ಮಕ್ಕಳ ಮೇಲೆ ಮನಸೋ ಇಚ್ಚೆ ಹಲ್ಲೆ : ರಾಕ್ಷಸೀ ಪ್ರವೃತ್ತಿ ತೋರಿದ ವಸತಿಶಾಲೆ ನಿರ್ದೇಶಕ

ಮಕ್ಕಳ ಮೇಲೆ ಮನಸೋ ಇಚ್ಚೆ ಹಲ್ಲೆ : ರಾಕ್ಷಸೀ ಪ್ರವೃತ್ತಿ ತೋರಿದ ವಸತಿಶಾಲೆ ನಿರ್ದೇಶಕ

 

ತುಮಕೂರು_ಕುಡಿದ ಮತ್ತಿನಲ್ಲಿ‌ ವಸತಿ ಶಾಲೆಯ ಆಡಳಿತ ಮಂಡಳಿ‌ ನಿರ್ದೇಶಕ ವಸತಿ ಶಾಲೆ ಮಕ್ಕಳನ್ನು ಇಚ್ಛೆ ಥಳಿಸಿರು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

 

 

 

ತುಮಕೂರು ತಾಲ್ಲೂಕು ಮಲ್ಲಸಂದ್ರದ ವಿಶ್ವಭಾರತಿ ಶಾಲೆಯ ನಿರ್ದೇಶಕ ಭರತ್‌ ವಿದ್ಯಾರ್ಥಿಗಳ ಮೇಲೆ ರಾಕ್ಷಸೀ ಕೃತ್ಯ ಎಸಗಿರುವ ನಿರ್ದೇಶಕನಾಗಿದ್ದಾನೆ. ಕುಡಿದ ಮತ್ತಿನಲ್ಲಿ ಭರತ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದು ಓರ್ವ ವಿದ್ಯಾರ್ಥಿಯ ಕೈ ಕೂಡ ಮುರಿದಿದೆ,ಕೆಲ ಮಕ್ಕಳ ಮೈಮೇಲೆ ಬಾಸುಂಡೆ ಬಂದಿವೆ ಇವನ ರಾಕ್ಷಸೀ ಕೃತ್ಯಕ್ಕೆ  ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

 

 

 

ವಿಶ್ವಭಾರತಿ ವಸತಿ ಶಾಲೆ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ನಡೆಯುತ್ತಿದೆ ಎಸ್‌ಸಿ, ಎಸ್‌ಟಿ ಮಕ್ಕಳಿಗೆ ಇಲ್ಲಿ ಸಂಪೂರ್ಣ ಉಚಿತ ವಸತಿ ಶಿಕ್ಷಣ ನೀಡಲಾಗುತ್ತದೆ. ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಇದ್ದರೂ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿ ಓದಲು ಇಷ್ಟಪಡುವುದಿಲ್ಲ. ಚಿತ್ರದುರ್ಗ, ಹಾವೇರಿ, ದಾವಣಗೆರೆ ಭಾಗದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕನ ಆಟಾಟೋಪಕ್ಕೆ ವಿದ್ಯಾರ್ಥಿಗಳು ತತ್ತರಿಸಿ ಹೋಗಿದ್ದಾರೆ.

 

 

 

 

ವಸತಿ ಶಾಲೆಯ ಕಾರ್ಯದರ್ಶಿ ಮೂರ್ತಿ ಅವರ ಪುತ್ರ ಹಾಗೂ ಶಾಲೆಯ ನಿರ್ದೇಶಕನೂ ಆದ ಭರತ್‌ ವರ್ತನೆ ಮಿತಿ ಮೀರಿದ್ದು, ಕುಡಿದು ಬಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿಗಳನ್ನು ಎಬ್ಬಿಸಿ ಮನಸೋ ಇಚ್ಛೆ ಥಳಿಸಿದ್ದಾನೆ. ಕಾರಣ ಇಲ್ಲದೆಯೇ ಬೆಲ್ಟ್ ಮತ್ತು ದೊಣ್ಣೆಯಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ತೊಡೆ, ಮೈ-ಕೈಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಬಾಸುಂಡೆ ಬಂದಿದೆ. ಓರ್ವ ವಿದ್ಯಾರ್ಥಿಯ ಕೈ ಕೂಡ ಮುರಿದು ಹೋಗಿದೆ.

 

 

 

ಪ್ರತಿದಿನ ಮದ್ಯರಾತ್ರಿವಿದ್ಯಾರ್ಥಿಗಳ ಕೋಣೆ ಹೊಕ್ಕಿದ್ದ ಭರತ್, ನಾನು ಬಂದರೂ ಯಾಕೆ ನೀವು ಎದ್ದೇಳಲ್ಲ. ನಾನಂದ್ರೆ ಗೌರವ ಇಲ್ವಾ ಎಂದು ಹೇಳಿ ಏನೂ ಅರಿಯದ ಪುಟ್ಟ ಬಾಲಕರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾನೆ. ಕೂಗಿಕೊಂಡರೂ ಬಾಯಿ ಮುಚ್ಚಿ ಹೊಡೆದಿದ್ದಾನೆ. ಅದಲ್ಲದೇ ತನ್ನ ಕಾರು ತೊಳೆಯುವಂತೆ ಭರತ್‌ ವಿದ್ಯಾರ್ಥಿಗಳಿಗೆ ಪ್ರತಿ ಬಾರಿಯೂ ಪೀಡಿಸುತ್ತಿದ್ದ, ಸರಿಯಾಗಿ ವಾಹನ ತೊಳೆಯದಿದ್ದರೆ ಹೊಡೆಯುತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

 

 

 

ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಭರತ್ ತಲೆ ಮರೆಸಿಕೊಂಡಿದ್ದಾನೆ ಸ್ತಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು,ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version