ದೇಶದ ಪ್ರಗತಿಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು-ಶಿವಾನಂದ ಶಿವಾಚಾರ್ಯ ಶ್ರೀ

 

ದೇಶ ಕಂಡ ಮಹಾನ್ ನಾಯಕ ಅಂಬೇಡ್ಕರ್, ಭಾರತದ ಅಭಿವೃದ್ಧಿಗೆ ಅಂಬೇಡ್ಕರ್ ಅವರ ಸಂವಿಧಾನ ಸಹಕಾರಿಯಾಗಿದೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀ ತಿಳಿಸಿದರು.

 

ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಮುಖ್ಯರಸ್ತೆ ರಸ್ತೆಯಲ್ಲಿ ದಲಿತ ಸಂಘಟನೆಗಳ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಡಾ ಅಂಬೇಡ್ಕರ್ ಮಹಾದ್ವಾರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಅಂಬೇಡ್ಕರ್ ಪ್ರತಿಭಾವಂತ ಹಾಗೂ ಶ್ರಮಜೀವನ ವ್ಯಕ್ತಿತ್ವದ ನಾಯಕ, ಸಮಾನತೆಯ ಹರಿಕಾರ ಅಂಬೇಡ್ಕರ್ ಅವರು ಇಡೀ ದೇಶ ಹಾಗೂ ವಿಶ್ವಕ್ಕೆ ಮಾದರಿಯಾಗಿದ್ದಾರೆ ಅಂಬೇಡ್ಕರ್ ಬಿಟ್ಟು ಭಾರತವನ್ನು ನೋಡಲು ಸಾಧ್ಯವಿಲ್ಲ ಭಾರತವನ್ನು ಬೆಳೆಸುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಅವರು ಬರೆದಿರುವ ಸಂವಿಧಾನ ಮಹತ್ತರವಾದದ್ದು ಅವರಿಗೆ ಗೌರವ ಸಲ್ಲಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದರು.

 

ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಶಿವಕುಮಾರ್( ಬಂಡೆ ಶಿವಕುಮಾರ್) ಮಾತನಾಡಿ ಅಂಬೇಡ್ಕರ್ ದೇಶದ ಬಹುದೊಡ್ಡ ಆಸ್ತಿ ಎಂದರು ತಪ್ಪಾಗಲಾರದು ಅವರು ಬರೆದಿರುವ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಅವರು ಬರೆದಿರುವ ಸಂವಿಧಾನದಿಂದ ಎಲ್ಲರೂ ಇಂದು ಒಂದಾಗಿ ಬಾಳುತ್ತಿದ್ದೇವೆ, ಭಾರತದ ಅಭಿವೃದ್ಧಿಗೆ ಅಂಬೇಡ್ಕರ್ ಅವರೂ ಬರೆದಿರುವ ಸಂವಿಧಾನ ದೊಡ್ಡ ಗ್ರಂಥವಾಗಿದೆ ,ಅವರು ಬರೆದಿರುವ ಸಂವಿಧಾನ ಬೇರೆ ದೇಶಗಳಿಗೆ ಮಾದರಿಯಾಗಿದ್ದು ಅವುಗಳ ರಕ್ಷಣೆ ಹಾಗೂ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

 

 

 

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ ಅಂಬೇಡ್ಕರ್ ಅವರು ಭಾರತಕ್ಕೆ ಹಾಗೂ ಭಾರತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಅವರು ಬರೆದಿರುವ ಸಂವಿಧಾನದಿಂದ ಪ್ರಮುಖ ಪಾತ್ರವಹಿಸುತ್ತದೆ ,ಇಂದು ಎಲ್ಲರೂ ಶಾಂತಿ ಸೌಹಾರ್ದತೆ ಸಾಮರಸ್ಯ ಸಹಬಾಳ್ವೆ ನಡೆಸುವುದಕ್ಕೆ ಕಾರಣವಾಗಿದ್ದು ಅವರು ಬರೆದಿರುವ ಸಂವಿಧಾನ ಕಾರಣ ಎಂದರು. ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಮಹತ್ವ ನಿರ್ಮಾಣಕ್ಕೆ ಎಲ್ಲರೂ ಸಹಕಾರಿಯಾಗಬೇಕು ಎಂದರು.

 

ತುಮಕೂರು ನಗರ ಮಾಜಿ ಶಾಸಕರಾದ ರವರು ಮಾತನಾಡಿ ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಮಹತ್ವ ಎಲ್ಲರಿಗೂ ಮಾದರಿಯಾಗುತ್ತದೆ ಎಂದರು.

 

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಫರಿದ ಬೇಗಂ, ಪಾಲಿಕೆ ಸದಸ್ಯರಾದ ರೂಪಾ , ದಲಿತ ಮುಖಂಡರಾದ ಹಾಗೂ ಪತ್ರಕರ್ತರು ಪಿ ಎನ್ ರಾಮಯ್ಯ, ಕಾಂಗ್ರೆಸ್ ಮುಖಂಡ ಪಿ ಶಿವಾಜಿ, ನಾಗೇಶ್, ನಟರಾಜ್ ಮಧುಗಿರಿ, ಗೋವಿಂದರಾಜು ಅದಲಾಪುರ , ಹೆಗ್ಗೆರೆ ಕೃಷ್ಣಪ್ಪ , ಕೋರ ರಾಜಣ್ಣ, ರಾಮ್ ಮೂರ್ತಿ ,ಕಿರಣ್ ಕೌತಮಾರನಹಳ್ಳಿ, ಸಿದ್ದರಾಜು ಕೋಡಿಯಾಲ ,ರಂಗಸ್ವಾಮಿ ಲಕ್ಷ್ಮೀನಾರಾಯಣ್ ಸೇರಿದಂತೆ ಹಲವು ನಾಯಕರು, ದಲಿತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version