ಸಾರ್ವಜನಿಕವಾಗಿ ನಿಂದಿಸಿಕೊಂಡ ತುಮಕೂರು ಸಂಸದರು ಹಾಗೂ ಗುಬ್ಬಿ ಶಾಸಕರು
ತುಮಕೂರಿನ ಸಂಸದ ಜಿ.ಎಸ್ ಬಸವರಾಜು ಹಾಗೂ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಸಾರ್ವಜನಿಕವಾಗಿ ಪರಸ್ಪರ ನಿಂದಿಸಿ ಕೊಂಡು ಸಾರ್ವಜನಿಕರಿಗೆ ಆಹಾರವಾಗಿದ್ದಾರೆ.
ಇಂದು ಸಂಸದ ಬಸವರಾಜು ಹಾಗೂ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ರವರು ಗುಬ್ಬಿ ತಾಲೂಕಿನ ಚೇಳೂರು ಸಮೀಪದ ನಂದಿಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ವತಿಯಿಂದ ನಿರ್ಮಿಸಲಾಗಿದ್ದ ನೂತನ ವಿದ್ಯುತ್ನ ಎಂಎಸ್ಎಸ್ ಸ್ಟೇಷನ್ ಉದ್ಘಾಟಿಸಲು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಯಕರೊಬ್ಬರಿಗೆ ಸಂಸದ ಜಿ ಎಸ್ ಬಸವರಾಜು ಅವರು ಚೆಕ್ ಡ್ಯಾಮ್ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಗುಬ್ಬಿ ತಾಲೂಕು ಚೇಳುರಿಗಾಗಿ ಮೀಸಲಿಟ್ಟಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸದರು ಹೇಳಿದ ಹೇಳಿಕೆ ಗಮನಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ಕೂಡಲೇ ರೊಚ್ಚಿಗೆದ್ದು ಸಂಸದ ಜಿ ಎಸ್ ಬಸವರಾಜು ಮೇಲೆ ವಾಕ್ ಸಮರಕ್ಕೆ ಮುಂದಾದರು.
ಇದೆ ಸಂದರ್ಭದಲ್ಲಿ ಇಬ್ಬರೂ ನಾಯಕರು ಪರಸ್ಪರ ಏಕವಚನದಲ್ಲಿ ನಿಂದಿಸುವ ಮೂಲಕ ಸಾರ್ವಜನಿಕರಿಗೆ ಆಹಾರವಾಗಿದ್ದಾರೆ .
ಇನ್ನು ಗುಬ್ಬಿ ಶಾಸಕ ಶ್ರೀನಿವಾಸ್ ರವರು ಕ್ಷೇತ್ರದ ಜನತೆಗೆ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿರುವ ದಾಗಿ ಸಂಸದ ಜಿ ಎಸ್ ಬಸವರಾಜುರವರಿಗೆ ತಿಳಿಸಿದರು ಇದಕ್ಕೆ ಕುಪಿತಗೊಂಡ ಸಂಸದ ಜಿ.ಎಸ್ ಬಸವರಾಜು ರವರು ಕೂಡ ಸಾರ್ವಜನಿಕವಾಗಿ ಪರಸ್ಪರವಾಗಿ ನಿಂದಿಸಿ ಕೊಂಡಿದ್ದಾರೆ.
ಅದೇನೇ ಇರಲಿ ತುಮಕೂರು ಜಿಲ್ಲೆಯ ಇಬ್ಬರು ಹಿರಿಯ ಮುಖಂಡರು ಸಾರ್ವಜನಿಕ ಜೀವನದಲ್ಲಿ ಇದ್ದ ಇಬ್ಬರು ನಾಯಕರು ತಾವು ಜನಪ್ರತಿನಿಧಿಗಳು ಎನ್ನುವುದನ್ನು ಮರೆತು ಪರಸ್ಪರ ನಿಂದಿಸಿ ಕೊಂಡಿದ್ದಾರೆ. ಅದೇನೇ ಇರಲಿ ಇಬ್ಬರು ನಾಯಕರ ವಾಕ್ ಸಮರದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.