ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಸಂಸ್ಕಾರದ ಪ್ರತಿರೂಪ ಹೆಣ್ಣು ಹೆಣ್ಣಿಂದ ಮಾತ್ರ ಸಂಸ್ಕಾರ ಕಲಿಯಲು ಸಾಧ್ಯ ಸುಖ-ದುಃಖಗಳನ್ನು ಸಹಿಸುವ ಶಕ್ತಿ ಸಾಮರ್ಥ್ಯ ಹೆಣ್ಣಿಗೆ ಮಾತ್ರ ಇದ್ದು ಅವುಗಳಿಂದ ವಿಕಾಸ ಸಾಧ್ಯ. ಕಾಲಕ್ಕೆ ತಕ್ಕಂತೆ ಎಲ್ಲವೂ ವಿಕಾಸಗೊಳ್ಳುತ್ತದೆ ಪ್ರಕೃತಿ ವಿಕಾಸ ,ಮಾನಸಿಕ ವಿಕಾಸ, ಉದ್ಯೋಗ ವಿಕಾಸ ಹೀಗೆ ಎಲ್ಲವನ್ನು ಸಾಧಿಸುವುದಕ್ಕೆ ಹೆಣ್ಣಿಂದ ಮಾತ್ರ ಸಾಧ್ಯ ವಿಕಾಸ ಸಾಧನೆಗೆ ಹೆಣ್ಣು ಮುಖ್ಯ ಎಂದು ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ನವ ಜ್ಞಾನಜ್ಯೋತಿ ಮಹಿಳಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ವಿಕಾಸ ಯೋಜನೆ, ವಿದ್ಯಾರ್ಥಿ ವಿಕಾಸ ಯೋಜನೆ ಹಾಗೂ ರೈತರ ಮಾರ್ಗದರ್ಶಿ ಯೋಜನೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಾಳಿದಾಸ ಪದವಿ ಪೂರ್ವ ಕಾಲೇಜು ಶಿರಾಗೇಟ್ನಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಜ್ಞಾನ ಜ್ಯೋತಿ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಸಂಘದ ವತಿಯಿಂದ ಮಹಿಳೆಯರಲ್ಲಿ ಸ್ವಾವಲಂಬಿ ಮನೋಭಾವನೆಯನ್ನು ,ಉಳಿತಾಯ ಮನೋಭಾವನೆಯನ್ನು ಬೆಳೆಸುವುದು ಸಮಾಜದ ಮುಖ್ಯವಾಹಿನಿಗೆ ತರುವುದು ಸೇರಿದಂತೆ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವುದು ಮತ್ತು ಸಾವಯವ ಕೃಷಿಯ ಬಗ್ಗೆ ಪ್ರೇರೇಪಿಸುವ ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜೀವನಮಟ್ಟ ಹೆಚ್ಚಳ ಹಾಗೂ ಉದ್ಯೋಗ ಸೃಷ್ಟಿ ಸಾಧಿಸಿ ಗ್ರಾಮೀಣ ಜನರನ್ನು ಸ್ವಾವಲಂಬಿಯಾಗಿಸುವ ಹಾಗೂ ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ದಾವಣಗೆರೆಯ ನವಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ಮುನ್ನುಡಿ ಬರೆಯುತ್ತಿದೆ.
ಮಹಿಳಾ ಶಿಕ್ಷಣ ಅಭಿವೃದ್ಧಿಗಾಗಿ -ಆಶಾ ಕಾರ್ಯಕರ್ತರಿಗೆ ಕಂಪ್ಯೂಟರ್ ಶಿಕ್ಷಣ ,ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಾರ್ವಜನಿಕ ಶಿಕ್ಷಣ ,ಹಿರಿಯ ಮಹಿಳೆಯರಿಗೆ ಸಾಕ್ಷರತಾ ಆಂದೋಲನ. ಸೇರಿದಂತೆ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೇರೇಪಿಸಿ ಅವುಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಕೌಶಲ್ಯ ತರಬೇತಿ ನೀಡುವುದರ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದ್ದು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ವಾಸಂತಿ ತಿಳಿಸಿದರು.
ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕೆಪಿಸಿಸಿ ವಕ್ತಾರರಾದ ಮುರಳಿದರ ಹಾಲಪ್ಪ ಮಾತನಾಡಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾದಾಗ ಮಾತ್ರ ಕುಟುಂಬ ನಿರ್ವಹಣೆ ಸುಲಲಿತವಾಗಿ ನಡೆಯಲಿದೆ ಎಂದರು.ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದು ವಿದ್ಯೆ ಉದ್ಯೋಗ ತರಬೇತಿ ಎಲ್ಲಾ ಹಂತದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳಿದ್ದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಾಯಕಾರಿಯಾಗಲಿದೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಹಿಳಾ ಅಭಿವೃದ್ಧಿ ನಿಗಮ, ಅನೇಕ ಸಂಸ್ಥೆ ,ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ನಿಗಮ-ಮಂಡಲಿಗಳಿದ್ದು ಅವುಗಳಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದೆ.ಮಹಿಳೆಯರಿಗೆ ಉತ್ತಮ ಕೌಶಲ್ಯಗಳು ಹಾಗೂ ಕೌಶಲ್ಯಗಳ ತರಬೇತಿ ಸಿಕ್ಕಾಗ ಮಾತ್ರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಹಾಗಾಗಿ ಇಂತಹ ಸಂಸ್ಥೆಗಳು ಮಹಿಳೆಯರಿಗೆ ಸಹಾಯಕಾರಿಯಾಗಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಮಾತನಾಡಿ. ಇಂದು ಹಲವು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಇಂದಿನ ಸಮಾಜಕ್ಕೆ ಹೆಣ್ಣು ಮಾದರಿಯಾಗಿದ್ದು. ಮಹಿಳೆಯರ ಇಂದಿನ ಯಶಸ್ಸಿಗೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಲಕ್ಷ್ಮಿನರಸಿಂಹ ರಾಜು, ಸಮಾಜ ಸೇವಕ ಯೋಗೇಶ್, ನಾಗರಾಜ್ ಕಾಕನೂರು, ನವ ಜ್ಞಾನ ಜ್ಯೋತಿ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಎಸ್ ಎಂ ಕಿರಣ್, ಮಾಜಿ ಶಾಸಕರಾದ ರಫೀಕ್ ಅಹಮದ್, ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಂಸ್ಥೆಯ ಅಧ್ಯಕ್ಷರಾದ ಚಂದ್ರಮ್ಮ ಸೇರಿದಂತೆ ಸಂಘದ ಸದಸ್ಯರು ಹಾಗೂ ಆಡಳಿತ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.