ತುಮಕೂರು ನಗರದಾದ್ಯಂತ ಮಳೆ ರಗಡೆ ರಸ್ತೆಯಲ್ಲೆಲ್ಲಾ ನೀರು, ಹಾವು ಸಂಚಾರ.

ತುಮಕೂರು ನಗರದಾದ್ಯಂತ ಮಳೆ ರಗಡೆ ರಸ್ತೆಯಲ್ಲೆಲ್ಲಾ ನೀರು, ಹಾವು ಸಂಚಾರ.

 

 

ತುಮಕೂರು_ತುಮಕೂರು ನಗರದಾದ್ಯಂತ ಬುಧವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಸಾಕಷ್ಟು ಮಳೆಯಿಂದ ತೊಂದರೆ ಉಂಟಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಸಾಕಷ್ಟು ಆವಾಂತರ ಸೃಷ್ಟಿ ಮಾಡಿದೆ.

 

 

ಇನ್ನು ತುಮಕೂರು ನಗರದ ಸದಾಶಿವನಗರದ ಮೇಲೆ ಕೋಟೆ ಮುಖ್ಯರಸ್ತೆಯಲ್ಲಿ ರಾಜಕಾಲುವೆಯಿಂದ ತುಂಬಿದ ನೀರು ರಸ್ತೆ ತುಂಬಾ ಹರಿದು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ಇದೇ ಸಂದರ್ಭದಲ್ಲಿ ನೀರು ರಸ್ತೆಯಲ್ಲಿ ಹರಿದ ಕಾರಣ ಹಾವುಗಳು ರಸ್ತೆಯಲ್ಲೆಲ್ಲ ಸಂಚಾರ ಮಾಡುವ ಮೂಲಕ ಸಾರ್ವಜನಿಕರಿಗೆ ಭಯಭೀತಿಯಲನನ್ನು ಉಂಟುಮಾಡಿದೆ ಇನ್ನು ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದಿದ್ದು ಹಾವುಗಳು ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯ ಸರಿಯಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಗೂ ಸಹ ಇದೆ ಸದಾಶಿವನಗರದ ಮೆಳೆ ಕೋಟೆ ಮುಖ್ಯರಸ್ತೆಯಲ್ಲಿ ರಸ್ತೆ ತುಂಬಾ ಮಳೆ ನೀರು ಹರಿದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ ಇದರಿಂದ  ಸಾರ್ವಜನಿಕರು ಹೈರಾಣಾಗಿದ್ದಾರೆ

 

ಇನ್ನು ತುಮಕೂರು ನಗರ ಸ್ಮಾರ್ಟ್ ಸಿಟಿ ಎಂದೇ ಹೆಸರುಗಳಿಸಿದ್ದರು ಸಹ ಸಾಕಷ್ಟು ರಾಜಕಾಲುವೆಗಳು ಒತ್ತುವರಿಯಾಗಿವೆ ಮಳೆ ಯಿಂದ ಬರುವ ನೀರು ಸರಾಗವಾಗಿ ರಾಜಕಾಲುವೆಯಲ್ಲಿ ಹರಿಯದೆ ರಸ್ತೆ ತುಂಬಿ ಹರಿಯುತ್ತಿದ್ದು ಸ್ಮಾರ್ಟ್ ಸಿಟಿಯ ಹಾಗೂ ಮಹಾನಗರಪಾಲಿಕೆಯ ಅವೈಜ್ಞಾನಿಕ ಕಾಮಗಾರಿ ಗಳು ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version