ರೋಟರಿ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ.
ಶ್ರೀನಿವಾಸಪುರ_ಶ್ರೀನಿವಾಸಪುರದ ಯಲ್ದೂರು ನಲ್ಲಿ ರೋಟರಿ ವತಿಯಿಂದ 21-05-2022 ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆಗೊಂಡಿದೆ. ಯಲ್ದೂರು ಶ್ರೀನಿವಾಸ್ ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರಿನ ಹೆಸರಾಂತ ಗ್ಲೋಬಲ್ ಬ್ರೆಸ್ಟ್ ಅಂಡ್ ಪ್ರಾಸ್ಟೇಟ್ ಫೌಂಡೇಶನ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಿ. ಐ. ಎಫ್ ಫೌಂಡೇಶನ್, ಶ್ರೀ ವೆಂಕಟೇಶ್ವರ ನರ್ಸಿಂಗ್ ಹೋಮ್ ಶ್ರೀನಿವಾಸಪುರ (ಡಾ. ವೆಂಕಟಾಚಲ), ಕೆ.ಪಿ.ಸಿ.ಸಿ ವೈದ್ಯ ಘಟಕ,ರೋಟರಿ ಕ್ಲಬ್ ಆಫ್ ಲೇಕ್ ವರ್ಲ್ಡ್ ಬೆಂಗಳೂರು, ರೋಟರಿ ಕ್ಲಬ್ ಅಫ್ ಕಂಟೋನ್ಮೆಂಟ್ ಬೆಂಗಳೂರು, ರೋಟರಿ ಕ್ಲಬ್ ಹಲಸೂರು ಬೆಂಗಳೂರು, ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಹೊಸಕೋಟೆ ವತಿಯಿಂದ ಬೃಹತ್ ಆರೋಗ್ಯ ಶಿಬಿರ ನಡೆಸಲಾಗುತ್ತಿದ್ದು.
ಬೃಹತ್ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರಗೆ ಸ್ತನ ಕ್ಯಾನ್ಸರ್ ಬಗ್ಗೆ ತಿಳುವಳಿಕೆ, ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಪರೀಕ್ಷೆ ,ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ತಿಳುವಳಿಕೆ ,ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ ,ಉಚಿತ ವೈದ್ಯಕೀಯ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಜ್ಞರು ಶಿಬಿರದಲ್ಲಿ ಹಾಜರಿರಲಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೃಹತ್ ಆರೋಗ್ಯ ಶಿಬಿರದಲ್ಲಿ ಹಲವರು ಹೆಸರಂತ ನುರಿತ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.