಟ್ಟಣದಲ್ಲಿ ನಡೆದ ಘಟನೆ.

ರಸ್ತೆಯಲಿ ಸಂಚರಿಸುತ್ತಿದ್ದವರ ಮೇಲೆ ಟಾರ್ ಸಿಡಿದು ಅವಘಡ ಇಬ್ಬರು ಮಹಿಳೆಯರ ಕಣ್ಣಿಗೆ ಗಂಭೀರ ಗಾಯ  ಕೊರಟಗೆರೆ ಪಟ್ಟಣದಲ್ಲಿ ನಡೆದ ಘಟನೆ.

 

 

ತುಮಕೂರು_ಕೊರಟಗೆರೆ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಆಟೋದಲ್ಲಿ ಇಬ್ಬರು ಮಹಿಳೆಯರು ಸಂಚರಿಸುತ್ತಿದ್ದ ವೇಳೆಯಲ್ಲಿ ಟ್ರ್ಯಾಕ್ಟರ್ ನಲ್ಲಿ ಇದ್ದ ಟಾರ್ ಟ್ಯಾಂಕ್ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಆಟೋದಲ್ಲಿ ಸಂಚರಿಸುತ್ತಿದ್ದ ಇಬ್ಬರು ಮಹಿಳೆಯರಿಗೆ ಟಾರ್ಚ್ ಸಿಡಿದು ಕಣ್ಣಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

 

 

ಇನ್ನು ರಸ್ತೆಯಲ್ಲಿ ಬಿದ್ದ ಗುಂಡಿಯನ್ನು ಮುಚ್ಚಲು ಟ್ರ್ಯಾಕ್ಟರ್ ನಲ್ಲಿ ಟಾರ್ ಸಾಗಿಸಲಾಗುತ್ತಿತ್ತು ಇದೆ ವೇಳೆ ಅಚಾನಕ್ಕಾಗಿ ಟ್ರ್ಯಾಕ್ಟರ್ ನಲ್ಲಿದ್ದ ಟ್ಯಾಂಕ್ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಆಟೋದಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಮೇಲೆ ಟಾರ್ ಸಿಡಿದು ಇಬ್ಬರು ಮಹಿಳೆಯರ ಕಣ್ಣಿಗೆ ಗಂಭೀರ ಗಾಯವಾದ ಘಟನೆ ನಡೆದಿದ್ದು .

 

 

 

ಇನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಾಹಿದ ಜುಂಜುಮ್ ರವರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

 

ಇಬ್ಬರು ಮಹಿಳೆಯರಿಗೆ ಕಣ್ಣಿಗೆ ಟಾರ್ ಸಿಡಿದಿರುವ ಪರಿಣಾಮ ಇಬ್ಬರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

 

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ಕೊರಟಗೆರೆ ತಹಸೀಲ್ದಾರ್ ಅವರು ಘಟನೆ ಸಂಬಂಧ ಘಟನೆಯಲ್ಲಿ ಗಾಯಗೊಂಡ ಇಬ್ಬರು ಮಹಿಳೆಯರ ಚಿಕಿತ್ಸಾ ವೆಚ್ಚವನ್ನು ಗುತ್ತಿಗೆದಾರರು ಭರಿಸುವುದಾಗಿ ಮಾಹಿತಿ ತಿಳಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.

 

ವರದಿ _ಮಾರುತಿ ಪ್ರಸಾದ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version