ಹನೂರು ಪಟ್ಟಣದಲ್ಲಿ ಹಾಗೂ ಚಿಗತಪುರ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ

ಹನೂರು ಪಟ್ಟಣದಲ್ಲಿ ಹಾಗೂ ಚಿಗತಪುರ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ

ಹನೂರು :-ತಾಲೂಕಿನ ಚಿಗತಾಪುರ ಹಾಗೂ ಆರ್ ಎಸ್ ದೊಡ್ಡಿಯ ಇದ್ಗ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸರಳವಾಗಿ ರಂಜಾನ್ ಹಬ್ಬ ಆಚರಣೆ ಮಾಡಿದ್ದಾರೆ.

 

 

 

 

ಈ ಆಚರಣೆಯು ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು, ಹಸಿವಿನ ಮಹತ್ವ ಮತ್ತು ಅದೃಷ್ಟ. ಸಂಪಾದನೆ ಮಾಡಲು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ. ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ.ಸೋದರತೆ ಬಾತೃತ್ವ ಸಾಮರಸ್ಯವನ್ನು ಸಾರುವ ಹಬ್ಬ ಇದಾಗಿದೆ ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ.

 

 

 

 

 

 

 

 

 

 

 

 

ಈದ್-ಉಲ್-ಫಿತರ್​ನ ಈ ದಿನ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.ಮುಸ್ಲಿಮರ ಪವಿತ್ರ ಹಬ್ಬವೆಂದೆ ಖ್ಯಾತಿ ಹೊಂದಿರುವ ರಂಜಾನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

 

 

 

 

 

 

 

 

 

 

 

ತಿಂಗಳ 30 ದಿನ ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಮ್ಮ ಹಿಂದಿನ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಹನನ್ನು ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಈದ್-ಉಲ್-ಫಿತರ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.

 

 

 

 

 

 

 

 

 

 

 

 

ಇದೆ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೆತ್ರದ ಜನಪ್ರಿಯ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ರವರು ರಂಜಾನ್ ಹಬ್ಬದ ಪ್ರಯುಕ್ತ ಆರ್ ಎಸ್ ದೊಡ್ಡಿಯ ಈದ್ಗ ಮೈದಾನದ ಸ್ಥಳಕ್ಕೆ ಆಗಮಿಸಿ ಅಲ್ಲಾಹ್ ರಿಗೆ ಪ್ರಾರ್ಥಿಸಿ ಶುಭ ಕೊರಿದ್ದಾರೆ

 

 

 

 

ವರದಿ:- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version