ಜೈಲಿನಲ್ಲಿರುವ ಎನ್ಎಸ್ಯುಐ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ_ ರಕ್ಷಾ ರಾಮಯ್ಯ.
ತುಮಕೂರು_ಕಳೆದ ನಾಲ್ಕು ದಿನಗಳ ಹಿಂದೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿ ಜೈಲು ಸೇರಿರುವ ವಿದ್ಯಾರ್ಥಿಗಳನ್ನು ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ರಕ್ಷಾ ರಾಮಯ್ಯ ರವರು ತುಮಕೂರಿನ ಕಾರಗೃಹಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಇನ್ನು ಇದೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಕುವೆಂಪು ಹಾಗೂ ಬಸವಣ್ಣನವರಿಗೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ ಆದರೆ ಪ್ರತಿಭಟನೆಯನ್ನು ಸರ್ಕಾರ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದು 24 ವಿದ್ಯಾರ್ಥಿಗಳನ್ನು ತಂದು ಜೈಲಿಗೆ ಹಾಕಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಪ್ರತಿಭಟನೆ ಮಾಡಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ರೌಡಿಶೀಟರ್ಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಆದರೆ ವಿದ್ಯಾರ್ಥಿಗಳಿಗೆ ಜಾಮೀನು ಸಿಗದಂತೆ ಸೆಕ್ಷನ್ ಗಳನ್ನು ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿದ್ದಾರೆ ಹಾಗಾಗಿ ಕೂಡಲೇ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಸವಣ್ಣ ಹಾಗೂ ಕುವೆಂಪುರವರ ಪರವಾಗಿ ಹೋರಾಟ ಮಾಡಿರುವ ವಿದ್ಯಾರ್ಥಿಗಳಿಗೆ ಈ ತರಹದ ಶಿಕ್ಷೆ ಬರಬಾರದಿತ್ತು ಎಂದ ಅವರು ಇನ್ನು ಘಟನೆ ನಡೆದ ಸಂದರ್ಭದಲ್ಲಿ ತೆಗೆದಿರುವ ವಿಡಿಯೋಗಳನ್ನು ತಿರುಚಿ ಈಗ ವಿದ್ಯಾರ್ಥಿಗಳ ಮೇಲೆ ಕೇಸ್ ಗಳನ್ನು ಹಾಕಿದ್ದಾರೆ ಇನ್ನೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಅಂತಹ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿರುವ ಅವರು ಘಟನೆ ಸಂಬಂಧ ರಾಜ್ಯಾದ್ಯಂತ ಎನ್ಎಸ್ಯುಐ ಹಾಗೂ ಕಾಂಗ್ರೆಸ್ ಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ.
ಇನ್ನು ಪ್ರತಿಭಟನೆ ಮಾಡಿರುವ ವಿದ್ಯಾರ್ಥಿಗಳು ಕೇವಲ ಒಂದು ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ ಆದರೆ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ಪ್ರಕರಣ ದಾಖಲು ಮಾಡಿ ವಿದ್ಯಾರ್ಥಿಗಳನ್ನು ತಂದು ಜೈಲಿನಲ್ಲಿ ಇಟ್ಟಿರುವುದು ದುರದೃಷ್ಟಕರ ಎಂದಿದ್ದಾರೆ.
ಇನ್ನು ವಿದ್ಯಾರ್ಥಿಗಳ ಭೇಟಿ ವೇಳೆ ವಿಧಾನ ಪರಿಷತ್ತ ಸದಸ್ಯರಾದ ಆರ್. ರಾಜೇಂದ್ರ, ದೇವರಾಜ್, ರಾಘವೇಂದ್ರ ಸ್ವಾಮಿ ,ಹರಿಪ್ರಸಾದ್, ಮೋಹನ್, ರಾಜೇಶ್ ದೊಡ್ಮನೆ, ನಿಖಿಲ್, ರಾಜಣ್ಣ, ನೂರ್ ಹುಸೇನ್, ದೀಪಕ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ವರದಿ _ಮಾರುತಿ ಪ್ರಸಾದ ತುಮಕೂರು