ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರ ವರ್ತನೆ ನಾಚಿಕೆಗೇಡು: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರ ವರ್ತನೆ ನಾಚಿಕೆಗೇಡು: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ವಿರೋಧ ಪಕ್ಷ ಸದಸ್ಯರ ಅನುಚಿತ ವರ್ತನೆ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವು ವಿರೋಧ ಪಕ್ಷ ನಾಯಕರ ವರ್ತನೆ ಅಸಹ್ಯಕರವಾಗಿತ್ತು. ಪರಿಸ್ಥಿತಿಯನ್ನು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಸದಸ್ಯರು ಭಾವಿಸಿದಂತಿದೆ. ಅರಾಜಕತೆ ಎತ್ತಿ ಕಾಣುತ್ತಿತ್ತು. ಕಳೆದ ಮಂಗಳವಾರವನ್ನು ಸಂಸತ್ತಿನ ಇತಿಹಾಸದ ಕರಾಳ ದಿನವೆಂದು ದಾಖಲಿಸಲಾಗುವುದು ಎಂದು ರಾಜ್ಯಸಭಾ ಸಭಾಪತಿಗಳು ಅತ್ಯಂತ ನೋವಿನಿಂದ ಹೇಳಿಕೊಂಡಿದ್ದರು ಎಂದಿದ್ದಾರೆ.

 

ಆ ಎರಡು ದಿನಗಳಲ್ಲಿ ನಡೆದ ಅತ್ಯಂತ ನಾಚಿಕೆಗೇಡಿನ, ನೋವಿನ ಮತ್ತು ಯಾತನಾಮಯ ಘಟನೆಗಳು ಪ್ರಜ್ಞಾವಂತ ಮಂದಿ ತಲೆತಗ್ಗಿಸುವಂತೆ ಮಾಡಿದೆ ಎಂದು ಕಾಗೇರಿ ಹೇಳಿದರು. ಕಾಗೇರಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಅಧಿವೇಶನದ ಸಂಪೂರ್ಣ ಅವಧಿಗೆ ಪೆಗಾಸಸ್ ಕುರಿತು ಚರ್ಚೆಗೆ ಸರ್ಕಾರ ಏಕೆ ಅವಕಾಶ ನೀಡಲಿಲ್ಲ? ಸರ್ಕಾರವು ತಪ್ಪಿತಸ್ಥನಾದ ಕಾರಣವೇ? ಸಭಾಪತಿ ವೆಂಕಯ್ಯ ನಾಯ್ಡು ಅವರದ್ದು ಮೊಸಳೆ ಕಣ್ಣೀರು ಎಂದು ಖರ್ಗೆ ಟೀಕಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version