ವೈದ್ಯ ವೃತ್ತಿಯನ್ನು ಬಿಟ್ಟು ಜನರ ಸೇವೆ ಮಾಡಲು ಬಂದಿರುವ ಪ್ರೀತನ್ ಗೆ ನಿಮ್ಮ ಸ್ವಾಭಿಮಾನದ ಮತ ನೀಡಿ: ಬಿ ವೈ ವಿಜೇಯೇಂದ್ರ
ಹನೂರು :- ವಿಧಾನಸಭಾ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ದಿವಂಗತ ಎಚ್ ನಾಗಪ್ಪ ರವರ ಸುಪುತ್ರ ಡಾ ಪ್ರೀತನ್ ನಾಗಪ್ಪ ರವರ ಪರವಾಗಿ ಪ್ರಚಾರಕ್ಕೆ ಇಳಿದ ಬಿ ವೈ ವಿಜಯೇಂದ್ರ ಶುಕ್ರವಾರ ಬೆಳಿಗ್ಗೆ 10: 30 ರ ವೇಳೆಗೆ ಎಚ್ ನಾಗಪ್ಪರವರ ಸ್ವಗ್ರಾಮ ಕಾಮಗೆರೆಯಲ್ಲಿರುವ ಮನೆಗೆ ತೆರಳಿ ನಾಗಪ್ಪನವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಆರ್ ಎಸ್ ದೊಡ್ಡಿಯಿಂದ ತೆರೆದ ವಾಹನದಲ್ಲಿ ಮ ಮ ಬೆಟ್ಟದ ಮುಖ್ಯರಸ್ತೆಯಲ್ಲಿ ಬಿಜೆಪಿ ಪಕ್ಷದ ಸಾವಿರಾರು ಬೆಂಬಲಿಗರು ಡೋಲು ತಮಟೆ ವಾದ್ಯ ಗೋಷ್ಠಿಯ ಜೊತೆಗೆ ಕುಣಿದು ಕುಪ್ಪಳಿಸುತ್ತ ಬಿಜೆಪಿ ಪಕ್ಷದ ಪರ ಘೋಷಣೆ ಕೂಗುತ್ತ ಹನೂರು ಪಟ್ಟಣದ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಡಾ ಪ್ರೀತನ್ ನಾಗಪ್ಪರವರು ಮಾಲಾರ್ಪಣೆ ಮಾಡಿದರು ನಂತರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ರವರು ವೈದ್ಯ ವೃತ್ತಿಯನ್ನು ಬಿಟ್ಟು ಜನಸೇವೆ ಮಾಡಲು ಬಂದಿರುವ ಪ್ರೀತನ್ ಗೆ ನಿಮ್ಮ ಸ್ವಾಭಿಮಾನದ ಮತವನ್ನು ನೀಡಲು ಕೋರಿ ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಹಾಗೂ ಹನೂರು ವಿಧಾನಸಭಾ ಕ್ಷೆತ್ರದಲ್ಲಿ ಪ್ರೀತನ್ ನಾಗಪ್ಪ ಗೆದ್ದೇ ಗೆಲ್ಲುತ್ತಾರೆ ಆಗಾಗಿ ಇವತ್ತು ನೆರೆದಿರುವಂತ ಸ್ವಾಭಿಮಾನಿ ಜನರು ಮೇ 10 ನೇ ತಾರೀಕು ಬಿಜೆಪಿ ಪಕ್ಷದ ಕಮಲದ ಗುರುತಿನ ಚಿಹ್ನೆಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ದಿವಂಗತ ಎಚ್ ನಾಗಪ್ಪನವರು ಹನೂರು ಕ್ಷೆತ್ರದ್ಯಾoತ ಅಪಾರವಾದ ಜನಸೇವೆಯನ್ನು ಮಾಡಿದ್ದಾರೆ ಈ ಬಾರಿ ಶಿಕಾರಿಪುರದ ರೀತಿ ಅಭಿವೃದ್ಧಿಯತ್ತ ಸಾಗಬೇಕೆಂದರೆ ಹನೂರಿನಲ್ಲಿ ದಿ ಹೆಚ್ ನಾಗಪ್ಪ ಅವರ ಸುಪುತ್ರ ಪ್ರೀತನ್ ನಾಗಪ್ಪನವರನ್ನು ಈ ಬಾರಿ ಬೆಂಬಲಿಸಿ ಮತ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು ಇದೆ ಸಂದರ್ಭದಲ್ಲಿ ಹನೂರು ಕ್ಷೆತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಕ್ಷೆತ್ರದದ್ಯಾoತ ಸಾಮಾಜಿಕ ಸೇವೆ ಮತ್ತು ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಮೂವರು ಬಿಜೆಪಿ ಮುಖಂಡರುಗಳಾದ.ವೆಂಕಟೇಶ್. ನಿಶಾಂತ್. ದತ್ತೆಶ್ ರವರು ಎರಡನೇ ಬಾರಿ ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ನವರ ಕಾರ್ಯಕ್ರಮದಲ್ಲಿ ಗೈರಾಗಿದ್ದಾರೆ ಈ ಮೂರು ಬಿಜೆಪಿ ಮುಖಂಡರುಗಳು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ಕೆಲವು ದಿನಗಳು ಇರುವುದರಿಂದ ಬಿಜೆಪಿ ಅಭ್ಯರ್ಥಿ ಪ್ರೀತಂ ನಾಗಪ್ಪ ಪರವಾಗಿ ಮತ ಕೇಳಲು ಸಹಕರಿಸಲಿಲ್ಲವೆಂದರೆ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರದಾನವಾಗಬಹುದು
ವರದಿ :- ನಾಗೇಂದ್ರ ಪ್ರಸಾದ್