ಆರ್ಕೆಸ್ಟ್ರಾ ಕಲಾವಿದರನ್ನು ದಾರಿತಪ್ಪಿಸಲು ಹೊರಟಿದ್ದನಾ…….? ಮಾಲೀಕ.
ತುಮಕೂರು_ಕಲ್ಪತರು ನಾಡು ತುಮಕೂರು ಕಲೆಗಳ ತವರೂರು ಎಂದು ಹೆಸರುವಾಸಿಯಾಗಿದೆ ಇನ್ನೂ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ಕಲಾ ತಂಡಗಳು ಜಿಲ್ಲೆಯ ಹೆಸರನ್ನು ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಮಕೂರಿನ ಹೆಸರನ್ನ ಹಸಿರಾಗಿ ಉಳಿಸುವಲ್ಲಿ ಸಾಕಷ್ಟು ಕಲಾವಿದರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಈ ಮೂಲಕ ತುಮಕೂರು ಸಾಕಷ್ಟು ಕಲಾತಂಡಗಳು, ವಿವಿಧ ಕಲೆಗಳು ಸೇರಿದಂತೆ ಸಾವಿರಾರು ಕಲಾವಿದರಿಗೆ ತವರುರಂತೆ ಇರುವ ತುಮಕೂರಿನಲ್ಲಿ ಆರ್ಕೆಸ್ಟ್ರಾ ಮಾಲೀಕರೊಬ್ಬರು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವ ಯುವತಿಯರನ್ನು ಫೋನ್ ಮೂಲಕ ಪುಸಲಾಯಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸುವ ಮೂಲಕ ಯುವತಿಯರ ಬಾಳಲ್ಲಿ ಆಟವಾಡುವ ಮೂಲಕ ಜಿಲ್ಲೆಯ ಕಲಾವಿದರ ಹೆಸರಿಗೆ ಮಸಿ ಬಳಿಯುವಂತಹ ಕೆಲಸವನ್ನು ತುಮಕೂರಿನ ಆರ್ಕೆಸ್ಟ್ರಾ ಮಾಲೀಕ ನಾಣಿ ಹಂದ್ರಾಳ (ಸಂಜಯ್ ಮೆಲೋಡಿಸ್)ಎಂಬುವವರು ಮಾಡುತ್ತಿದ್ದಾರೆ ಎಂದು ಕಲ್ಪತರು ನಾಡು ತುಮಕೂರು ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಸಂಘದ ಸದಸ್ಯರು ಇಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ತುಮಕೂರಿನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಸಂಘದ ಪದಾಧಿಕಾರಿಗಳು ಕರೋನ ಸಂಕಷ್ಟ ಕಾಲದಿಂದಲೂ ಕಲಾವಿದರ ಬದುಕು ಸಾಕಷ್ಟು ತೊಂದರೆಗೊಳಗಾಗಿದೆ , ಯಾವುದೇ ಸಭೆ ಸಮಾರಂಭ ಕಾರ್ಯಕ್ರಮ ಗಳಿಲ್ಲದ ಕಾರಣ ಕಲಾವಿದರ ಜೀವನ ದೂಸ್ತರವಾಗಿದೆ ಆದರೆ ಇಂತಹ ಸಮಯವನ್ನ ದುರುಪಯೋಗ ಪಡಿಸಿಕೊಳ್ಳಲು ಹೊರಟಿರುವ ಆರ್ಕೆಸ್ಟ್ರಾ ಮಾಲೀಕ ಸಂಜಯ್ ಎಂಬಾತ ಯುವತಿಯರನ್ನು ವಿವಿಧ ಜಿಲ್ಲೆಗಳಿಗೆ ಬರಬೇಕೆಂದು ಹಾಗೂ ತಾವು ಹೇಳಿದ ಅವರೊಂದಿಗೆ ಕಂಪನಿ ನೀಡಿ ಎಂದು ಯುವತಿಯರಿಗೆ ಹಣದ ಆಮಿಷವನ್ನು ಒಡ್ಡುವ ಮೂಲಕ ಸಂಕಷ್ಟದಲ್ಲಿರುವ ಯುವತಿಯರನ್ನು ತಪ್ಪುದಾರಿಗೆ ಎಳೆಯುವ ಹೊರಟಿದ್ದು ಘಟನೆ ತಡವಾಗಿ ನಮ್ಮ ಗಮನಕ್ಕೆ ಬಂದಿದೆ. ಈ ಮೂಲಕ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಕಲಾವಿದರಿಗೂ ಮಸಿಬಳಿಯುವಂತಹ ಕೆಲಸಕ್ಕೆ ಕೈ ಹಾಕಿದ್ದಾನೆ ಆದ್ದರಿಂದ ಕೂಡಲೇ ಆರ್ಕೆಸ್ಟ್ರಾ ಮಾಲೀಕ ಸಂಜಯ್ ಎಂಬಾತನ ವಿರುದ್ಧ ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ಕೆಸ್ಟ್ರಾ ಮಾಲಿಕ ಹಾಗೂ ಯುವತಿಯ ನಡುವಿನ ಫೋನ್ ಸಂಭಾಷಣೆಯ ಆಡಿಯೋ ಎನ್ನಲಾಗಿದೆ
ಇನ್ನು ಈ ಸಂಬಂಧ ಆಡಿಯೋ ಹಾಗೂ ವಿಡಿಯೋ ತುಣುಕುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುವ ಮೂಲಕ ಆರೋಪ ಮಾಡಿರುವ ಮುಖಂಡರು ಕೂಡಲೇ ಇಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ನೈಜ ಕಲಾವಿದರ ರಕ್ಷಣೆಗೆ ಮುಂದಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲ್ಪತರು ನಾಡು ತುಮಕೂರು ಆರ್ಕೆಸ್ಟ್ರ ಮಾಲೀಕರು ಹಾಗೂ ಕಲಾವಿದರ ಸಂಘದ ಅಧ್ಯಕ್ಷ ರಂಗರಾಜು ,ಉಪಾಧ್ಯಕ್ಷ ಮಧುಚಂದ್ರ, ಪ್ರಧಾನ ಕಾರ್ಯದರ್ಶಿ ನಾಗರಾಜು ಸೇರಿದಂತೆ ಹಲವು ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ವರದಿ_ಮಾರುತಿ ಪ್ರಸಾದ್ ತುಮಕೂರು