ಡಾ. ಜಿ. ಪರಮೇಶ್ವರ್ ಅವರ ಏಕಪಾತ್ರಾಭಿನಯಕ್ಕೆ ಜನರು ಫಿದಾ… …
ಕೊರಟಗೆರೆ: ಡಾ. ಜಿ ಪರಮೇಶ್ವರ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ಗಣರಾಜ್ಯೋತ್ಸವ ದಿನದೊಂದು ನಿವೃತ್ತ ಸೈನಿಕರು, ಕರೋನಾ ವಾರಿಯರ‍್ಸ, ಪೌರಕಾರ್ಮಿಕರು, ಧಾರ್ಮಿಕ ಕ್ಷೇತ್ರದ ಸಾಧಕರು, ರಂಗಭೂಮಿ ಕಲಾವಿದರು ಹಾಗೂ ಝೀ ವಾಹಿನಿಯ ಸರಿಗಮಪ ವಿಜೇತ ಕಂಬದ ರಂಗಯ್ಯರವರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಾಭಾರತದ ಸನ್ನಿವೇಶದ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ದ ಭೂಮಿಯಲ್ಲಿ ಹೇಳುವ ಸನ್ನಿ ವೇಶ. ವಿಜಯ… ಈ ರಣಭೂಮಿ ವಿಜಯ… ಮಹಾ ಭೀಕರ ಜಯಧ್ವನಿ.. ಎಂಬ ಹಾಡನ್ನು ಹಾಡುವುದರ ಮೂಲಕ ಅಲ್ಲಿ ನೆಲೆಸಿದ್ದ ಜನರು ಚಪ್ಪಾಳೆ ,ಕೇಕೆ ಹಾಕಿ ,ಹುಚ್ಚೆದ್ದು ಕುಣಿದಿದ್ದಾರೆ. ಕನ್ನಡ ಪ್ರೊಫೆಸರರು ಈ ವಿಡಿಯೋವನ್ನು ನೋಡಿ ಬಹಳ ಸೊಗಸಾಗಿ ಮೂಡಿಬಂದಿದೆ ಯಾವುದೇ ಕಲಾವಿದರಿಗೆ ಕಡಿಮೆ ಇಲ್ಲ , ಪರಮೇಶ್ವರ ಅದ್ಭುತ ಕಲೆ ಹೊಂದಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಜನ ಮೆಚ್ಚುಗೆ ಗಳಿಸುತ್ತದೆ.