ಬಿಜೆಪಿ ಅಭ್ಯರ್ಥಿ ಪ್ರೀತನ್ ಪರ ಸಹೋದರಿ ಪವನ ನಾಗಪ್ಪ ಮತಯಾಚನೆ 

ಬಿಜೆಪಿ ಅಭ್ಯರ್ಥಿ ಪ್ರೀತನ್ ಪರ ಸಹೋದರಿ ಪವನ ನಾಗಪ್ಪ ಮತಯಾಚನೆ 

ಹನೂರು: ಮಾಜಿ ಸಚಿವರು ಸರಳ ಸಜ್ಜನಿಕೆಯ ರಾಜಕಾರಣಿ ದಿ.ಹೆಚ್.ನಾಗಪ್ಪ ಅವರ ಹಿರಿಯ ಪುತ್ರಿ ಪವನ ನಾಗಪ್ಪ ಅವರು ಸಹೋದರ ಡಾ. ಪ್ರೀತನ್ ನಾಗಪ್ಪ ಪರ ಪಟ್ಟಣದ 1, 2,4 ನೇ ವಾರ್ಡ್ಗಳಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡರು.

 

 

 

 

 

 

 

 

 

ತಮ್ಮ ಸಹೋದರ ಡಾ.ಪ್ರೀತನ್ ನಾಗಪ್ಪ ಸರಳ ಸಜ್ಜನ ವ್ಯಕ್ತಿ ಇವರನ್ನು ಜಯಶೀಲರನ್ನಾಗಿ ಮಾಡಿದರೆ ನಮ್ಮ ತಂದೆಯಂತೆ ಜನರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ್ತಿದ್ದಾರೆ. ಅವರನ್ನು ಈ ಬಾರಿ ಗೆಲ್ಲಿಸಿಕೊಡಬೇಕೆಂದು ಕೈ ಮುಗಿದು ಮನವಿ ಮಾಡಿದರು.

 

ತಂದೆ ತಾಯಿ ತದ್ರೂಪಿ ರೂಪ ನಾಗಪ್ಪ ಸ್ಮರಣೆ:

ಮತಯಾಚನೆಗೆ ತೆರಳಿದ ಪವನ ನಾಗಪ್ಪ ಅವರು ಮತಯಾಚನೆಗೆ ತೆರಳಿದ ವೇಳೆ ದಿ. ಹೆಚ್.ನಾಗಪ್ಪ ಹಾಗೂ ಪರಿಮಳ ನಾಗಪ್ಪ ಅವರ ಪ್ರತಿರೂಪದಂತೆ ಇದ್ದ ಪವನ ನಾಗಪ್ಪ ಅವರನ್ನು ಹಿರಿಯರು ಕಂಡೊಡನೆ ನಾಗಪ್ಪ ಅವರ ಮಗಳಾ ಎಂದು ಉದ್ಘರಿಸಿ ನಮಸ್ಕರಿಸುತ್ತಿದ್ದು ಕಂಡು ಬಂದಿತು.

 

 

 

 

 

 

 

ತುಂತುರು ಮಳೆಯಲ್ಲಿಯೂ ಮತಯಾಚನೆ: ಇಳಿ ಸಂಜೆ ಹೊತ್ತಲ್ಲಿ ಸುರಿದ ತುಂತುರು ಮಳೆಯಲ್ಲಿಯೂ ಕೂಡ ಮತಯಾಚನೆ ಮಾಡಿದರು.

 

 

 

 

 

 

 

 

 

 

ಈ ಸಂದರ್ಭದಲ್ಲಿ ಮುಖಂಡರುಗಳಾದ ಸುಬ್ಬಣ್ಣ,ಬಸವರಾಜು, ನಂಜಪ್ಪ, ನಾಮ ನಿರ್ದೇಶಿತ ಸದಸ್ಯ ಪುಟ್ಟರಾಜು, ಯುವ ಮುಖಂಡ ಜಗದೀಶ್, ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version