ಹೆಲ್ಮೆಟ್ ಹಾಕಿಲ್ಲ ಎಂದು ಹಲ್ಲೆ ಮಾಡಿದ ಟ್ರಾಫಿಕ್ ಪೊಲೀಸರು,ಕ್ರಮಕ್ಕೆ ಆಗ್ರಹ.
ತುಮಕೂರು –ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣದಿಂದಾಗಿ ಟ್ರಾಫಿಕ್ ಪೊಲೀಸರು ಯುವಕನಿಗೆ ಗಂಭೀರ ಗಾಯ ಆಗುವಂತೆ ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ .
ನಗರದ ಶಿರಾ ಗೇಟ್ ರಸ್ತೆಯ ಎಸ್ ಮಾಲ್ ಮುಂಭಾಗ ಕಾರ್ಯನಿರತ ಟ್ರಾಫಿಕ್ ಪೊಲೀಸರು ಸ್ಥಳೀಯ ಯುವಕ ವಿನೋದ್ ಎಂಬ ಯುವಕ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವೇಳೆ ತಡೆದು ನಿಲ್ಲಿಸಿದ್ದಾರೆ ನಂತರ ಆತನಿಗೆ ದಂಡ ಕಟ್ಟುವಂತೆ ತಿಳಿಸಿದ್ದಾರೆ ಯುವಕ ನನ್ನ ಬಳಿ ಹಣವಿಲ್ಲ ದಂಡವನ್ನು ಆಮೇಲೆ ಕಟ್ಟುತ್ತೇನೆ ಎಂದು ಪೊಲೀಸರ ಬಳಿ ತಿಳಿಸಿದಾಗ ಏಕಾಏಕಿ ಯುವಕನ ಮೇಲೆ ಮನಸೋಇಚ್ಛೆ ಟ್ರಾಫಿಕ್ ASI ಮಹದೇವಯ್ಯ ಹಾಗೂ ಟ್ರಾಫಿಕ್ ಪಿ ಸಿ ಬರ್ಖತ್ ಹಾಗೂ ಮತ್ತೋರ್ವ ಸಿಬ್ಬಂದಿ ಸಾರ್ವಜನಿಕವಾಗಿ ಯುವಕನ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಇನ್ನು ಘಟನೆಯ ನಡೆದ ವೇಳೆ ಯುವಕ ಪೊಲೀಸರಿಗೆ ನನಗೆ ಹರ್ನೀಯ ಆಪರೇಷನ್ ಆಗಿದೆ ಅಲ್ಲೇ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು ಅದನ್ನು ಲೆಕ್ಕಿಸದೆ ಯುವಕನ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಅಮಾನವೀಯ ವರ್ತನೆ ತೋರಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಗರದ ಜಯಪುರ ನಿವಾಸಿ ಯುವಕ ವಿನೋದ್ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಕಳೆದ ಹತ್ತು ದಿನಗಳ ಹಿಂದೆ ಹರ್ನಿಯ ಆಪರೇಷನ್ ಆಗಿದ್ದು ಆಪರೇಷನ್ ಆದ ಜಾಗಕ್ಕೆ ಪೊಲೀಸರು ಹಲ್ಲೆ ಮಾಡಿದ್ದು ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವಾಗಿ ಮಾಹಿತಿ ತಿಳಿಸಿದ್ದು.
ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕದ ತಟ್ಟಿರುವ ಗಾಯಾಳು ವಿನೋದ್ ಹಲ್ಲೆ ಮಾಡಿರುವ ಪೊಲೀಸ್ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಲ್ಲೆ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿ ಗಂಭೀರ ಗಾಯ ಆಗುವಂತೆ ಹಲ್ಲೆ ಮಾಡಿರುವ ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ಅಮಾನತ್ತು ಮಾಡುವುದರ ಜೊತೆಗೆ ಸಾರ್ವಜನಿಕವಾಗಿ ಈ ರೀತಿ ಹಲ್ಲೆ ಮಾಡುವ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಕೇವಲ ಟ್ರಾಫಿಕ್ ಫೈನ್ ಗೋಸ್ಕರ ಈ ರೀತಿ ಹಲ್ಲೆ ಮಾಡಿದ್ದು ನಿಜಕ್ಕೂ ಅಮಾನವೀಯ ಸಂಗತಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದ್ದು ಹಲ್ಲೆ ಮಾಡಿರುವ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದ್ದಾರೆ.