ಸಾರ್ವಜನಿಕರ ಬಲಿಗಾಗಿ ಕಾಯುತ್ತಿರುವ ಅರಣ್ಯ ಇಲಾಖೆ ಕಾಂಪೌಂಡ್ ಗೋಡೆ.
ತುಮಕೂರು_ಕಳೆದ 5 ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತುಮಕೂರಿನ ಬನಶಂಕರಿ ಬಳಿ ಇರುವ ಅರಣ್ಯ ಇಲಾಖೆ ಕಾಂಪೌಂಡ್ ಗೋಡೆ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು ಯಾವುದೇ ಕ್ಷಣದಲ್ಲಾದರೂ ಕಾಂಪೌಂಡ್ ಗೋಡೆ ಕುಸಿಯುವ ಹಂತ ತಲುಪಿದ್ದು ಸಾರ್ವಜನಿಕರ ಬಲಿಗಾಗಿ ಕಾದು ಕುಳಿತಿದೆ.
ಇನ್ನು ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಇದ್ದ ಕಾಂಕ್ರೀಟ್ ಚರಂಡಿ ಸಹ ಸಂಪೂರ್ಣ ಕುಸಿದಿದ್ದು ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ಹಾಗೂ ಪಕ್ಕದಲ್ಲಿ ಕುಡಿಯುವ ಕುಡಿಯುವ ನೀರಿನ ಫಿಲ್ಟರ್ ಘಟಕ ಸಹ ಇದ್ದು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುಡಿಯುವ ನೀರಿಗಾಗಿ ಆಗಮಿಸುತ್ತಿದ್ದಾರೆ.
ಆದರೆ ಸಂಪೂರ್ಣವಾಗಿ ಕುಸಿಯುವ ಹಂತ ತಲುಪಿರುವ ಅರಣ್ಯ ಇಲಾಖೆಯ ಕಾಂಪೌಂಡ್ ಗೋಡೆ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಇನ್ನು ಪ್ರತಿನಿತ್ಯ ಕುಡಿಯುವ ನೀರಿಗೆ ಆಗಮಿಸುವ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಾರ್ವಜನಿಕರು ಸಹ ಆಕ್ರೋಶ ಹೊರಹಾಕಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಗಮನಹರಿಸುವರೆ ಕಾದುನೋಡಬೇಕಿದೆ.
ವರದಿ_ ಮಾರುತಿ ಪ್ರಸಾದ್ ತುಮಕೂರು.