*ವರ್ಷಕ್ಕೊಮ್ಮೆ ಕಡಬದಿಂದ ಭಾಗಮಂಡಲಕ್ಕೆ ಪ್ರವಾಸ ಹೋಗುವ ಕಾಡಾನೆ..! ಆನೆಯ ಪ್ರವಾಸ ಹೀಗಿದೆ*
ಸುಳ್ಯ:
ಸುಳ್ಯ ತಾಲೂಕಿನ ಪೆರಾಜೆ ಬಿಳಿಯಾರು
ಪ್ರದೇಶದಲ್ಲಿ ಕಾಡಾನೆಯೊಂದು ಸಂಚಾರ ನಡೆಸಿದ್ದು, ಜನರಲ್ಲಿ ಆತಂಕ ಎದುರಾಗಿದೆ.
ಸಾರ್ವಜನಿಕರ ಮಾಹಿತಿ ಪ್ರಕಾರ ಈ ಆನೆಯು ಪ್ರತೀ ವರ್ಷವು ಕಡಬದ ಸುಬ್ರಹ್ಮಣ್ಯ ವಲಯದಿಂದ ಸುಳ್ಯದ ಪಂಜ ಮೂಲಕ ಮಡಿಕೇರಿಯ ಭಾಗಮಂಡಲ ವರೆಗೂ ಇದೇ ದಾರಿಯಲ್ಲಿ ಸಂಚರಿಸುತ್ತದೆ ಎನ್ನಲಾಗಿದೆ.
ಸಾರ್ವಜನಿಕರು ಹೇಳುವ ಪ್ರಕಾರ ಈ ಆನೆ ಈ ತನಕ ಜನರಿಗೆ ತೊಂದರೆ ನೀಡಿದ ಮಾಹಿತಿ ಇಲ್ಲ. ಹಾದು ಹೋಗುವ ದಾರಿಯಲ್ಲಿ ಹೊಟ್ಟೆ ಹಸಿವು ಆದಾಗ ಬಾಳೆ,ತೆಂಗು ಸೇರಿದಂತೆ ಬೈನೆ ಮರಗಳನ್ನು ತಿನ್ನುತ್ತಿದೆ ಎನ್ನಲಾಗಿದೆ.
ಭಾಗಮಂಡಲ ವರೆಗೂ ಹೋದ ಆನೆ ನಂತರದಲ್ಲಿ ಫೆಬ್ರವರಿ ತಿಂಗಳ ಮಧ್ಯದಲ್ಲಿ ಅದೇ ದಾರಿಯಲ್ಲಿ ವಾಪಾಸು ಬರುತ್ತದೆ ಎನ್ನಲಾಗಿದೆ.
ಆನೆ ಹೋಗುವ ದಾರಿಯಲ್ಲಿ ಸಿಗುವ ಕುಮಾರಧಾರಾ ನದಿ ಹಾಗೂ ಪಯಸ್ವಿನಿ ನದಿಯನ್ನೂ ಆನೆ ಈಜುವ ಮೂಲಕ ನದಿ ದಾಟುತ್ತಿದೆ ಎಂದು ಸಾರ್ವಜನಿಕರು
ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಆರ್.ಎಫ್.ಓ ಗಿರೀಶ್ ಅವರು ಆನೆಯೂ ಅದರ ಪಾಡಿಗೆ ಅದು ತನ್ನ ದಾರಿಯಲ್ಲೇ ಸಂಚಾರ ಮಾಡುತ್ತಿದ್ದು,ಯಾರಿಗೂ ತೊಂದರೆ ನೀಡಿದ ಮಾಹಿತಿ ಇಲ್ಲ. ಆದರೂ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಜನರು ಎಚ್ಚರಿಕೆ ವಹಿಸಬೇಕು. ಮತ್ತು ತೊಂದರೆಗಳು ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿ ಮಾಡಿದ್ದಾರೆ.