ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದ್ದಾರಾ  ಮಾಜಿ ಸಚಿವ   ಮಾಧುಸ್ವಾಮಿ…..?? ಏನಿದು ಫೋಟೋ ರಹಸ್ಯ ಇಲ್ಲಿದೆ ಫ್ಯಾಕ್ಟ್ ಚೆಕ್

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದ್ದಾರಾ  ಮಾಜಿ ಸಚಿವ   ಮಾಧುಸ್ವಾಮಿ…..?? ಫ್ಯಾಕ್ಟ್ ಚೆಕ್.

 

 

 

ತುಮಕೂರು – ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಾಯಕರ ಮಧ್ಯ ಭಿನ್ನಮತ ಸ್ಪೋಟ ಬೆನ್ನಲ್ಲೇ ಭಿನ್ನಮತ ಶಮನಗೊಳಿಸಲು ಸಾಕಷ್ಟು ನಾಯಕರು ಹರಸಾಹಸ ಪಡುತ್ತಿದ್ದು.

 

 

 

ಈ ಮಧ್ಯೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಾಹನುಮೆ ಗೌಡ ರವರು ಮಾಜಿ ಸಚಿವ ಬಿಜೆಪಿ ಮುಖಂಡ ಮಾಧುಸ್ವಾಮಿ ರವರೊಂದಿಗೆ ಮಾತುಕತೆ ನಡೆಸಿರುವ ಫೋಟೋ ವೈರಲ್ ಆಗಿದ್ದು.

ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 

 

 

 

ಮಾಧುಸ್ವಾಮಿ ರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

 

 

 

 

ಈ ಮಧ್ಯೆ ಮಾಧುಸ್ವಾಮಿ ನಾನು ವಿ ಸೋಮಣ್ಣಗೆ ಸಪೋರ್ಟ್ ಮಾಡಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದು ಇದರ ನಡುವೆಯೇ ಫೋಟೋ ವೈರಲ್ ಆಗಿದ್ದು ಸಾಕಷ್ಟು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ….???

 

 

 

ಫ್ಯಾಕ್ಟ್ ಚೆಕ್

 

 

ವೈರಲ್ ಆದ ಫೋಟೋ ಬಗ್ಗೆ ಮಾಹಿತಿ ತಿಳಿದಾಗ  2022ರ ಸಂದರ್ಭದಲ್ಲಿ ತೆಗೆದ ಫೋಟೋ ಈಗ ವೈರಲ್ ಆಗಿರುವುದು ತಿಳಿದು ಬಂದಿದೆ.

 

ಈ ಚುನಾವಣಾ ಹೊಸ್ತಿಲಲ್ಲಿ ಈ ಭಾವಚಿತ್ರವನ್ನು ಎಲ್ಲೆಡೆ ವೈರಲ್ ಆಗುತ್ತಿದ್ದು ಸಾರ್ವಜನಿಕರು ಹಾಗೂ ಕಾರ್ಯಕರ್ತರಲ್ಲಿ ಒಂದಷ್ಟು ಗೊಂದಲ ತಂದಿರುವುದಂತೂ ಸತ್ಯ…..

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version