ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮುಂದೆ ಪ್ರತಿಭಟಿಸಿ ಜೈಲುಸೇರಿರುವ ಎನ್ಎಸ್ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮುಂದೆ ಪ್ರತಿಭಟಿಸಿ ಜೈಲುಸೇರಿರುವ ಎನ್ಎಸ್ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

 

 

 

ತುಮಕೂರು_ಕಳೆದ 2ದಿನಗಳ ಹಿಂದೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿ ಜೈಲುಸೇರಿರುವ ಎನ್ಎಸ್ಯುಐ ಕಾರ್ಯಕರ್ತರನ್ನು  ತುಮಕೂರಿನ ಕಾರಾಗೃಹದಲ್ಲಿ ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

 

 

ಇನ್ನು ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್ ರವರು ಎನ್.ಎಸ್. ಯು.ಐ ಕಾರ್ಯಕರ್ತರು ಬಿ.ಸಿ ನಾಗೇಶ್ ರವರ ಮನೆಯಿಂದ ಹೊರಗಡೆ ಪ್ರತಿಭಟನೆ ಮಾಡಿದ್ದು ಘಟನೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಲಾಗಿ ಇನ್ನು ಪ್ರತಿಭಟನೆ ಮಾಡಿರುವ ಎನ್ ಎಸ್ ಯು ಐ ಕಾರ್ಯಕರ್ತರು ಕೇವಲ ಒಂದು ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ.

 

 

ಆದರೆ ಇಂದು ಘಟನೆಗೆ ಸಂಬಂಧಿಸಿದಂತೆ ಆರೆಸ್ಸೆಸ್ನ ಸಮವಸ್ತ್ರ ಈಗ ಪ್ಯಾಂಟ್ ಆಗಿ ಬದಲಾಗಿದ್ದು ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ರೌಡಿಶೀಟರ್ ಗಳು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಪ್ರತಿ ದೂರು ನೀಡಿದರೂ ಸಹ ಯಾವುದೇ FIR ದಾಖಲಿಸಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 

 

ಇನ್ನು ಆರ್ಎಸ್ಎಸ್ ನವರು ಚಡ್ಡಿಯನ್ನು ತಮ್ಮ ಸಮವಸ್ತ್ರ ಎಂದು ಬಿಂಬಿಸುತ್ತಿದ್ದರು ಈಗ ಅವರ ಸಮವಸ್ತ್ರ ಬದಲಾಗಿದೆ ಇನ್ನು ಕಾಕಿ ಚಡ್ಡಿ ಅವರಪ್ಪಂದ ….ಎಂದಿದ್ದಾರೆ.

 

 

 

ಖಾಕಿ ಬಟ್ಟೆಯನ್ನು ಹಲವರು ಬಳಸುತ್ತಾರೆ ಇನ್ನು ಎನ್ ಎಸ್ ಯು ಐ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಸುಟ್ಟಿಲ್ಲ ಅವರ ಮೇಲೆ ಎಫ್ಐಆರ್ ದಾಖಲಿಸಲು. ಅದನ್ನು ಬಿಟ್ಟು ಕೇವಲ ಖಾಕಿ ಚಡ್ಡಿ ಬೆಂಕಿ ಹಚ್ಚುವುದನ್ನು ದೊಡ್ಡ ಆರೋಪ ಎಂದು ಬಿಂಬಿಸುತ್ತಿರುವುದು ಸರಿಯಲ್ಲ.

 

 

 

ಇನ್ನು ಘಟನೆಗೆ ಸಂಬಂಧಿಸಿದಂತೆ 24 ವ್ಯಕ್ತಿಗಳನ್ನು ಬಂಧಿಸಿದ್ದು ಸದ್ಯ ಜೈಲಿನಲ್ಲಿರುವ ಕಾರ್ಯಕರ್ತರಿಗೆ ಜಾಮೀನು ಸಿಗದಂತ ಸೆಕ್ಷನ್ ಗಳನ್ನು ದಾಖಲಿಸಿದ್ದು ಘಟನೆ ನಡೆದ ಕೂಡಲೇ ರಾಜ್ಯದ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದು ಸಚಿವರ ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

 

 

ಇನ್ನೂ ಇದೆ ತುಮಕೂರು ಜಿಲ್ಲೆಯಲ್ಲಿ ಇಬ್ಬರು ದಲಿತ ಯುವಕರ ಹತ್ಯೆಯಾಗಿದ್ದಾಗ ಇದೇ ಮಂತ್ರಿಗಳು, ಶಾಸಕರು, ಸಚಿವರುಗಳು, ಎಲ್ಲಿ ಹೋಗಿದ್ದರು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

 

 

 

ನನ್ನ ದಲಿತರ ಹತ್ಯೆ ನಡೆದಾಗ ಇದೇ ಮಂತ್ರಿಗಳು ಶಾಸಕರು ಎಲ್ಲಿದ್ದರೂ ಇನ್ನೂ ಅಂತಹ ಘಟನೆ ನಡೆದಾಗ ಭೇಟಿ ನೀಡಿ ದಲಿತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ ಇನ್ನು ಗಟನೆ ನಡೆದು ಇಷ್ಟು ದಿನಗಳು ಕಳೆದರೂ ಯಾವ ಮಂತ್ರಿಗಳು ಸಹ ಬಾಯಿ ಬಿಡದೆ ಸುಮ್ಮನಿದ್ದರು.

 

 

 

ತಿಪಟೂರಿನಲ್ಲಿ ಘಟನೆ ನಡೆದ ಕೂಡಲೇ ಪ್ರತಿಭಟನೆ ಮಾಡಿರುವ ಯುವಕರನ್ನು ಹುಡುಕಿ ತಂದು ಜೈಲಿನಲ್ಲಿ ಹಾಕಿದ್ದಾರೆ.

 

 

ಪ್ರತಿಭಟನೆಯಲ್ಲಿ ಬಾಗಿಯಾಗಿ ಜೈಲುಪಾಲಾಗಿರುವ ಯುವಕರು ರಾಜ್ಯದ ಹಲವಾರು ಸ್ವಾಮೀಜಿಗಳು ಸಾಹಿತಿಗಳು ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿದರು .

 

ಹಾಗಾಗಿ ಪ್ರತಿಭಟನೆ ಮಾಡಿ ಜೈಲು ಸೇರಿರುವ ಯುವಕರು ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ದ್ವನಿ ಎತ್ತಿದ್ದಾರೆ ಈ ರಾಜ್ಯದಲ್ಲಿ ಅನ್ಯಾಯ, ಅಧರ್ಮ, ಶಾಂತಿ ಬಂಗ ಉಂಟಾಗುತ್ತಿದೆ ಎಂದು ಯುವಕರು ಹೋರಾಟ ಮಾಡಲು ಮುಂದಾಗಿದ್ದಾರೆ ಆದರೆ ಇಂತಹ ಕಾರ್ಯಕರ್ತರನ್ನು ಇಂದು ತಂದು ಜೈಲಿನಲ್ಲಿ ಹಾಕಿದ್ದು

ಅದ ಕಾರಣ ಜೈಲಿನಲ್ಲಿರುವ ಯುವಕರನ್ನು ಭೇಟಿ ಮಾಡಲಾಗಿದ್ದು ಅವರು ಸಹ ಜಾಮೀನಿಗೆ ಮುಂದಾಗಿದ್ದಾರೆ ಆದರೆ ಯುವಕರ ಮೇಲೆ ಕೆಲ ಕಠಿಣ ಸೆಕ್ಷನ್ ಗಳನ್ನು ಹಾಕಿರುವ ಕಾರಣ ಜಾಮೀನು ಸಿಕ್ಕಿಲ್ಲ ಈ ಸಂಬಂಧ ಮೇಲ್ಮನವಿ ಸಲ್ಲಿಸಿದ್ದಾರೆ ಘಟನೆಯ ಬಗ್ಗೆ ಯುವಕರಿಗೆ ಅವಮಾನವಾಗಿಲ್ಲ ಇದೆಲ್ಲ ಹೋರಾಟದ ಸ್ವರೂಪ ಎಂದಿದ್ದಾರೆ .

 

 

 

ಶಿವಮೊಗ್ಗ ದಲ್ಲಿ ನಡೆದ ಘಟನೆಗಳು ಹಾಗೂ ಕೋವಿದ್ ಸಂದರ್ಭದಲ್ಲಿ ಹಲವರು ಲೂಟಿ ಹೊಡೆದ ಸಮಯದಲ್ಲಿ ಯಾವುದೇ ಸೆಕ್ಷನ್ ಗಳನ್ನು ವಿಧಿಸಲಿಲ್ಲ ಆದರೆ ತಿಪಟೂರು ಹೋರಾಟವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ರಾಜಕಾರಣಿಗಳ ಮಾತನ್ನು ಕೇಳಿ ಇಂತಹ ಸೆಕ್ಷನ್ ಗಳನ್ನು ಹಾಕಿರುವ ಕಾರಣ ಮುಂದಿನ ದಿನದಲ್ಲಿ ಇದಕ್ಕೆ ತಕ್ಕ ಪ್ರಾಯಶ್ಚಿತ ಹಾಗೂ ಸರಿಯಾದ ಉತ್ತರ ಹಾಗೂ ಶಿಕ್ಷೆಯನ್ನು ಕೆಲವರು ಅನುಭವಿಸುವಂತಾಗಲಿದೆ ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನು ಪ್ರಕಾರಕ್ಕೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version