ಪೆಟ್ರೋಲ್ ಬಂಕ್ ಅಳತೆಯಲ್ಲಿ ವ್ಯತ್ಯಾಸ ಆರೋಪ ತೆರೆ ಎಳೆದ ಅಧಿಕಾರಿಗಳು.

ಪೆಟ್ರೋಲ್ ಬಂಕ್ ಅಳತೆಯಲ್ಲಿ ವ್ಯತ್ಯಾಸ ಆರೋಪ ತೆರೆ ಎಳೆದ ಅಧಿಕಾರಿಗಳು.

 

 

 

ತುಮಕೂರು -ನಗರದ ಕುಣಿಗಲ್ ರಸ್ತೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಅಳತೆಯಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಳತೆ,ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

 

 

 

ನಗರದ ಕುಣಿಗಲ್ ರಸ್ತೆಯಲ್ಲಿ ಇರುವ ಸಾಹುಕಾರ ಪೆಟ್ರೋಲ್ ಬಂಕ್ ನಲ್ಲಿ ಬುದುವಾರ ರಾತ್ರಿ ಗ್ರಾಹಕರೊಬ್ಬರು ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡ ಸಂದರ್ಭದಲ್ಲಿ ನಿಗದಿತ ಹಣಕ್ಕಿಂತ ಕಡಿಮೆ ಪ್ರಮಾಣದ ಪೆಟ್ರೋಲ್ ಬೈಕಿಗೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೆಟ್ರೋಲ್ ಬಂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

 

ಅಳತೆ ,ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಗ್ರಾಹಕರೊಬ್ಬರ ಆರೋಪದಂತೆ ಪೆಟ್ರೋಲ್ ಬಂಕ್ ನ ಯಂತ್ರೋಪಕರಣಗಳನ್ನು ಸಾರ್ವಜನಿಕರು ಹಾಗೂ ಆರೋಪಿತರ ಸಮ್ಮುಖದಲ್ಲಿ ತೆರೆದು ಅದರ ಕಾರ್ಯನಿರ್ವಹಣೆ ಹಾಗೂ ಅದಕ್ಕೆ ಅಳವಡಿಸಲಾಗಿದ್ದ ಸರ್ಕಾರಿ ಮುದ್ರೆ ಹಾಗೂ ಅದರ ಕಾರ್ಯನಿರ್ವಹಣೆ ಜೊತೆಗೆ ಅದನ್ನು ಟ್ಯಾಪಿಂಗ್ ಮಾಡಲು ಅಥವಾ ದುರ್ಬಳಕೆ ಮಾಡಲು ಮುಂದಾದರೆ ತಕ್ಷಣವೇ ಇಲಾಖೆಗೆ ಸೇರಿದಂತೆ ಸಂಬಂಧಿಸಿದ ಇಂಧನ ಕಂಪನಿಗೆ ಸಂದೇಶ ರವಾನೆಯಾಗುವುದರೊಂದಿಗೆ ಪೂರ್ಣ ತಂತ್ರಾಂಶವು ತಂತ್ರಾಂಶವುಳ್ಳ ಯಂತ್ರೋಪಕರಣ ಇದಾಗಿದ್ದು ಯಾವುದೇ ರೀತಿಯ ಅವ್ಯವಹಾರಕ್ಕೆ ಇದು ಆಸ್ಪದ ನೀಡುವುದಿಲ್ಲ ಎಂದು ಸ್ತಳದಲ್ಲಿದ್ದ ಗ್ರಾಹಕರಿಗೆ ಸ್ಪಷ್ಟಪಡಿಸಿದರು .

 

 

 

 

 

 

 

ತದನಂತರ ಎಲ್ಲರ ಮುಂದೆ ಇಲಾಖೆಯಿಂದ ತರಲಾಗಿದ್ದ ಅಳತೆ ಮಾಪಕದಲ್ಲಿ ವಿವಿಧ ಅಳತೆಯ ಇಂಧನವನ್ನು ಸಾರ್ವಜನಿಕರ ಮುಂದೆ ಅಳತೆ ಮಾಡಿದಾಗ ಯಾವುದೇ ರೀತಿಯಲ್ಲಿ ಕಡಿಮೆ ಸಾಂದ್ರತೆಯ ಇಂಧನ ಬರುತ್ತಿಲ್ಲ ಎಂದು ಆಪಾದೀತರ ಹಾಗೂ ಸಾರ್ವಜನಿಕರ ಮುಂದೆ ತೋರಿಸಿದರು.

 

 

 

 

 

 

ಯಾವುದೇ ರೀತಿಯಲ್ಲಿ ಇಲ್ಲಿ ಈ ಬಂಕಿನಲ್ಲಿ ಮೋಸ ವಂಚನೆ ಹಾಗೂ ಕಡಿಮೆ ಸಾಂದ್ರತೆ ಇಂಧನ ಬರುತ್ತಿಲ್ಲ ಎಂದು ಸ್ಪಷ್ಟವಾಗಿ ಎಲ್ಲರಿಗೂ ಅರಿವಾಗುವಂತೆ ತೋರಿಸುವುದರ ಪ್ರಯುಕ್ತ ಸಾರ್ವಜನಿಕರಲ್ಲಿ ಉಂಟಾಗಿದ್ದ ಆರೋಪಕ್ಕೆ ಇತಿಶ್ರೀ ಹಾಡಿದ್ದಾರೆ.

 

 

 

 

 

 

 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕರು ಸಹ ಸ್ಪಷ್ಟನೆ ನೀಡಿದ್ದು ಇತ್ತೀಚಿಗೆ ತೆರೆಯಲಾಗಿದ್ದ ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಯಾವುದೇ ಅವ್ಯವಹಾರ ಹಾಗೂ ಅಳತೆಯಲ್ಲಿ ಮೋಸ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಆದರೂ ಸಹ ಕೆಲ ಗ್ರಾಹಕರು ಸಿಬ್ಬಂದಿಗಳ ಮೇಲೆ ಆರೋಪ ಮಾಡಿದ್ದಾರೆ ಹಾಗಾಗಿ ಶೀಘ್ರವೇ ಸಿಬ್ಬಂದಿಗಳನ್ನು ಬದಲಾವಣೆ ಮಾಡಲಾಗುವುದು ಎಂದರು.

 

 

 

 

 

 

 

ಇನ್ನು ಸ್ಥಳದಲ್ಲಿದ್ದ ಕೆಲ ಗ್ರಾಹಕರು ಅಧಿಕಾರಿಗಳು ನಡೆಸಿದ ಪರೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ತಗಾದೆ ತೆಗೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಗ್ರಾಹಕರಿಗೆ ಮತ್ತೇನಾದರೂ ಅನುಮಾನವಿದ್ದಲ್ಲಿ ಠಾಣೆಗೆ ಬಂದು ನೀಡಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version