ಕಾಂಗ್ರೆಸ್ ಗೆ ಮತ ನೀಡಿ ನರೇಂದ್ರ ಕೈ ಬಲ ಪಡಿಸಿ : ಸಿದ್ದರಾಮಯ್ಯ
ಹನೂರು : ಈ ವಿಧಾನಸಭಾ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು ಪ್ರಜಾಪ್ರಭುತ್ವ ಉಳಿಸುವಿಕೆ ಸಂವಿಧಾನ ರಕ್ಷಣೆ, ಭ್ರಷ್ಟಾಚಾರ ತೊಲಗಿಸಲು ದುರಾಡಳಿತ ಕಿತ್ತೊಗೆಯಲು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ನಿವಾಸದಲ್ಲಿ ಶಾಸಕ ಆರ್ ನರೇಂದ್ರ ರವರ ಪರ ಬೆಂಬಲಿಸಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಬರಲಿದ್ದು ಹನೂರು ಕ್ಷೇತ್ರದ ಮತದಾರರು ಶಾಸಕ ಆರ್ ನರೇಂದ್ರರವರಿಗೆ ಮತ ನೀಡಿ ಆಶೀರ್ವದಿಸಬೇಕು.
ವೈಯಕ್ತಿಕವಾಗಿ ಹನೂರು ಕ್ಷೇತ್ರದ ಅಭಿವೃದ್ಧಿಗೆ ಇದುವರೆಗೂ ಶ್ರಮಿಸಿದ್ದೇನೆ ಮುಂದೆಯೂ ಶ್ರಮಿಸುತ್ತೇನೆ.ನರೇಂದ್ರ ರವರಿಗೆ ಕೊಡುವ ಒಂದೊಂದು ಮತವು ಸಿದ್ದರಾಮಯ್ಯನವರಿಗೆ ಕೊಟ್ಟಂತಾಗುತ್ತದೆ. ಜೆಡಿಎಸ್ ಗೆ ಮತ ಕೊಡುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ
ಜೆಡಿಎಸ್ ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜೆಡಿಎಸ್ ಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ ಯಾವುದೇ ಪಕ್ಷದ ಜೊತೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ.
ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಡಿ ಎಲ್ಲರೂ ಕೂಡ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನರೇಂದ್ರ ರವರ ಕೈ ಬಲಪಡಿಸಿದರೆ ನನ್ನ ರಾಜಕೀಯ ಶಕ್ತಿ ಹೆಚ್ಚಾಗುತ್ತದೆ ಎಂದು ಮನವಿ ಮಾಡಿದರು.
ಅಪಪ್ರಚಾರ ಗಳಿಗೆ ಕಿವಿ ಕೊಡಬೇಡಿ ನಾನು ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜೊತೆ ಇದ್ದೇನೆ, ದಿ ರಾಜುಗೌಡರವರ ಸುಪುತ್ರ ನರೇಂದ್ರ ಅವರು ನೇರ ನುಡಿಯ ಆದರ್ಶ ರಾಜಕಾರಣಿ ಆದ್ದರಿಂದಲೇ ಮೂರು ಬಾರಿ ಜಯಶೀಲರಾಗಿ ನಾಲ್ಕನೇ ಬಾರಿ ಸ್ಪರ್ಧಿಸಿದ್ದಾರೆ. ಚುನಾವಣೆಗಳಲ್ಲಿ ಅಪಪ್ರಚಾರ ಮಾಡುವುದು
ಸಾಮಾನ್ಯ ಹನೂರು ಕ್ಷೇತ್ರದ ಮತದಾರರು ಯಾವುದೇ ಅಪಪ್ರಚಾರ ಗಳಿಗೆ ಕಿವಿ ಕೊಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕರಿಗೆ ಆಶೀರ್ವದಿಸಬೇಕು ಎಂದು ತಿಳಿಸಿದರು.
ವರದಿ :- ನಾಗೇಂದ್ರ ಪ್ರಸಾದ್